ಟಾಲಿವುಡ್ ಸ್ಟಾರ್ ನಾನಿ ಕಮರ್ಷಿಯಲ್ ಸಿನಿಮಾಗಳ ಪರವಾಗಿ ಮಾತನಾಡಿದ್ದು, ನಿರ್ದೇಶಕ ವೆಂಕಟೇಶ್‌ಗೆ ಟಾಂಗ್ ನೀಡಿದ್ದಾರೆ.
'ಕೆಜಿಎಫ್' ಸಿನಿಮಾದ ಕುರಿತು ತೆಲುಗು ಸಿನಿಮಾದ ನಿರ್ದೇಶಕ ವೆಂಕಟೇಶ್ ಮಹಾ ಬಾಯಿಗೆ ಬಂದಂತೆ ಮಾತನಾಡಿದ್ದು,'ಕೆಜಿಎಫ್' ಸಿನಿಮಾದ ಕಥೆ ಮತ್ತು ಹೀರೋ ಪಾತ್ರವನ್ನು ಬಗ್ಗೆ ಕೆಟ್ಟದಾಗಿ ಹೀಯಾಳಿಸಿದ್ದರು. ಇದಕ್ಕೆ ಟಾಲಿವುಡ್ ಸ್ಟಾರ್ ನಾನಿ ಕಮರ್ಷಿಯಲ್ ಸಿನಿಮಾಗಳ ಪರವಾಗಿ ಮಾತನಾಡಿದ್ದು, ನಿರ್ದೇಶಕ ವೆಂಕಟೇಶ್‌ಗೆ ಟಾಂಗ್ ನೀಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರ ಆದಾಯವನ್ನು ತರುತ್ತವೆ. ಅಂಥ ಸಿನಿಮಾಗಳಿಂದ ನಿರ್ಮಾಪಕರ ಜೇಬು ತುಂಬಿದಾಗ ಮಾತ್ರ ಅವರು, ಇಂಟರೆಸ್ಟಿಂಗ್ ಆಗಿರುವಂತಹ ಪ್ರಾಜೆಕ್ಟ್‌ಗಳನ್ನು ಅವರು ನಿರ್ಮಾಣ ಮಾಡುತ್ತಾರೆ. ಒಂದು ವೇಳೆ ಕಮರ್ಷಿಯಲ್ ಸಿನಿಮಾಗಳೇ ಇಲ್ಲವಾದರೆ, ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರಲು ಸಾಧ್ಯವಾಗುವುದಿಲ್ಲ ಮತ್ತು ಬೇರೆ ಥರದ ಸಿನಿಮಾಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.