ಅನ್ನಪೂರ್ಣ ಸ್ಟುಡಿಯೋದಲ್ಲಿ ಚೈತನ್ಯ-ಶೋಭಿತಾ ಕಲ್ಯಾಣ; 8.15ಕ್ಕೆ ಮುಹೂರ್ತ ಫಿಕ್ಸ್‌ ಆಗಲು ಕಾರಣವೇನು?

Dec 4, 2024, 6:26 PM IST

ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನ ಅಮೇರಿಕ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತನ್ನ ಮಾಜಿ ಬಾಯ್​​ಫ್ರೆಂಡ್ ಮತ್ತವನ ಗೆಳತಿಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪ ಆಲಿಯಾ ಮೇಲಿದೆ. ಈ ಆರೋಪ ಸಾಬೀತಾದ್ರೆ ಆಲಿಯಾ ಫಕ್ರಿಗೆ ಅಮೇರಿಕ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಯಾಗೋದು ಫಿಕ್ಸ್. ಕಳೆದ ಸಾರಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ರು. ಈ ಸಾರಿ ಅಂಥದ್ದೇ ಘಟನೆ  ನಡೆಯೋದನ್ನ ತಪ್ಪಿಸೋಕೆ ಬಿಗ್ ಬಾಸೇ ಚೈತ್ರಾ ಕುಂದಾಪುರನ ಮನೆಯಿಂದ ಆಚೆ ಕಳಿಸಿದ್ದಾರೆ. ಉದ್ಯಮಿ ಗೋವಿಂದರಾಜುಗೆ ವಂಚಿಸಿದ ಕೇಸ್​​ನಲ್ಲಿ ಚೈತ್ರಾ ಮೇಲೆ ಅರೆಸ್ಟ್ ವಾರೆಂಟ್ ಇಶ್ಯೂ ಆಗಿತ್ತು. ಸೋ ಬಿಗ್ ಬಾಸ್​ ಮನೆಯಿಂದ ಹೊರಬಂದು ಕೋರ್ಟ್ ಅಟೆಂಡ್ ಮಾಡಿದ್ದಾರೆ ಚೈತ್ರಾ. ಆಂಧ್ರದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ - ಶೋಭಿತಾ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೀತಾ ಇವೆ. ನಾಳೆ ಈ ತಾರಾಜೋಡಿಯ ಕಲ್ಯಾಣ ನಡೆಯಲಿದ್ದು ಟಾಲಿವುಡ್​ನ ಬಿಗ್ ಸ್ಟಾರ್​ಗಳೆಲ್ಲಾ ಭಾಗಿಯಾಗೋ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದಲೂ ನಾನಾ ಶಾಸ್ತ್ರಗಳು ನೆರವೇರಿದ್ದು ಫೋಟೋಗಳು ಎಲ್ಲರ ಮನಸು ಗೆಲ್ತಾ ಇವೆ.