ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!

ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!

Published : Nov 09, 2025, 09:24 AM IST

ಮದುವೆಯಾಗಿ 4 ವರ್ಷವಾದ್ರೂ ಈ ದಂಪತಿಗೆ ಸಂತಾನ ಭಾಗ್ಯ ಒಲಿದಿರಲಿಲ್ಲ. ಈ ಆಗ ಕತ್ರಿನಾಗೆ ಜ್ಯೋತಿಷಿಯೊಬ್ರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಮಾಹಿತಿ ಕೊಟ್ಟಿದ್ರು. ಕಳೆದ ಮಾರ್ಚ್ ತಿಂಗಳಿನಲ್ಲಿ ಕತ್ರಿನಾ ಕರ್ನಾಟಕದ ಸುಪ್ರಸಿದ್ದ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ಕೊಟ್ಟಿದ್ರು. 

ಬಾಲಿವುಡ್‌ ತಾರಾ ದಂಪತಿ ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಕತ್ರಿನಾ  ಮುದ್ದು ಗಂಡುಮಗುವಿಗೆ ಜನ್ಮಕೊಟ್ಟಿದ್ದು, ಈ ಖುಷಿ ಸಂಗತಿಯನ್ನ ತಾರಾಜೋಡಿ ಹಂಚಿಕೊಂಡಿದೆ.

ಅಪ್ಪ, ಅಮ್ಮನಾದ ಬಾಲಿವುಡ್ ತಾರಾದಂಪತಿ..!
ಯೆಸ್, ಬಾಲಿವುಡ್​ ಸ್ಟಾರ್ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​​ ಪೋಷಕರಾಗಿದ್ದಾರೆ. ಕತ್ರಿನಾ ಕೈಫ್  ಗಂಡು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಮನೆಗೆ ಬಂದಿರೋ ಹೊಸ ಅತಿಥಿಯ ಬಗ್ಗೆ ಈ ತಾರಾಜೋಡಿ ಖುಷಿ ಸಮಾಚಾರ ಹಂಚಿಕೊಂಡಿದೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  2021 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಕತ್ರಿನಾ ಕೈಫ್, ವಿಕ್ಕಿ ಕೌಶಲ್​​ಗಿಂತಲೂ ಏಳು ವರ್ಷ ದೊಡ್ಡವರು. ವಯಸ್ಸಿನ ಅಂತರವನ್ನ ನಿರ್ಲಕ್ಷಿಸಿ ಕತ್ರಿನಾ & ವಿಕ್ಕಿ  ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.

ಆದ್ರೆ ಮದುವೆಯಾಗಿ 4 ವರ್ಷವಾದ್ರೂ ಈ ದಂಪತಿಗೆ ಸಂತಾನ ಭಾಗ್ಯ ಒಲಿದಿರಲಿಲ್ಲ. ಈ ಆಗ ಕತ್ರಿನಾಗೆ ಜ್ಯೋತಿಷಿಯೊಬ್ರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಮಾಹಿತಿ ಕೊಟ್ಟಿದ್ರು. ಕಳೆದ ಮಾರ್ಚ್ ತಿಂಗಳಿನಲ್ಲಿ ಕತ್ರಿನಾ ಕರ್ನಾಟಕದ ಸುಪ್ರಸಿದ್ದ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ಕೊಟ್ಟಿದ್ರು.

ಸುಬ್ರಮಣ್ಯ ಸನ್ನಿಧಾನದಲ್ಲಿ ಮೂರು ದಿನಗಳ ಕಾಲ ಇದ್ದು, ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದ್ರು. ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿ ಸಂತಾನ ಭಾಗ್ಯಕ್ಕಾಗಿ ಜನರು ಸರ್ಪ ಸಂಸ್ಕಾರ ಪೂಜೆ ಮಾಡಿಸ್ತಾರೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಸಂತಾನ ಪ್ರಾಪ್ತಿಗಾಗಿ ಸುಬ್ರಮಣ್ಯನ ಮೊರೆ ಹೋಗ್ತಾರೆ.

ಕತ್ರಿನಾ ಕೂಡ ಭಕ್ತಿಭಾವದಿಂದ ಇಲ್ಲಿ ಪೂಜೆ ಸಲ್ಲಿಸಿದ್ರು. ಆ ಪೂಜೆಗೀಗ ಫಲ ಸಿಕ್ಕಿದೆ. ತಾರಾದಂಪತಿಗೆ ಪುತ್ರಭಾಗ್ಯ ಒಲಿದು ಬಂದಿದೆ. ಈ ಸಂತಸವನ್ನ ಈ ತಾರಾಜೋಡಿ ಹಂಚಿಕೊಂಡಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more