ನಿಜಕ್ಕೂ ಇದು ಅಚ್ಚರಿ, ಕಾಂತಾರ ಸಿನಿಮಾಗೂ ಈ ನೈಜ ಘಟನೆಗೆ ಇದೆ ಹೋಲಿಕೆ...

Oct 9, 2022, 5:57 PM IST

ಕಾಂತಾರ ಸಿನಿಮಾ ಕರಾವಳಿಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದು, ಅಲ್ಲಿಯ ದೈವಾರಾಧನೆಯ ಮಹತ್ವ, ಕಾರಣಿಕ ಶಕ್ತಿಯನ್ನು ತಿಳಿಸಿದೆ. ಇಗ ಚಿತ್ರದಲ್ಲಿನ ಕಥೆಯನ್ನು ನೆನಪಿಸುವ ಘಟನೆ ಬೆಳಕಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಸಿನಿಮಾದಲ್ಲಿ ತೋರಿಸಿರುವ ಮಾದರಿಯಲ್ಲೇ ಘಟನೆ ನಡೆದಿತ್ತು ಎನ್ನಲಾಗಿದೆ. ಪೆರ್ನೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಸಹಜ ಸಾವು, ನಾಗರಹಾವುಗಳ ನಿರಂತರ ಮರಣವಾಗುತ್ತಿದ್ದು, ಅದಲ್ಲದೆ ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಗ್ರಾಮಕ್ಕೆ ಸೇರಿದ ೧೦ ಜನರು ಸಾವನ್ನಪ್ಪಿದ್ದರು. ಈ  ದುರ್ಘಟನೆಗಳಿಗೆ ಕಾರಣವನ್ನು ಹುಡುಕಿ ಹೊರಟಾಗ ದೈವಗಳ ಆರಾಧನೆಯ ನಿರ್ಲಕ್ಷ್ಯ ಎಂದು ತಿಳಿದುಬಂದಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ