ರಶ್ಮಿಕಾ ಮಂದಣ್ಣ ಯಾವಾಗಲು ಸಿಕ್ಕಾಪಟ್ಟೆ ಟ್ರೋಲ್ ಆಗ್ತಾನೆ ಇರ್ತಾರೆ. ಅವರನ್ನು ಯಾಕೆ ಟ್ರೋಲ್ ಮಾಡಲಾಗುತ್ತದೆ ಎನ್ನುವುದಕ್ಕೆ ಟ್ರೋಲರ್ಸ್ ಉತ್ತರ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಟ್ರೋಲ್ ಆಗೋದಕ್ಕೆ ಮುಖ್ಯ ಕಾರಣ ರಿವೀಲ್ ಆಗಿದೆ. ಅದಕ್ಕೆ ಮೊದಲ ಕಾರಣ ರಶ್ಮಿಕಾಗೆ ಕನ್ನಡ ಭಾಷೆ ಮೇಲಿರೋ ಅಸಡ್ಡೆತನವಂತೆ. ಕನ್ನಡದ ಹುಡುಗಿಯಾಗಿ ಕನ್ನಡ ಮಾತನಾಡಲು ಬರೋಲ್ಲ ಎಂದಿದ್ರು ರಶ್ಮಿಕಾ. ಅಷ್ಟೆ ಅಲ್ಲ ಕನ್ನಡದ ಸಿನಿಮಾಗಳನ್ನು ರಶ್ಮಿಕಾ ಪ್ರಚಾರ ಮಾಡಲ್ಲ. ಕೆಜಿಎಫ್, ಕಾಂತಾರ, 777 ಚಾರ್ಲಿ, ವಿಕ್ರಾಂತ್ ರೋಣ ಸಿನಿಮಾಗಳ ಬಗ್ಗೆ ಲಿಲ್ಲಿ ಎಲ್ಲಿಯೂ ಸೊಲ್ಲೊಡೆದಿರಲಿಲ್ಲ. ಅಷ್ಟೇ ಯಾಕೆ ತನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಚಿತ್ರವನ್ನೇ ರಶ್ಮಿಕಾ ಮರೆತಿದ್ದಾರೆ. ಆ ಸಿನಿಮಾದಲ್ಲಿ ರಶ್ಮಿಕಾಗೆ ಚಾನ್ಸ್ ಕೊಟ್ಟ ನಿರ್ದೇಶಕ, ನಿರ್ಮಾಪಕರನ್ನೇ ರಶ್ಮಿಕಾ ನೆನಪಿಟ್ಟುಕೊಂಡಿಲ್ಲ ಅಂತ ಟ್ರೋಲ್ ಆಗುತ್ತಿದ್ದಾರೆ ಲಿಲ್ಲಿ. ಅಷ್ಟೆ ಅಲ್ಲ ನಾನು ಸಿಂಗಲ್ ಎಂದು ಹೇಳಿಕೊಳ್ಳುತ್ತಲೇ ಟಾಲಿವುಡ್ ನಟ ವಿಜಯ್ ದೇವರಕೊಡ ಜೊತೆ ಲವ್ ಬ್ರೇಕ್ ಮತ್ತೆ ಪ್ಯಾಚಪ್ ಅಂತೆಲ್ಲಾ ಟಾಲಿವುಡ್ನಲ್ಲಿ ಸುದ್ದಿ ಹರಿದಾಡಿದೆ. ಇಷ್ಟೆಲ್ಲಾ ಮಾಡೋದಕ್ಕೇ ರಶ್ಮಿಕಾ ಪದೇ ಪದೇ ಟ್ರೋಲ್ ಆಗ್ತಾರಂತೆ.
ಇನಾಯ-ತೈಮೂರ್: ಖಾನ್ ಕುಟುಂಬದ ಮಕ್ಕಳು ಪಬ್ಲಿಕ್ ಕ್ಯಾಮೆರಾ ಕಂಡ್ರೆ ಗರಂ, ಹೀಗೆ ಟಾಂಗ್ ಕೊಡ್ತಾರಂತೆ!