
ಮುಂಬೈನಲ್ಲಿ ನಡೀತಿರೋ ವೇವ್ಸ್ ಶೃಂಗಸಭೆಯಲ್ಲಿ ಚಿತ್ರಲೋಕದ ಗಣ್ಯರೆಲ್ಲಾ ಭಾಗಿಯಾಗಿದ್ದಾರೆ. ಹಿರಿಕಿರಿಯ ತಾರೆಯರು ಭಾರತದ ಅತಿದೊಡ್ಡ ಸಿನಿಸಮ್ಮೇಳನದಲ್ಲಿ ಮಿಂಚ್ತಾ ಇದ್ದಾರೆ.
ಮುಂಬೈನಲ್ಲಿ ನಡೀತಿರೋ ವೇವ್ಸ್ ಶೃಂಗಸಭೆಯಲ್ಲಿ ಚಿತ್ರಲೋಕದ ಗಣ್ಯರೆಲ್ಲಾ ಭಾಗಿಯಾಗಿದ್ದಾರೆ. ಹಿರಿಕಿರಿಯ ತಾರೆಯರು ಭಾರತದ ಅತಿದೊಡ್ಡ ಸಿನಿಸಮ್ಮೇಳನದಲ್ಲಿ ಮಿಂಚ್ತಾ ಇದ್ದಾರೆ. ಕಳೆದ ಡಿಸೆಂಬರ್ನಲ್ಲಿ ವಿವಾಹವಾಗಿದ್ದ ನಾಗಚೈತನ್ಯ - ಶೋಭಿತಾ ದುಲಿಫಲಾ ಜೋಡಿ ಈ ಸಮ್ಮೇಳನದಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ. ಮದುವೆ ಬಳಿಕ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರೋ ಈ ನವಜೋಡಿ ಎಲ್ಲರ ಕಣ್ಣು ಕುಕ್ಕುವಂತೆ ಮಿಂಚ್ತಾ ಇದ್ದಾರೆ.
ಮಕ್ಕಳ ಜೊತೆಗೆ ಹ್ಯಾಟ್ರಿಕ್ ಹೀರೋ ಚಿಲಿಪಿಲಿ: ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ 'A for ಆನಂದ್' ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದ್ದು, ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿದ್ದಾರೆ. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಲಾಗಿದೆ. 'A for ಆನಂದ್' ಮಕ್ಕಳ ಸಿನಿಮಾವಾಗಿದ್ದು ಶಿವಣ್ಣ ಮೇಷ್ಟ್ರ ಪಾತ್ರದಲ್ಲಿ ಮಿಂಚ್ತಾ ಇದ್ದಾರೆ. ಘೋಸ್ಟ್ ಚಿತ್ರವನ್ನ ನಿರ್ದೇಶನ ಮಾಡಿದ್ದ ಶ್ರೀನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ.
ಅರ್ಜುನ್ ರೆಡ್ಡಿ ನೆನಪಿಸಿದ ವಿಜಯ್ ದೇವರಕೊಂಡ ಲುಕ್: ವಿಜಯ್ ದೇವರಕೊಂಡ ತಮ್ಮ ಕರೀಯರ್ನಲ್ಲಿ ಹಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಇದರಲ್ಲಿ ಸ್ಪೆಷಲ್ ಅನ್ನಿಸಿಕೊಂಡಿದ್ದು ‘ಅರ್ಜುನ್ ರೆಡ್ಡಿ’ ಸಿನಿಮಾ. ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಪ್ರೀತಿಗಾಗಿ ಸದಾ ಹಪಹಪಿಸುವ ಯುವಕನ ಪಾತ್ರದಲ್ಲಿ ಕಿಚ್ಚು ಹಚ್ಚಿದ್ರು. ಇದೀಗ ಒನ್ಸ್ ಅಗೈನ್ ರೌಡಿ ಅದೇ ಅವತಾರ ತಳೆದಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರ 'ಕಿಂಗ್ಡಮ್' ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು ಅರ್ಜುನ್ ರೆಡ್ಡಿ ಅವತಾರವನ್ನ ನೆನಪಿಸ್ತಾ ಇದೆ. ಜೆರ್ಸಿ ಖ್ಯಾತಿಯ ನಿರ್ದೇಶಕ ಗೌತಮ್ ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದು ಭಾಗ್ಯಶ್ರೀ ಬೋರ್ಸೆ ವಿಜಯ್ ಎದುರು ನಾಯಕಿಯಾಗಿ ಮಿಂಚಿದ್ದಾರೆ.