ಸೆ.30ಕ್ಕೆ ಪೊನ್ನಿಯನ್ ಸೆಲ್ವನ್ ಬಿಡುಗಡೆ: ತೆರೆ ಮೇಲೆ ಸಿಂಹಾಸನ ಕಿತ್ತಾಟದ ರೋಚಕ ಕಥೆ!

ಸೆ.30ಕ್ಕೆ ಪೊನ್ನಿಯನ್ ಸೆಲ್ವನ್ ಬಿಡುಗಡೆ: ತೆರೆ ಮೇಲೆ ಸಿಂಹಾಸನ ಕಿತ್ತಾಟದ ರೋಚಕ ಕಥೆ!

Published : Sep 22, 2022, 08:12 PM IST

ಹಿಸ್ಟಾರಿಕಲ್ ಸ್ಟೋರಿ. ಅದ್ಧೂರಿ ತಾರಾಗಣ. ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟ ನಿರ್ದೇಶಕರ ಸಾರಥ್ಯ. ಬಾಹುಬಲಿ ಸಿನಿಮಾವನ್ನೇ ಮೀರಿಸೋ ಮೇಕಿಂಗ್. ಆ ಸಿನಿಮಾವೇ ಪೊನ್ನಿಯಿನ್ ಸೆಲ್ವನ್. ಹೌದು, ಸ್ಟಾರ್ ಡೈರೆಕ್ಟರ್ ಮಣಿರತ್ನಂ ನಿರ್ದೇಶನದಲ್ಲಿ ಸಿದ್ಧವಾಗಿರೋ ಪೊನ್ನಿಯಿನ್ ಸೆಲ್ವನ್ ಸಿನಿಮಾ ಈಗ ನಿರೀಕ್ಷೆಯ ಬೆಟ್ಟವನ್ನೇ ಬೆಳೆಸಿದೆ.

ಹಿಸ್ಟಾರಿಕಲ್ ಸ್ಟೋರಿ. ಅದ್ಧೂರಿ ತಾರಾಗಣ. ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟ ನಿರ್ದೇಶಕರ ಸಾರಥ್ಯ. ಬಾಹುಬಲಿ ಸಿನಿಮಾವನ್ನೇ ಮೀರಿಸೋ ಮೇಕಿಂಗ್. ಆ ಸಿನಿಮಾವೇ ಪೊನ್ನಿಯಿನ್ ಸೆಲ್ವನ್. ಹೌದು, ಸ್ಟಾರ್ ಡೈರೆಕ್ಟರ್ ಮಣಿರತ್ನಂ ನಿರ್ದೇಶನದಲ್ಲಿ ಸಿದ್ಧವಾಗಿರೋ ಪೊನ್ನಿಯಿನ್ ಸೆಲ್ವನ್ ಸಿನಿಮಾ ಈಗ ನಿರೀಕ್ಷೆಯ ಬೆಟ್ಟವನ್ನೇ ಬೆಳೆಸಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಕಾರ್ತಿ, ತ್ರಿಶಾ, ಪ್ರಭು, ಶರತ್ ಕುಮಾರ್, ವಿಕ್ರಂ ಪ್ರಭು, ಪ್ರಕಾಶ್ ರಾಜ್ ಸೇರಿದಂತೆ ಬಹು ದೊಡ್ಡ ತಾರಾಬಳಗ ಇದೆ. ಆದ್ರೆ ಈಗ ಪೊನ್ನಿಯಿನ್ ಸೆಲ್ವನ್ ಬಗ್ಗೆ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಪೊನ್ನಿಯಿನ್ ಸೆಲ್ವನ್ನಲ್ಲಿ ಇಬ್ಬರು ಬ್ಯೂಟಿಫುಲ್ ಸುಂದರಿಯರು ಹೈಲೆಟ್. ಒಬ್ರು ಐಶ್ವರ್ಯ ರೈ ಆದ್ರೆ ಮತ್ತೊಬ್ರು ತ್ರಿಶಾ. ಮಹಾರಾಣಿಯರಂತೆ ಕಾಣೋ ಇವರಿಬ್ಬರಲ್ಲಿ ಐಶ್ವರ್ಯ ರೈ ನಂದಿನಿ ಅನ್ನೋ ರೋಲ್ ಮಾಡಿದ್ರೆ, ಇಳಯ ಪಿರಟ್ಟಿ ಕುಂದವೈ ದೇವಿ ಪಾತ್ರದಲ್ಲಿ ತ್ರಿಶಾ ಕೃಷ್ಣನ್ ಬಣ್ಣ ಹಚ್ಚಿದ್ದಾರೆ. ಇವರಿಬ್ಬರು ಒಂದೇ ಸಿನಿಮಾದಲ್ಲಿ ಇದ್ದ ಮೇಲೆ ಸ್ಕ್ರೀನ್ ಮೇಲೆ ಒಟ್ಟಿಗೆ ಕಾಣಿಸಿಕೊಳ್ತಾರೆ ಅನ್ನೋ ನಿರೀಕ್ಷೆ ಹಲವರಲ್ಲಿದೆ. 

ಗ್ಲೋಬಲ್ ಮಟ್ಟದಲ್ಲಿ ಹಿಟ್ ಆಯ್ತು ಉಪ್ಪಿ-ಕಿಚ್ಚನ ಕಬ್ಜ ಟೀಸರ್!

ಐಶ್ವರ್ಯ ರೈ ಹಾಗು ತ್ರಿಷಾ ಇಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಪರದೆ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ಐಶ್ ಹಾಗು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿಲ್ಲವಂತೆ. ನಿರ್ದೇಶಕ ಮಣಿರತ್ನಂ ಅವರು ನಮ್ಮಿಬ್ಬರನ್ನು ಒಟ್ಟಿಗೆ ತೋರಿಸಲು ಬಯಸಲಿಲ್ಲ. ಅದೃಷ್ಟವಶಾತ್ ನನ್ನ ಶೂಟಿಂಗ್‌ನ ಮೊದಲ ದಿನವೇ, ಐಶ್ವರ್ಯಾ ರೈ ಅವರನ್ನು ಭೇಟಿಯಾದೆ ಅಂತ ತ್ರಿಶಾ ಹೇಳಿಕೊಂಡಿದ್ದಾರೆ. ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ 20ನೇ ಶತಮಾನದ ಐತಿಹಾಸಿಕ ಕಾದಂಬರಿ ಆಧಾರಿತ ಸಿನಿಮಾ ಪೊನ್ನಿಯಿನ್ ಸೆಲ್ವನ್.. ಚೋಳ ಆಳ್ವಿಕೆಯ ಸುತ್ತ ಹೆಣೆಯಲಾದ ಕಥೆಯಲ್ಲಿ ತಮಿಳುನಾಡಿನ ಸಂಸ್ಕೃತಿ ಪರಂಪರೆಯೊಂದಿಗಿ ಈ ಸಿನಿಮಾದ ಕಥೆ ಬೆಸೆದುಕೊಂಡಿದೆ. ತಮಿಳಿನಲ್ಲಿ ಪ್ರಕಟವಾದ ಇದುವರೆಗಿನ ಕಾದಂಬರಿಗಳಲ್ಲಿ ಪೊನ್ನಿಯಿನ್ ಸೆಲ್ವನ್ ಒಂದು ಅತ್ಯುತ್ತಮ ಕಾದಂಬರಿ ಎನಿಸಿಕೊಂಡಿದೆ. ಈ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಇದೇ ಸೆ.30ರಂದು ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್