ಈ ಬಾರಿಯ ಗಣೇಶ ಹಬ್ಬದಲ್ಲಿ ಗಮನ ಸೆಳೆದ ಗಣಪತಿ ಎಂದರೆ ಪುನೀತ್ ರಾಜ್ ಕುಮಾರ್, ಕೆಜಿಎಫ್ ಹಾಗೂ ಪುಷ್ಪ ಜೊತೆ ಇರುವ ಗಣೇಶಗಳು. ಜೊತೆಗೆ ಅಲ್ಲು ಅರ್ಜುನ್ ಅವರ ತಗ್ಗದೆಲೆ ಗಣೇಶ ಕೂಡ ಮಾರುಕಟ್ಟೆಯಲ್ಲಿ ಕಂಡುಬಂದಿದೆ.
ದೇಶದಾದ್ಯಂತ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ದೇಶದ ಜನತೆ ಗಣೇಶ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ಗಣೇಶ ಮೂರ್ತಿಯನ್ನು ಕರೆತಂದು ಅದ್ದೂರಿಯಾಗಿ ಪೂಜೆ ಮಾಡುತ್ತಿದ್ದಾರೆ. ಭಕ್ತಿಯಿಂದ ಗಣೇಶನ ಆರಾಧನೆ ಮಾಡುತ್ತಿದ್ದಾರೆ. ಈ ಬಾರಿಯ ಗಣೇಶ ಹಬ್ಬದಲ್ಲಿ ಗಮನ ಸೆಳೆದ ಗಣಪತಿ ಎಂದರೆ ಪುನೀತ್ ರಾಜ್ ಕುಮಾರ್, ಕೆಜಿಎಫ್ ಹಾಗೂ ಪುಷ್ಪ ಜೊತೆ ಇರುವ ಗಣೇಶಗಳು. ಹೌದು, ಪ್ರತಿವರ್ಷ ಗಣೇಶನ ಜೊತೆ ವಿಶೇಷವಾದ ಮೂರ್ತಿಗಳು ಗಮನಸೆಳೆಯುತ್ತವೆ. ಈ ಬಾರಿ ಹೆಚ್ಚಾಗಿ ಗಣಪನ ಜೊತೆ ಅಪ್ಪು ಇರುವ ಮೂರ್ತಿಗಳು ಅಭಿಮಾನಿಗಳ ಮನಸೆಳೆಯುತ್ತಿವೆ. ಇನ್ನು ಅಲ್ಲು ಅರ್ಜುನ್ ಅವರ ತಗ್ಗದೆಲೆ ಗಣೇಶ ಕೂಡ ಮಾರುಕಟ್ಟೆಯಲ್ಲಿ ಕಂಡುಬಂದಿದೆ.