ಮತ್ತೊಮ್ಮೆ ಪ್ರೇಕ್ಷಕರನ್ನ ಪ್ಯಾಂಡೋರಾ ಜಗತ್ತಿಗೆ ಕರೆದೊಯ್ಯೋದಕ್ಕೆ ಬರ್ತಾ ಇದೆ. ಸದ್ಯ ಅವತಾರ್-3 ಟ್ರೇಲರ್ ರಿಲೀಸ್ ಆಗಿದ್ದು, ಈ ಸಾರಿ ಅವತಾರ್ ವರ್ಲ್ಡ್ ಹೇಗಿರುತ್ತೆ ಅನ್ನೋ ಸೂಚನೆ ಕೊಟ್ಟಿದೆ.
ಅವತಾರ್ ಸರಣಿಯ ಮೂರನೇ ಸಿನಿಮಾ.. ಅವತಾರ್- ಫೈರ್ ಅಂಡ್ ಆಶ್ ರಿಲೀಸ್ಗೆ ಸಜ್ಜಾಗಿದೆ. ಮತ್ತೊಮ್ಮೆ ಪ್ರೇಕ್ಷಕರನ್ನ ಪ್ಯಾಂಡೋರಾ ಜಗತ್ತಿಗೆ ಕರೆದೊಯ್ಯೋದಕ್ಕೆ ಬರ್ತಾ ಇದೆ. ಸದ್ಯ ಅವತಾರ್-3 ಟ್ರೇಲರ್ ರಿಲೀಸ್ ಆಗಿದ್ದು, ಈ ಸಾರಿ ಅವತಾರ್ ವರ್ಲ್ಡ್ ಹೇಗಿರುತ್ತೆ ಅನ್ನೋ ಸೂಚನೆ ಕೊಟ್ಟಿದೆ. ಅವತಾರ್ ಸರಣಿಯ ಮೂರನೇ ಚಿತ್ರ ಅವತಾರ್- ಫೈರ್ ಅಂಡ್ ಆಶ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಎಂದಿನಂತೆ ನಿಬ್ಬೆರಗಾಗಿಸೋ ದೃಶ್ಯವೈಭವ ಇಲ್ಲಿದೆ. ಪ್ಯಾಂಡೋರಾ ವರ್ಲ್ಡ್‌ನಲ್ಲಿ ಈ ಸಾರಿ ಪ್ರತಿಕಾರ ಜ್ವಾಲೆ ಧಗಧಗಿಸಲಿದ್ದು ಇಡೀ ಗ್ರಹ ಬೂದಿಯಾಗುವ ಸೂಚನೆ ಕೊಟ್ಟಿದೆ. ಅವತಾರ್ ಪ್ರಪಂಚದಲ್ಲೇ ಅತ್ಯಂತ ಜನಪ್ರೀಯವಾದ ಸಿನಿಮಾ ಸರಣಿ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ ಈ ಮಾಯಾಲೋಕವನ್ನ ನೋಡಿ ಜಗತ್ತಿನಾದ್ಯಂತ ಜನ ಇಷ್ಟಪಟ್ಟಿದ್ರು.
2009ರಲ್ಲಿ ಅವತಾರ್ ಮೊದಲ ಭಾಗ ಬಂದ್ರೆ, 2022ರಲ್ಲಿ ಅವತಾರ್-2 ರಿಲೀಸ್ ಆಗಿತ್ತು. ಇದೀಗ ಅವತಾರ್-3 ರಿಲೀಸ್ಗೆ ಸಜ್ಜಾಗಿದೆ. ಹೌದು ಅವತಾರ್-3 ಸಿನಿಮಾದ ಬಜೆಟ್ ಬರೊಬ್ಬರಿ 2100 ಕೋಟಿ. ಅದ್ಭುತ ವಿಎಫ್ ಎಕ್ಸ್ ತಂತ್ರಜ್ಞಾನ ಉಳ್ಳ ಈ ಸಿನಿಮಾ ಪ್ರೇಕ್ಷಕರನ್ನ ಹೊಸ ಲೋಕಕ್ಕೆ ಕರೆದೊಯ್ಯಲಿದೆ. ವಿಶೇಷ ಅಂದ್ರೆ ವರಾಂಗಾ ಎಂಬ ಹೊಸ ವಿಲನ್ ಪಾತ್ರ ಇಲ್ಲಿ ಎಂಟ್ರಿಯಾಗಿದೆ. 3ಡಿ, 4ಡಿಎಕ್ಸ್ ತಂತ್ರಜ್ಞಾನದಲ್ಲಿ ರಿಲೀಸ್ ಆಗಲಿರೋ ಅವತಾರ್-3 ವಿಶ್ವದ ನಾನಾ ಭಾಷೆಗಳಲ್ಲಿ ತೆರೆಕಾಣ್ತಾ ಇದೆ. ನಮ್ಮ ಕನ್ನಡ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಅವತಾರ್-3 ಕನ್ನಡ ಟ್ರೇಲರ್ ಕೂಡ ರಿಲೀಸ್ ಆಗಿದ್ದು ನೋಡುಗರ ಕುತೂಹಲ ಹೆಚ್ಚಿಸಿದೆ. ಡಿಸೆಂಬರ್ 19ಕ್ಕೆ ಅವತಾರ್-3 ವರ್ಲ್ಡ್ ವೈಡ್ ತೆರೆಗೆ ಬರಲಿದೆ. ಮತ್ತೊಮ್ಮೆ ಪ್ಯಾಂಡೋರಾ ವರ್ಲ್ಡ್‌ನಲ್ಲಿ ಪಯಣಿಸಲಿಕ್ಕೆ ನೀವು ಕೂಡ ಸಜ್ಜಾಗಿ.