Aug 28, 2024, 12:35 PM IST
ಬಣ್ಣದ ಜಗತ್ತಿನಲ್ಲಿ ಈಗ ಮಲೆಯಾಳಂ ಸಿನಿ ಇಂಡಸ್ಟ್ರಿಯದ್ದೇ ಕಾರು ಬಾರು ಜೋರು. ಒಂದ್ ಕಡೆ ಹಿಟ್ ಸಿನಿಮಾಗಳನ್ನ ಕೊಡುತ್ತಿರೋ ಮಲೆಯಾಳಂ ಚಿತ್ರರಂಗ, ಮತ್ತೊಂದು ಕಡೆ ತಮ್ಮದೇ ಸಿನಿ ರಂಗದ ನಟಿಯರನ್ನ ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆದು ತೀರಾ ಮುಜುಗರಕ್ಕೆ ತುತ್ತಾಗಿದೆ. ಮಲೆಯಾಳಂ ಚಿತ್ರರಂಗದ ಕರಾಳ ಮುಖವಾಡ ಬಗೆದಷ್ಟು ಬಯಲಾಗುತ್ತಿದೆ. ಹೇಮಾ ಆಯೋಗದ ವರಧಿಯಿಂದ ಮಾಲಿವುಡ್ ಅಲ್ಲೋಲ ಕಲ್ಲೋಲವಾಗಿದೆ. ಈ ಬಗ್ಗೆ ಒಂದು ವರಧಿ ಇಲ್ಲಿದೆ. ಬಣ್ಣದ ಜಗತ್ತು ನೋಡೋಕೆ ಚಂದ, ಆದ್ರೆ ಅದರೊಳಗೆ ಇಳಿದ್ರೆ ಅದೊಂದು ಕೊಳಕು ಪ್ರಪಂಚ ಅಂತ ಚಿತ್ರರಂಗದವರೇ ಹೇಳುತ್ತಾರೆ. ಈಗ ಪಾತ್ರಕ್ಕಾಗಿ ಪಲ್ಲಂಗದ ಕಥೆಗಳಿಂದ ತುಂಬಿ ತುಳುಕುತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಆಯೋಗದ ವರದಿಯಿಂದ ಕಂಪನ ಶುರುವಾಗಿದೆ.
ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಪ್ರಧಾನ ಕಾರ್ಯದರ್ಶಿ ಕುರ್ಚಿಯ ಮೇಲೆ ಕುಳಿತಿದ್ದ ಮಲಯಾಳಂ ಚಿತ್ರರಂಗದ ಸೀನಿಯರ್ ನಟ ಸಿದ್ದಿಕ್ ಈಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಿದ್ದಿಕ್ ವಿರುದ್ಧ 2019ರಲ್ಲಿ ನಟಿಯೊಬ್ರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ರು. ಆದ್ರೆ ಆಗ ಆರೋಪ ಮಾಡಿದ್ದ ನಟಿಯ ಪರ ಯಾರು ಧ್ವನಿ ಎತ್ತಲಿಲ್ಲ. ಈಗ ಹೇಮಾ ವರಧಿ ಬಂದ ಮೇಲೆ ಮತ್ತೆ ಆ ನಟಿ ತಾವು ಮಾಡಿದ್ದ ಆರೋಪ ಎಲ್ಲವೂ ನಿಜಾ ಎಂದಿದ್ದಾರೆ. ಇದನ್ನ ನೋಡಿದ ನಟ ಸಿದ್ಧಿಕ್ ತಕ್ಷಣ ತನ್ನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕಟ್ಟಿದ್ದಾರೆ. ಹೇಮಾ ಆಯೋಗ ಬಂದ ಮೇಲೆ ಮಲೆಯಾಳಂ ನಟಿಯರು ತಮಗಾದ ಒಂದೊಂದೇ ಕೆಟ್ಟ ಅನುಭವವನ್ನ ಹಂಚುತ್ತಿದ್ದಾರೆ.
ಇದರಿಂದ ಮಲೆಯಾಳಂ ಸಿನಿ ಜಗತ್ತನ್ನ ಆಳುತ್ತಿದ್ದವರೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ. ನಿರ್ದೇಶಕ ರಂಜಿತ್ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದಕ್ಕೆ ಕಾರಣ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ 2009ರಲ್ಲಿ ರಂಜಿತ್ ನನ್ನನ್ನ ರೂಮಿಗೆ ಕರೆದು ಕೆಟ್ಟದಾಗಿ ವರ್ತಿಸಿದ್ದ ಅಂತ ಆರೋಪ ಮಾಡಿದ್ರು. ಮಲೆಯಾಳಂ ನಟಿ ಮೀನು ಮುನೀರ್ ಗೂ ಲೈಂಗಿಕ ಧೌರ್ಜನ್ಯ ಆಗಿತ್ತಂತೆ. ಮಲೆಯಾಳಂನ ನಾಲ್ಕು ಜನ ಪ್ರಮುಖ ನಟರಾದ ಎಂ.ಮುಕೇಶ್, ಮಣಿಯನ್ ಪಿಲ್ಲ ರಾಜು, ಇಡವೆಲ ಬಾಬು ಮತ್ತು ಜಯಸೂರ್ಯ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ನಾಲ್ಕು ಜನರ ಮೇಲೆ ಆರೋಪ ಮಾಡಿದ್ದಾರೆ. ಹೀಗೆ ಹೇಮಾ ವರಧಿ ಬಳಿಕ ಮಾಲಿವುಡ್ ಕತ್ತಲು ಕತೆಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.