ಪರಭಾಷೆಯ ಬಿಗ್ ಸಿನಿಮಾಗಳು ಬಂದಾಗ ಬೆಂಗಳೂರಿನಲ್ಲಿ ಟಿಕೆಟ್ ಬೆಲೆ ಹೆಚ್ಚು ಮಾಡಿ ಲೂಟಿ ಮಾಡೋದು ಸಾಮಾನ್ಯ. ರಜನಿಕಾಂತ್ ನಟನೆಯ ಕೂಲಿ ಸಿನಿಮಾ ವಿಚಾರದಲ್ಲೂ ಅದೇ ನಡೀತಿದೆ. ತಮಿಳುನಾಡಿನಲ್ಲಿ ಕೂಲಿ ಸಿನಿಮಾ ಟಿಕೆಟ್ ಬೆಲೆ 60ರೂಪಾಯಿ. ಆದ್ರೆ ಬೆಂಗಳೂರಿನಲ್ಲಿ ಈ ತಮಿಳು ಸಿನಿಮಾಗೆ 1000 ಸಾವಿರ ರೂಪಾಯಿ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಕೂಲಿ ಸಿನಿಮಾ ನಾಳೆ ವಿಶ್ವದಾದ್ಯಂತ ತೆರೆಗೆ ಬರ್ತಾ ಬೆಂಗಳೂರಿನಲ್ಲೂ ತಲೈವಾ ಸಿನಿಮಾ ಕ್ರೇಜ್ ಜೋರಾಗಿದೆ. ಎಂದಿನಂತೆ ಬೆಂಗಳೂರಿನಲ್ಲಿ ಟಿಕೆಟ್ ದರ ಯದ್ವಾತದ್ವಾ ಹೆಚ್ಚಿಸಿ ಅಕ್ಷರಶಃ ಲೂಟಿ ಮಾಡಲಾಗ್ತಾ ಇದೆ. ತಮಿಳುನಾಡಿನಲ್ಲಿ ಈ ಸಿನಿಮಾ 60 ರೂಪಾಯಿಯಲ್ಲಿ ನೋಡಬಹುದು. ಆದ್ರೆ ಬೆಂಗಳೂರಿನಲ್ಲಿ ಈ ಸಿನಿಮಾ ನೋಡಬೇಕು ಅಂದರೆ ಕನಿಷ್ಟ 500 ರೂಪಾಯಿ ಬೇಕು.