Dec 13, 2022, 1:00 PM IST
ಜಾಹ್ನವಿ ಕಪೂರ್ ಹಾಗೂ ಶಿಖರ್ ಪಹರಿಯಾ ಮಾಲ್ಡಿವ್ಸ್ ಹೋಗಿದ್ದಾರೆ ಅನ್ನುವ ಡೌಟ್ ಇದೀಗ ಬಾಲಿವುಡ್‌ನಲ್ಲಿ ಶುರುವಾಗಿದೆ. ಜಾಹ್ನವಿ ಮಾಲ್ಡಿವ್ಸ್'ನಲ್ಲಿ ತೆಗೆದ ಬಿಕಿನಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಸುಮ್ಮನೆ ಹೀಗೆ ಬ್ರೇಕ್ ತಗೊಂಡು ಸುತ್ತುತ್ತಿದ್ದೇನೆ ಎಂದು ಹೇಳಿಕೊಂಡು ಪೋಸ್ ಕೊಟ್ಟಿದ್ದಾರೆ. ಇವರ ಜೊತೆ ಯಾರು ಇದ್ದಾರೆ ಎನ್ನುವ ಅನುಮಾನ ಎಲ್ಲರಿಗೂ ಬಂದಿತ್ತು. ಹಾಗೂ ಅವರ ಮಾಜಿ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಮಾಲ್ಡಿವ್ಸ್'ಗೆ ಹೋಗಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇದು ಈಗ ನಿಜವಾಗಿದ್ದು, ಇಬ್ಬರ ಫೋಟೋಗಳು ಒಂದೇ ಸ್ಥಳದಲ್ಲಿ ಇವೆ ಎನ್ನಲಾಗಿದೆ. ಶಿಖರ್ ಪಹಾರಿಯಾ ಮಾಜಿ ಮುಖ್ಯಮಂತ್ರಿ ಸುಶಿಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಈ ಮೊದಲು ಜಾಹ್ನವಿ ಶಿಖರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಬ್ರೇಕಪ್ ಎಂದು ಹೇಳಿದ್ದರು. ಈಗ ಮತ್ತೆ ಈ ಜೋಡಿ ಒಂದಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಸಧ್ಯ ಜಾಹ್ನವಿ ಕಪೂರ್ ಮಾಲ್ಡಿವ್ಸ್ ಫೋಟೋ ಫುಲ್ ವೈರಲ್ ಆಗಿವೆ.