
ವಿಜಯ್ ದೇವರಕೊಂಡ ನಟನೆಯ ಕಿಂಗ್ ಡಮ್ ಮೂವಿ ಬಾಕ್ಸಾಫೀಸ್ನಲ್ಲಿ ಅಬ್ಬರಿಸ್ತಾ ಇದೆ. ಸಿನಿಮಾಗೆ ಎಲ್ಲೆಡೆ ಮಸ್ತ್ ರೆಸ್ಪಾನ್ಸ್ ಸಿಕ್ತಾ ಇದ್ದು, ಬರೊಬ್ಬರಿ 7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ ಮರಳಿ ದೊರೆತಿದೆ. ವಿಜಯ್ ದೇವರಕೊಂಡ ಫೈನಲಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ತೆರೆಗೆ ಬಂದ ಕಿಂಗ್ಡಮ್ ಮೂವಿ ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ ಭರ್ತಿ 39 ಕೋಟಿ ಗಳಿಕೆ ಮಾಡಿದೆ. ಇದೊಂದು ಸ್ಪೈ ಌಕ್ಚನ್ ಡ್ರಾಮಾ ಚಿತ್ರವಾಗಿದ್ದು ಸಿನಿಮಾಗೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಕಿಂಗ್ಡಮ್ ನಲ್ಲಿ ಕಾನ್ಸ್ಟೆಬಲ್ ಸೂರ್ಯ ಪಾತ್ರದಲ್ಲಿ ಮಿಂಚಿರೋ ವಿಜಯ್ ದೇವರಕೊಂಡ, ವೇಷ ಮರೆಸಿಕೊಂಡು ಗೂಡಚಾರಿಯಾಗಿ ಕೆಲಸ ಮಾಡುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
ಆಫ್ಟರ್ ಎ ಲಾಂಗ್ ಟೈಂ ವಿಜಯ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಜಯ್ ದೇವರಕೊಂಡ ಕೊನೆಯದಾಗಿ ದೊಡ್ಡ ಯಶಸ್ಸು ನೋಡಿದ್ದು 2018ರಲ್ಲಿ ಬಂದ ಗೀತ ಗೋವಿಂದಂ ಸಿನಿಮಾದಿಂದ. ಈ ಸಿನಿಮಾ ಹೊತ್ತಲ್ಲೇ ವಿಜಯ್ ಮತ್ತು ರಶ್ಮಿಕಾ ನಡಿವೆ ಕುಚ್ ಕುಚ್ ಶುರುವಾಯ್ತು. ಸಿನಿಮಾನೂ ಹಿಟ್ ಆಯ್ತು ಪ್ರೀತಿಯೂ ಫಿಕ್ಸ್ ಆಯ್ತು. ಅಲ್ಲಿಂದ ಮುಂದೆ ರಶ್ಮಿಕಾ ಸಾಲು ಸಾಲು ಹಿಟ್ ಕೊಡ್ತಾ ಬಾಕ್ಸಾಫೀಸ್ ಕ್ವೀನ್ ಅನ್ನಿಸಿಕೊಂಡ್ರು. ಆದ್ರೆ ವಿಜಯ್ ದೇವರಕೊಂಡ ಮಾಡಿದ ಚಿತ್ರಗಳು ಮಾತ್ರ ಒಂದರ ಬಳಿಕ ಒಂದು ಡಿಸಾಸ್ಟರ್ ಆಗ್ತಾ ಹೋದ್ವು. ಸ್ಟಾರ್ಡಮ್ ಕಳಚಿ ಬೀಳುವ ಹೊತ್ತಲ್ಲಿ ಕಿಂಗ್ಡಮ್ ಸಿನಿಮಾ ದೇವರಕೊಂಡ ಕೈ ಹಿಡಿದಿದೆ. ಭರ್ತಿ 7 ವರ್ಷಗಳ ಬಳಿಕ ಸಿಕ್ಕಿರೋ ಗೆಲುವು ಕಿರಿಕ್ ಬ್ಯೂಟಿ ಗೆಳೆಯನ ಸಂಭ್ರಮ ಹೆಚ್ಚಿಸಿದೆ.