
ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಅವಕಾಶ ಮಾಡಿಕೊಡಿ ಅಂತ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಸುಪ್ರೀಂ ಕೋರ್ಟ್ ಈ ಕುರಿತ ಆದೇಶವನ್ನ ಕೊಟ್ಟಿದ್ದು, ಸಿನಿಮಾ ರಿಲೀಸ್ ಗೆ ಅಡ್ಡಿ ಪಡಿಸೋದು ತಪ್ಪು ಅಂದಿದೆ. ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕೋರ್ಟ್ ಏನೋ ಸಿನಿಮಾ ರಿಲೀಸ್ಗೆ ಅನುಮತಿ ಕೊಟ್ಟಿದೆ. ಆದರೂ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ತೆರೆಗೆ ಬರೋದು ಅನುಮಾನನೇ. ಯಾಕಂದ್ರೆ ಈ ಚಿತ್ರ ಈಗಾಗ್ಲೇ ರಿಲೀಸ್ ಆಗಿ ಹನ್ನೆರಡು ದಿನಗಳಾಯ್ತು. ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್ ಬಂದಿದ್ದು ಬಾಕ್ಸಾಫೀಸ್ನಲ್ಲಿ ಸಿನಿಮಾ ನೆಲಕಚ್ಚಿದೆ. ತಮಿಳುನಾಡಿನಲ್ಲೇ ಬಹುತೇಕ ಚಿತ್ರಮಂದಿರಗಳಿಂದ ಥಗ್ ಲೈಫ್ ಮೂವಿ ಎತ್ತಂಗಡಿ ಆಗಿದೆ. ಸೋ ಆಲ್ ರೆಡಿ ಫ್ಲಾಫ್ ಪಟ್ಟ ಪಡೆದಿರೋ ಚಿತ್ರವನ್ನ ಕರ್ನಾಟಕದಲ್ಲಿ ವಿತಕರು ರಿಲೀಸ್ ಮಾಡೋದಕ್ಕೆ ಮುಂದಾಗೋದು ಅನುಮಾನವೇ. ಫಿಲ್ಮ್ ಚೇಂಬರ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು ಸಿನಿಮಾ ರಿಲೀಸ್ ಮಾಡೋದು ವಿತರಕರ ಆಯ್ಕೆ ಅಂದಿದೆ.