ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?

ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?

Published : Nov 13, 2025, 12:12 PM IST

ತಮಿಳು ಹೀರೋಗಳು ಕೋಟಿ ಕೋಟಿ ಸಂಭಾವನೆ ಕೊಟ್ಟು ಸಾಕಾಗಿದೆ ಅನ್ನೋದು ತಮಿಳು ನಿರ್ಮಾಪಕರ ವಾದ. ಅದಕ್ಕಾಗಿ 100 ಹೆಚ್ಚು ಸಂಭಾವನೆ ಬೇಡಿಕೆ ಇಟ್ರೆ ಸಿನಿಮಾದಿಂದ ಬಂದ ಲಾಭದ ಹಣದಲ್ಲಿ ಪಾಲು ಪಡೆದುಕೊಳ್ಳಲಿ ಅಂತ ನಿರ್ಧಾರ ಮಾಡಿದ್ದಾರೆ. ಸಿನಿಮಾದಿಂದ ನಷ್ಟ ನಟರಿಗೂ ಆಗುತ್ತೆ, ಲಾಭವಾದ್ರೆ ನಟರಿಗೂ ಸಿಗುತ್ತೆ.

ಕಾಲಿವುಡ್​ ತಲೈವಾ ರಜನಿಕಾಂತ್​(Rajinikanth) ಚಿತ್ರತಂಗಕ್ಕೆ ಕಾಲಿಟ್ಟು 50 ವರ್ಷಗಳಾಗಿವೆ. ವಯಸ್ಸು 70 ದಾಟಿದ್ರು ರಜನಿ ಕ್ರೇಜ್​ ಡೌನ್ ಆಗಿಲ್ಲ. ಅದಕ್ಕೆ ತಕ್ಕಂತೆ ತಲೈವಾ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಇನ್ಮುಂದೆ ಸೂಪರ್​ ಸ್ಟಾರ್ ಜೇಬಿಗೆ 100 ಕೋಟಿ ಸಂಭಾವಣೆ ಇಳಿಸೋಲ್ವಂತೆ. ಅದಕ್ಕೆ ಕಾರಣ ಏನ್ ಗೊತ್ತಾ.? ರಜನಿಯಾ ಈ ಇಂಟ್ರೆಸ್ಟಿಂಗ್ ಸ್ಟೋರಿ ನೋಡಿ..

ಇನ್ಮುಂದ ತಲೈವ ದುಬಾರಿ ಅಲ್ಲವೇ ಅಲ್ಲ, ರಜನಿ 100 ಕೋಟಿ ಸಂಭಾವನೆಗೆ ಬ್ರೇಕ್?
ಸೂಪರ್​ ಸ್ಟಾರ್​ ನಟರು 100 ಕೋಟಿ ಸಂಭಾವನೆ ಪಡೆಯೋ ಈಗ ಮಾಮೂಲಾಗಿದೆ. 100 ಕೋಟಿ ಕೊಡದೇ ಇದ್ರೆ ಅವರ ಕಾಲ್ ಶೀಟ್ ಸಿಗೋದು ಕೂಡ ಕಷ್ಟ. ಕಾಲ್ ಶೀಟ್ ಇರಲಿ, ನಿರ್ಮಾಪಕರಿಗೆ ಹೀರೋಗಳ ಮನೆ ಅಕ್ಕ ಪಕ್ಕನೂ ಎಂಟ್ರಿ ಸಿಗೋದು ಕಷ್ಟ. ಇಂತಾ ಹೊತ್ತಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಅದೇನ್ ಗೊತ್ತಾ..? ತಲೈವಾ ಇನ್ಮುಂದೆ ದುಬಾರಿ ಅಲ್ವಂತೆ.. ರಜನಿಕಾಂತ್ 100 ಕೋಟಿ ಸಂಭಾವನೆಗೆ ಬ್ರೇಕ್ ಹಾಕುತ್ತಾರಂತೆ..

ತಮಿಳು ನಟರಿಗೆ ನಿರ್ಮಾಪಕರ ಸಂಘದಿಂದ ಕಂಡಿಷನ್​..!
ತಮಿಳು ಸಿನಿ ಜಗತ್ತನ್ನ ಕಂಟ್ರೋಲ್ ಮಾಡೋದು ಅಲ್ಲಿನ ನಿರ್ಮಾಪಕರ ಸಂಘ. ನಿರ್ಮಾಪಕರ ಸಂಘ ಹೇಳಿದಂತೆ ಸ್ಟಾರ್ಸ್​ಗಳು ನಡೆದುಕೊಳ್ತಾರೆ. ಆದ್ರೆ ಸಂಭಾವನೆ ವಿಷಯದಲ್ಲಿ ಇದು ಸಾಧ್ಯ ಆಗಿರಲಿಲ್ಲ. ಅಲ್ಲಿನ ಸ್ಟಾರ್ಸ್​ಮನಸೋ ಇಚ್ಚೆ ತನ್ನ ರೇಮಂಡ್​ರೇಷನ್ ಹೆಚ್ಚಿಸಿಕೊಳ್ತಿದ್ರು. ಭಟ್ ಈಗ ತಮಿಳು ನಟರಿಗೆ ನಿರ್ಮಾಪಕರ ಸಂಘದಿಂದ ಕಂಡಿಷನ್​ ಹಾಕಿದ್ದಾರೆ. ಆ ಕಾಂಡೀಷನ್​​ನಲ್ಲಿ 75ರ ಹರೆಯದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಇದ್ದು. ಇನ್ಮುಂದೆ 100 ಕೋಟಿಗೂ ಹೆಚ್ಚು ಸಂಭಾವನೆಯನ್ನ ತಲೈವಾಗೆ ಕೊಂಡಗಿಲ್ವಂತೆ.

ಕೂಲಿಗೆ 150 ಕೋಟಿ ಸಂಭಾವನೆ ಪಡೆದಿದ್ದ ರಜನಿ..!
ರಜನಿಕಾಂತ್​ ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 50 ವರ್ಷ ಪೂರೈಸಿದ್ದಾರೆ. ವಯಸ್ಸು 75 ದಾಟಿದ್ರೂ ರಜನಿಕಾಂತ್​ ಕ್ರೇಜ್​ ಇಂಗಿಗೂ ಒಂದು ಕೈ ಹೆಚ್ಚೆ ಇದೆ. ರಜನಿಕಾಂತ್​ ಸಿನಿಮಾ ಬಂದ್ರೆ ಒಂದು ವಾರದ ಟಿಕೆಟ್ ಸೋಲ್ಡ್​ಔಟ್ ಆಗಿತ್ತವೆ. 300 ರಿಂದ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಾರೆ. ಅದಕ್ಕೆ ತಕ್ಕಂತೆ ತಲೈವಾ ಕೂಡ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಕೂಲಿ ಚಿತ್ರಕ್ಕಾಗಿ ತಲೈವಾ 150 ಕೋಟಿ ಸಂಭಾವನೆ ಪಡೆದಿದ್ರು..

ನಟರ ಸಂಭಾವನೆಗೆ ಕಡಿವಾಣ ಹಾಕಿದ್ದೇಕೆ ತಮಿಳು ಚಿತ್ರರಂಗ..?
ನಟರ ಸಂಭಾವನೆ ವಿಷಯದಲ್ಲಿ ಬರಿ ರಜನಿಕಾಂತ್ ಮಾತ್ರ ಟಾರ್ಗೆಟ್ ಆಗಿಲ್ಲ. ಯಾವೆಲ್ಲಾ ಸ್ಟಾರ್ಸ್​​ ಅವರ ಸ್ಟಾರ್​​ಡಮ್​​ಗೂ ಮೀರಿ ಸಂಭಾವನೆ ಪಡೆಯುತ್ತಿದ್ರೋ ಅವರೆಲ್ಲಾ ಈ ಲೀಸ್ಟ್​​ನಲ್ಲಿದ್ದಾರೆ. ನಟ ಧನುಷ್, ದಳಪತಿ ವಿಜಯ್, ತಲಾ ಅಜಿತ್, ಶಿವ ಕಾರ್ತಿಕೇಯನ್. ಸಿಂಭು ಸೇರಿದಂತೆ ಹಲವು ನಟರ ಸಂಭಾವನೆ ಮೇಲೆ ನಿರ್ಭಂದ ಹೇರಲಾಗಿದೆಯಂತೆ. ಇದಕ್ಕೆ ಕಾರಣ ಸಿನಿಮಾಗಳ ಸೋಲು ಹಾಗು ನಿರ್ಮಾಣದ ವೆಚ್ಚಕ್ಕಿಂತ ನಟರ ಸಂಭಾವನೆಯೇ ಹೆಚ್ಚು ಅನ್ನೋ ಕಾರಣವಂತೆ.. 

ಲಾಭದಲ್ಲಿ ಹಣ ಹಂಚಿಕೊಳ್ಳಲು ನಿರ್ಮಾಪಕರ ನಿರ್ಧಾರ..!
ತಮಿಳು ಹೀರೋಗಳು ಕೋಟಿ ಕೋಟಿ ಸಂಭಾವನೆ ಕೊಟ್ಟು ಸಾಕಾಗಿದೆ ಅನ್ನೋದು ತಮಿಳು ನಿರ್ಮಾಪಕರ ವಾದ. ಅದಕ್ಕಾಗಿ 100 ಹೆಚ್ಚು ಸಂಭಾವನೆ ಬೇಡಿಕೆ ಇಟ್ರೆ ಸಿನಿಮಾದಿಂದ ಬಂದ ಲಾಭದ ಹಣದಲ್ಲಿ ಪಾಲು ಪಡೆದುಕೊಳ್ಳಲಿ ಅಂತ ನಿರ್ಧಾರ ಮಾಡಿದ್ದಾರೆ. ಸಿನಿಮಾದಿಂದ ನಷ್ಟ ಆದ್ರೆ ನಿರ್ಮಾಪಕ ನಟರಿಗೂ ಆಗುತ್ತೆ. ಲಾಭವಾದ್ರೆ ನಟರಿಗೂ ಸಿಗುತ್ತೆ. ಹೀಗಾಗಿ ಅದು ರಜನಿಯೇ ಆಗರಲಿ. ಯಾರೇ ಆಆಗಿರಲಿ ತಮಿಳು ಸ್ಟಾರ್ಸ್​ಗಳು ಇನ್ಮುಂದೆ ನೂರಾರು ಕೋಟಿ ಸಂಭಾವನೆ ಕೇಳೋ ಹಾಗಿಲ್ಲ.

OTT ವೆಬ್ ಸರಣಿಯಲ್ಲಿ ನಟಿಸಿದ್ರೆ ಅಸಹಕಾರ..!
ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಸಾಮಾನ್ಯ ಸಭೆ ಚೆನ್ನೈನಲ್ಲಿ ನಡೆದಿದೆ. ಇದರಲ್ಲಿ ಅನೇಕ ನಿರ್ಮಾಪಕರು ಭಾಗವಹಿಸಿದ್ದು, ಈ ಸಭೆಯಲ್ಲಿ 23 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಅವುಗಳಲ್ಲಿ 2 ನಿರ್ಣಯಗಳು ಈಗ ತಮಿಳು ಚಿತ್ರಂಗದಲ್ಲಿ ಹೊಸ ಬಿರುಗಾಳಿ ಎಬ್ಬಿಸಿವೆ. ಒಂದು ನಟರ ಸಂಭಾವನೆ ಮೇಲೆ ಕಡಿವಾಣ, ಮತ್ತೊಂದು ಒಟಿಟಿಯ ವೆಬ್ ಸರಣಿಯಲ್ಲಿ ನಟಿಸುವ ಕಲಾವಿದರಿಗೆ ಅಸಹಕಾರ ಅನ್ನೋ ವಿಚಾರ. ಅಂದ್ರೆ ವೆಬ್​ ಸರಣಿಯಲ್ಲಿ ನಟಿಸಿದ್ರೆ ಸಿನಿಮಾಗಳ ಚಿತ್ರೀಕರಣಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ OTTಯಲ್ಲಿ ನಟಿಸೋ ಸ್ಟಾರ್​ ಗಳಿಗೆ ನಿರ್ಮಾಪಕರು ಸಿನಿಮಾ ಆಫರ್ ಮಾಡಬಾರದು ಅಂತ ಕಟ್ಟಾಜ್ಞೆ ಹೊರಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more