ರವಿಚಂದ್ರನ್ ಮೊದಲ ಪುತ್ರ ಮನೋರಂಜನ್‌ಗೆ ಮದುವೆ: ಇಲ್ಲಿದೆ ಆರತಕ್ಷತೆ ಝಲಕ್

Aug 21, 2022, 9:26 AM IST

ರವಿಚಂದ್ರನ್ ಮೊದಲ ಪುತ್ರ ಮನೋರಂಜನ್  ಮದುವೆ ಇಂದು ಅದ್ಧೂರಿಯಾಗಿ ನಡೆಯಲಿದೆ. ನಿನ್ನೆ ಮೆಹಂದಿ, ಹಾಗೂ ಆರತಕ್ಷತೆ ಕಾರ್ಯಕ್ರಮ ವೈಭವದಿಂದ ನಡೆದಿದೆ. ಬೆಂಗಳೂರಿನ ಪ್ಯಾಲೆಟ್ ವೈಟ್ ಪೆಟಲ್ಸ್‌ನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಸಂಗೀತ ದೀಪಕ್ ಜೊತೆ ಮನೋರಂಜನ್ ರವಿಚಂದ್ರನ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ನವ ಜೋಡಿಗಳಿಗೆ ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ. ಶಿವರಾಜ್ ಕುಮಾರ್ ದಂಪತಿ, ನಟಿ  ಖುಷ್ಖು, ಹಂಸಲೇಖ ದಂಪತಿ, ಅಕುಲ್ ಬಾಲಾಜಿ, ರಾಘವೇಂದ್ರ ರಾಜ್ ಕುಮಾರ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಬಂದು ನವ ದಂಪತಿಗೆ ಶುಭ ಹಾರೈಸಿದ್ದಾರೆ.