Dec 12, 2024, 3:11 PM IST
ಇತ್ತೀಚಿಗಷ್ಟೇ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ದೂರಿಯಾಗಿ ನೆರವೇರಿದೆ. ಮಾಜಿ ಪತಿಯ ಮದುವೆ ಬೆನ್ನಲ್ಲೇ ಸಮಂತಾ ಕೂಡ ಮತ್ತೊಂದ್ ಮದುವೆಗೆ ಸಜ್ಜಾದ್ರಾ..? ಸ್ಯಾಮ್ ಹೊಸ ಜೀವನ ಆರಂಭಿಸೋ ಉತ್ಸಾಹದಲ್ಲಿದ್ದಾರಾ..? ಇಂಥದ್ದೊಂದು ಚರ್ಚೆ ಹುಟ್ಟಿಹಾಕಿದೆ ಸ್ಯಾಮ್ ಹಾಕಿರೋ ಲೇಟೆಸ್ಟ್ ಪೋಸ್ಟ್.
ಇತ್ತೀಚಿಗೆ ತಾನೇ ನಾಗಚೈತನ್ಯ-ಶೋಭಿತಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಈಗ ನವದಂಪತಿಗಳು ಹನಿಮೂನ್ಗೆ ಹೋಗಿದ್ದಾರೆ. ಮಾಜಿ ಪತಿ ಹೊಸ ಜೀವನ ಶುರುಮಾಡಿ ಆಯ್ತು. ಸ್ಯಾಮ್ ಯಾವಾಗ ಹೊಸ ಲೈಫ್ ಬಗ್ಗೆ ಯೋಚಿಸ್ತಾರೆ ಅಂದುಕೊಳ್ತಾ ಇದ್ದ ಫ್ಯಾನ್ಸ್ಗೆ ತನ್ನ ಲೇಟೆಸ್ಟ್ ಪೋಸ್ಟ್ ಮೂಲಕ ಉತ್ತರ ಕೊಟ್ಟಿದ್ದಾರೆ ಸಮಂತಾ.
ಸಮಂತಾ ರುಥ್ ಪ್ರಭು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 2025ರ ರಾಶಿ ಭವಿಷ್ಯ ಹೇಗಿರುತ್ತೆ ಎಂಬ ಫೋಟೋ ಹಂಚಿಕೊಂಡಿದ್ದಾರೆ. 2025 ಅತ್ಯಂತ ಬಿಡುವಿಲ್ಲದ ವರ್ಷವಾಗಿರಲಿದ್ದು, ಕರಕುಶಲತೆಯ ಪ್ರಗತಿ ಮತ್ತು ಅದಕ್ಕಾಗಿ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಈ ವರ್ಷ ಆರ್ಥಿಕತೆ ಸ್ಥಿರವಾಗಿರುತ್ತದೆ. ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ ಸಿಗಲಿದ್ದಾರೆ ಅಂತ ಭವಿಷ್ಯ ಬರೆಯಲಾಗಿದೆ. ಅದನ್ನ ಹಂಚಿಕೊಂಡಿದ್ದಾರೆ ಸಮಂತಾ. ಸಂಪೂರ್ಣ ಮಾಹಿತಿಗೆ ವಿಡಿಯೋ ನೋಡಿ..