ಪ್ರಶಾಂತ್ ನೀಲ್- ಜೂ. ಎನ್‌ಟಿಆರ್ ಮಧ್ಯೆ ಜಟಾಪಟಿ ಆಯ್ತಾ? ಚಿತ್ರದ ಶೂಟಿಂಗ್ ನಿಂತಿದ್ದೇಕೆ..?

ಪ್ರಶಾಂತ್ ನೀಲ್- ಜೂ. ಎನ್‌ಟಿಆರ್ ಮಧ್ಯೆ ಜಟಾಪಟಿ ಆಯ್ತಾ? ಚಿತ್ರದ ಶೂಟಿಂಗ್ ನಿಂತಿದ್ದೇಕೆ..?

Published : Oct 24, 2025, 02:02 PM IST

ಸಲಾರ್ ನಿರ್ಮಾಣ ಹಂತದಲ್ಲಿ ಇರೋವಾಗಲೇ ಎನ್.ಟಿ.ಆರ್-ನೀಲ್ ಪ್ರಾಜೆಕ್ಟ್ ಫಿಕ್ಸ್ ಆಗಿತ್ತು. ಕಳೆದ ವರ್ಷ ಆಗಸ್ಟ್ ನಲ್ಲೇ ಈ ಸಿನಿಮಾದ ಮುಹೂರ್ತ ನಡೆದಿದ್ದು ಈ ವರ್ಷಾರಂಭದಿಂದ ಶೂಟಿಂಗ್ ಶುರುವಾಗಿತ್ತು. ಆದರೆ ಈಗ ಸ್ಟಾಪ್ ಆಗಿದ್ಯಾ? 

ಸಲಾರ್ ಸಿನಿಮಾದ ಅಮೋಘ ಸಕ್ಸಸ್ ಬಳಿಕ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ , ಎನ್​.ಟಿ.ಆರ್ ಜೊತೆಗೆ ಸಿನಿಮಾ ಮಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ಭರದಿಂದ ನಡೀತಿದ್ದ ಈ ಸಿನಿಮಾದ ಶೂಟಿಂಗ್ ಸದ್ಯಕ್ಕೆ ಸ್ಟಾಪ್ ಆಗಿದೆ. ಈ ನಡುವೆ ಪ್ರಶಾಂತ್-ಎನ್.ಟಿ.ಆರ್ ನಡುವೆ ಸ್ಕ್ರಿಪ್ಟ್ ವಿಚಾರಕ್ಕೆ ತಿಕ್ಕಾಟ ನಡೀತಿದೆ ಅನ್ನೋ ರೂಮರ್ಸ್ ಹರಿದಾಡ್ತಾ ಇದೆ. ಹಾಗಾದ್ರೆ ಈ ರೂಮರ್ಸ್ ಹಿಂದಿನ ಸತ್ಯ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಯೆಸ್ ಟಾಲಿವುಡ್​ನಲ್ಲಿ ಇಂಥದ್ದೊಂದು ರೂಮರ್ ಜೋರಾಗಿ ಹರಿದಾಡ್ತಾ ಇದೆ. ಎನ್.ಟಿ.ಆರ್ - ನೀಲ್ ಪ್ರಾಜೆಕ್ಟ್ ಸದ್ಯ ಸ್ಟಾಪ್ ಆಗಿದ್ದು ಅದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಾಯಕ ನಟ ಎನ್.ಟಿ.ಆರ್ ನಡುವಿನ ತಿಕ್ಕಾಟವೇ ಕಾರಣ ಅಂತ ಸುದ್ದಿ ಹರಿದಾಡ್ತಾ ಇದೆ.

ಅಸಲಿಗೆ ಕೆಜಿಎಫ್-2 ಗ್ಲೋಬಲ್ ಸಕ್ಸಸ್ ನಂತರ ಸ್ಯಾಂಡಲ್​ವುಡ್ ಡೈರೆಕ್ಟರ್ ಪ್ರಶಾಂತ್ ನೀಲ್ ಟಾಲಿವುಡ್​ನಲ್ಲೇ ಬ್ಯುಸಿಯಾಗಿ ಬಿಟ್ರು. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡಿದ ನೀಲ್ ಮತ್ತೊಂದು ಧಮಾಕೇದಾರ್ ಹಿಟ್ ಕೊಟ್ರು.

ಸಲಾರ್ ನಿರ್ಮಾಣ ಹಂತದಲ್ಲಿ ಇರೋವಾಗಲೇ ಎನ್.ಟಿ.ಆರ್-ನೀಲ್ ಪ್ರಾಜೆಕ್ಟ್ ಫಿಕ್ಸ್ ಆಗಿತ್ತು. ಕಳೆದ ವರ್ಷ ಆಗಸ್ಟ್ ನಲ್ಲೇ ಈ ಸಿನಿಮಾದ ಮುಹೂರ್ತ ನಡೆದಿದ್ದು ಈ ವರ್ಷಾರಂಭದಿಂದ ಶೂಟಿಂಗ್ ಶುರುವಾಗಿತ್ತು.

ಹೌದು ಚಿತ್ರತಂಡದ ಮೂಲಗಳು ಹೇಳುವ ಪ್ರಕಾರ ಪ್ರಶಾಂತ್ ನೀಲ್ ಅವರ ವರ್ಕಿಂಗ್ ಸ್ಟೈಲ್ ನೋಡಿ ಎನ್.ಟಿ.ಆರ್ ಶಾಕ್ ಆಗಿದ್ದಾರಂತೆ. ಎನ್.ಟಿ.ಆರ್ ಇದೂವರೆಗೂ 31 ಸಿನಿಮಾ ಮಾಡಿದ್ದಾರೆ. ರಾಜಮೌಳಿಯಂತಹ ಸ್ಟಾರ್ ಡೈರೆಕ್ಟರ್ ಜೊತೆಗೆ ಮೂರು ಮೂರು ಸಿನಿಮಾ ಮಾಡಿದ್ದಾರೆ. ಆದ್ರೆ ನೀಲ್ ವರ್ಕಿಂಗ್ ಸ್ಟೈಲ್ ಮಾತ್ರ ಅವರಿಗೆ ಅರ್ಥ ಆಗ್ತಿಲ್ಲವಂತೆ.

ಅಸಲಿಗೆ ಪ್ರಶಾಂತ್ ನೀಲ್ ವರ್ಕಿಂಗ್ ಸ್ಟೈಲ್ ನಿಜಕ್ಕೂ ಡಿಫೆರೆಂಟ್.  ಅವರು ಎಲ್ಲಿ ಶಾಟ್ ತೆಗೀತಾರೆ.. ಅದನ್ನ ಎಲ್ಲಿ ಪ್ಲೇಸ್ ಮಾಡ್ತಾರೆ. ಎಲ್ಲಿಂದ ಎಲ್ಲಿಗೆ ಜೋಡಿಸ್ತಾರೆ ಅವರಿಗೆ ಮಾತ್ರ ಗೊತ್ತು. ಇದೂವರೆಗೂ ನೀಲ್ ನಿರ್ದೇಶನದಲ್ಲಿ ಬಂದಿರೋ ಸಿನಿಮಾಗಳೆಲ್ಲಾ ಇದೇ ರೀತಿ ನಾನ್ ಲೀನಿಯರ್ ನಿರೂಪಣೆ ಒಳಗೊಂಡಿವೆ.

ಅಸಲಿಗೆ ಸಲಾರ್​ನಲ್ಲಿ ಪ್ರಭಾಸ್​ಗೂ ಇಂಥದ್ದೇ ಅನುಭವ ಆಗಿತ್ತು. ಪ್ರಭಾಸ್ ಗೆ ಇಡೀ ಸಿನಿಮಾದಲ್ಲಿ ಇದ್ದಿದ್ದು ಬೆರಳೆಣಿಕೆಯಷ್ಟೇ ಡೈಲಾಗ್ಸ್. ಪ್ರಶಾಂತ್ ಅದೇನು ತೆಗೀತಾ ಇದ್ದಾರೆ ಅಂತ ಗೊತ್ತಾಗದೇ ಪ್ರಭಾಸ್ ಕೂಡ ಶಾಕ್ ಆಗಿದ್ರಂತೆ.

ಪ್ರಭಾಸ್ ಅದೇನೆ ಅಸಮಾಧಾನ ಇದ್ರೂ ನಿರ್ದೇಶಕನ ಮೇಲೆ ಸಿನಿಮಾ ಹೊಣೆ ಬಿಟ್ಟುಬಿಡ್ತಾರೆ. ಆಧ್ರೆ ಎನ್.ಟಿ.ಆರ್ ಮಾತ್ರ ಈ ಸಾರಿ ಸ್ಕ್ರಿಪ್ಟ್​ನಲ್ಲಿ ಇನ್​ವಾಲ್ವ್ ಆಗ್ತಾ ಇದ್ದಾರೆ. ಯಾಕಂದ್ರೆ ಎನ್.ಟಿ.ಆರ್ ನಟನೆಯ ಹಿಂದಿನ ಸಿನಿಮಾ ದೇವರ ಌವರೇಜ್ ಆಧ್ರೆ, ವಾರ್-2 ಸಿನಿಮಾ ಡಿಸಾಸ್ಟರ್ ಆಗಿತ್ತು.

RRR ಸಿನಿಮಾದ ಗ್ಲೋಬಲ್  ಸಕ್ಸಸ್ ಬಳಿಕ ಹೀಗೆ ಸೋಲಿನ ಸುಳಿಗೆ ಸಿಲುಕಿರೋ ಎನ್.ಟಿ.ಆರ್ ಈ ಸಾರಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಸೋ ಪ್ರಶಾಂತ್ ನೀಲ್​ಗೆ ಸ್ಕ್ರಿಪ್ಟ್ ಬದಲಿಸಿ ಅಂತ ಸೂಚಿಸಿದ್ದಾರಂತೆ,

ಹೌದು ಕೆಲ ದಿನಗಳ ಹಿಂದೆ ಯಶ್ ನಟನೆಯ ಟಾಕ್ಸಿಕ್ ಮೂವಿ ಬಗ್ಗೆನೂ ಇಂಥದ್ದೇ ಗಾಸಿಪ್ ಇಂಡಸ್ಟ್ರಿಯಲ್ಲಿ ಹರಿದಾಡಿತ್ತು. ನಿರ್ದೇಶಕಿ ಗೀತು ಮೋಹನ್​ದಾಸ್ ವರ್ಕಿಂಗ್ ಸ್ಟೈಲ್​ ಯಶ್​ಗೆ ಇಷ್ಟವಾಗಿಲ್ಲವಂತೆ. ಪದೇ ಪದೇ ರೀ ಶೂಟ್ ಮಾಡ್ತಾ ಇರೋದ್ರಿಂದ ಸಿನಿಮಾ ಬಜೆಟ್ 600 ಕೋಟಿ ದಾಟಿದೆ ಅನ್ನೋ ವದಂತಿ ಹರಿದಾಡಿದ್ವು.

ಸದ್ಯ ಎನ್.ಟಿ.ಆರ್-ನೀಲ್ ಸಿನಿಮಾ ಬಗ್ಗೆ ಇಂಥದ್ದೊಂದು ಗಾಸಿಪ್ ಹುಟ್ಟಿಕೊಂಡಿದೆ. ಟಾಲಿವುಡ್​ನಲ್ಲಿ ಹರಿದಾಡ್ತಾ ಇರೋ ಈ ಗಾಸಿಪ್​ಗೆ ಇದೂವರೆಗೂ ನೀಲ್ ಆಗಲಿ, ಎನ್.ಟಿ.ಆರ್ ಆಗಲಿ ಉತ್ತರ ಕೊಟ್ಟಿಲ್ಲ. ಸೋ ಈ ಗಾಸಿಪ್ ಎಷ್ಟರ ಮಟ್ಟಿಗೆ ನಿಜಾನೋ ಗೊತ್ತಿಲ್ಲ. ಆದ್ರೆ ಈ ಗಾಸಿಪ್ ಟಾಲಿವುಡ್​ನಲ್ಲಿ ಬಿರುಗಾಳಿ ಎಬ್ಬಿಸಿರೋದಂತೂ ಸುಳ್ಳಲ್ಲ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more