ಬರ್ತಿದ್ದಾನೆ ಬಳ್ಳಾರಿ ಬೊಂಬಾಟ್ ಹುಡುಗ: ಕಿರೀಟಿ ಶ್ರಮಕ್ಕೆ ಬಹುಪರಾಕ್ ಎಂದ ರಾಜಮೌಳಿ!

ಬರ್ತಿದ್ದಾನೆ ಬಳ್ಳಾರಿ ಬೊಂಬಾಟ್ ಹುಡುಗ: ಕಿರೀಟಿ ಶ್ರಮಕ್ಕೆ ಬಹುಪರಾಕ್ ಎಂದ ರಾಜಮೌಳಿ!

Published : Apr 21, 2022, 04:03 PM ISTUpdated : Apr 21, 2022, 04:51 PM IST

ಸಿನಿಮಾರಂಗಾನೆ ಹಾಗೆ  ಆಕರ್ಷಣೆ, ಎಂಥವರನ್ನೂ ಸೆಳೆದುಬಿಡುತ್ತೆ. ಸದ್ಯ ರಾಜಕಾರಣಿ , ಬಳ್ಳಾರಿ ಗಣಿದಣಿ ಜನಾರ್ಧನರೆಡ್ಡಿ  ಪುತ್ರನಿಗೂ ಇದೇ ಸೆಳೆತ. ಸಿನಿಮಾ ಆಕರ್ಷಣೆಯಲ್ಲಿ ಅಪ್ಪ ದುಡ್ಡಾಕ್ತಾರೆ ನಾನೂ ಹೀರೋ ಅಂತ ಬರಲಿಲ್ಲ. ಬಂದು ಸಿನಿಮಾಗೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದಾನೆ. 

ಸಿನಿಮಾರಂಗಾನೆ ಹಾಗೆ  ಆಕರ್ಷಣೆ, ಎಂಥವರನ್ನೂ ಸೆಳೆದುಬಿಡುತ್ತೆ. ಸದ್ಯ ರಾಜಕಾರಣಿ , ಬಳ್ಳಾರಿ ಗಣಿದಣಿ ಜನಾರ್ಧನರೆಡ್ಡಿ  ಪುತ್ರನಿಗೂ ಇದೇ ಸೆಳೆತ. ಸಿನಿಮಾ ಆಕರ್ಷಣೆಯಲ್ಲಿ ಅಪ್ಪ ದುಡ್ಡಾಕ್ತಾರೆ ನಾನೂ ಹೀರೋ ಅಂತ ಬರಲಿಲ್ಲ. ಬಂದು ಸಿನಿಮಾಗೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದಾನೆ. ಕಿರೀಟಿ ರೆಡ್ಡಿ ತನ್ನ ಮೊದಲ ಸಿನಿಮಾಗಾಗಿ ಏನೆಲ್ಲ ಶ್ರಮಪಟ್ಟಿದ್ದಾನೆ ಅನ್ನೋದಕ್ಕೆ ಉದಾಹರಣೆ ಈ ವೀಡಿಯೋ.

ಸಿನಿಮಾ ಇಂಟ್ರೋಡಕ್ಷನ್‌ಗಾಗಿಯೇ ಇಷ್ಟು ಕಷ್ಟ ಪಟ್ಟಿದ್ದಾರೆಂದರೆ ಇನ್ನು  ಇಡೀ ಸಿನಿಮಾಗಾಗಿ ಎಷ್ಟೆಲ್ಲಾ ಪರಿಶ್ರಮ ಹಾಕಿರಬಹುದು?  ಕಿರೀಟಿ ನಟನೆಯ ಮೊದಲ ಸಿನಿಮಾದ ಇಂಟ್ರಡಕ್ಷನ್ ಟೀಸರ್ ಯೂಟ್ಯೂಬ್ ನಲ್ಲಿ  ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. 

ಸ್ವತಃ  ಬಾಹುಬಲಿ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ಅಷ್ಟೇ ,ನೋವು, ಕಷ್ಟದ ಪರಿಶ್ರಮ  ಕೂಡ ಅಡಗಿದೆ ಅನ್ನೋದನ್ನ ದೃಶ್ಯಗಳು ಹೇಳುತ್ತಿವೆ.

ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರಡಕ್ಷನ್ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.  ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಇದೊಂದು ಸ್ಯಾಂಪಲ್ ಅಷ್ಟೆ.. ಇನ್ನೂ ಮುಂದಿದೆ ಕಿರೀಟಿಯ ನಟನಾ ಚಾತುರ್ಯವನ್ನು ನೊಡಲು ಕಾಯುತ್ತಿರಿ ಎನ್ನುತ್ತಿದೆ ಚಿತ್ರತಂಡ..

 

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
Read more