‘ಕಬ್ಜ -2’ ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್, ಹೃತಿಕ್ ರೋಷನ್ ಕರೆತರ್ತಾರಾ ಆರ್.ಚಂದ್ರು?

Mar 25, 2023, 4:36 PM IST

ಕಬ್ಜ ಸಿನಿಮಾ ಬಾಕ್ಸ್‌ಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಹೌಸ್ ಫುಲ್ ಬೋರ್ಡ್‌ಗಳು ಥಿಯೇಟರ್ ಮುಂದೆ ರಾರಾಜಿಸುತ್ತಿದೆ. ಇನ್ನು ಆರ್.ಚಂದ್ರು  ಕಬ್ಜ-2 ಗೆ ಸ್ಕೆಚ್ ಹಾಕಿದ್ದು,  ಶಿವಣ್ಣನ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಅದಲ್ಲದೆ  ವಿಲನ್ ರೋಲ್‌ಗೆ ಬಾಲಿವುಡ್‌ನ ದೊಡ್ಡ ನಟರೊಬ್ಬರ ಬಳಿ ಕೂಡ ಮಾತಾಡಿದ್ದಾರೆ  ಎನ್ನಲಾಗಿದೆ. ಅದಲ್ಲದೆ  ಪ್ರಮುಖ ಪಾತ್ರವೊಂದಕ್ಕೆ ನಾನಾಪಾಟೇಕರ್ ಫಿಕ್ಸ್ ಎನ್ನಲಾಗಿದ್ದು,  ಇನ್ನು ಕಬ್ಜ2 ನ ಬಹುಮುಖ್ಯ ಪಾತ್ರ ಒಂದರಲ್ಲಿ  ಹೃತಿಕ್ ರೋಷನ್ ಕರೆತರೊ ಪ್ಲ್ಯಾನ್ ಕೂಡ ಜೋರಾಗಿ ನಡೀತಿದೆ ಎಂದು ಮಾತನಾಡಲಾಗುತ್ತಿದೆ.