ದೀಪಾವಳಿಗೆ ಪಟಾಕಿ ಹೊಡೆದವ್ರು ಮೂರ್ಖರು, ಸೋನಾಕ್ಷಿ ವಿದೇಶದಲ್ಲಿ ಮಾಡಿದ್ದೇನು?

ದೀಪಾವಳಿಗೆ ಪಟಾಕಿ ಹೊಡೆದವ್ರು ಮೂರ್ಖರು, ಸೋನಾಕ್ಷಿ ವಿದೇಶದಲ್ಲಿ ಮಾಡಿದ್ದೇನು?

Published : Jan 03, 2025, 11:47 AM ISTUpdated : Jan 03, 2025, 12:34 PM IST

ದೀಪಾವಳಿಗಾದ್ರೆ ಮಾಲಿನ್ಯ.. ಹೊಸ ವರ್ಷಕ್ಕೆ ಪಟಾಕಿ ಹೊಡೆದ್ರೆ ಮಾಲಿನ್ಯ ಆಗಲ್ವಾ ಅಂತ ಜನ ಸೋನಾಕ್ಷಿಗೆ ಪ್ರಶ್ನೆ ಕೇಳ್ತಾ ಇದ್ದಾರೆ. ಅಂದಿನ ಮತ್ತು ಇಂದಿನ ಸ್ಟೇಟಸ್​​ನ ಜೊತೆಗೆ ಹಾಕಿ ಸೋನಾಕ್ಷಿ ಮತ್ತವಳ ಗಂಡನನ್ನ ಟ್ರೋಲ್ ಮಾಡಲಾಗ್ತಾ ಇದೆ...

ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾಗೆ (Sonakshi Sinha) ಸೋಷಿಯಲ್ ಮಿಡಿಯಾದಲ್ಲಿ ಎಲ್ಲರೂ ತಪರಾಕಿ ಹಾಕ್ತಾ ಇದ್ದಾರೆ. ಫ್ಯಾನ್ಸ್ ಕೇಳ್ತಿರೋ ಪ್ರಶ್ನೆಗಳ ಮುಂದೆ ಕಕ್ಕಾಬಿಕ್ಕಿಯಾಗಿರೋ ಸೋನಾಕ್ಷಿ ಕಾಮೆಂಟ್​ ಬಾಕ್ಸ್ ಅನ್ನೇ ಆಫ್ ಮಾಡಿಕೊಂಡು ಸೈಲೆಂಟ್ ಮೋಡ್​ಗೆ ಹೋಗಿದ್ದಾಳೆ. ಅಷ್ಟಕ್ಕೂ ಏನಿದು ಸೋನಾಕ್ಷಿಯ ಪಟಾಕ್ಷಿ ವಿವಾದ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಹೌದು, ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಪಾಲ್ ಜೊತೆಗೆ ಆಸ್ಟ್ರೇಲಿಯಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿಕೊಂಡಿದ್ದಾಳೆ. ನವವಿವಾಹಿತ ಜೋಡಿ ಹೊಸ ವರ್ಷದ ಸಂಭ್ರಮಾಚರಣೆಯನ್ನ ಖುಷಿ ಖುಷಿಯಾಗಿ ಆಚರಿಸಿ ಎಂಜಾಯ್ ಮಾಡಿದ್ದಾರೆ. ಆ ಸೆಲೆಬ್ರೇಷನ್ ಫೋಟೋಸ್​​ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಆದ್ರೆ ಈ ಫೋಟೋಸ್ ಹಾಕಿದ್ದೇ ಹಾಕಿದ್ದು, ಸೋನಾಕ್ಷಿಯ ನೆಮ್ಮದಿಯೇ ಹಾಳಾಗಿ ಹೋಗಿದೆ. ಈ ಫೋಟೋಸ್ ನೋಡಿದ ನೆಟ್ಟಿಗರು ಸೋನಾಕ್ಷಿಗೆ  ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳೆದ ಸಾರಿ ದೀಪಾವಳಿ ಹೊತ್ತಲ್ಲಿ ಪಟಾಕಿ ಹೊಡೆಯೋ ಫೋಟೋ ಶೇರ್ ಮಾಡಿ ಇದ್ರಿಂದ ಮಾಲಿನ್ಯ ಆಗುತ್ತೆ. ಪಟಾಕಿ ಹೊಡೆಯುವವರಿಗೆ ಬುದ್ದಿ ಇಲ್ವಾ ಅಂತ ಸೋನಾಕ್ಷಿ ಸ್ಟೇಟಸ್ ಹಾಕಿದ್ಳು. ಆದ್ರೆ ಈಗ ನೋಡಿದ್ರೆ ಹೊಸ  ವರ್ಷಕ್ಕೆ ಪಟಾಕಿ ಸಿಡಿಸೋ ವಿಡಿಯೋ ಶೇರ್ ಮಾಡಿ ಮಜಾ ಮಾಡಿಕೊಂಡು ಫೋಟೋಸ್ ಹಾಕಿದ್ದಾರೆ.

ದೀಪಾವಳಿಗಾದ್ರೆ ಮಾಲಿನ್ಯ.. ಹೊಸ ವರ್ಷಕ್ಕೆ ಪಟಾಕಿ ಹೊಡೆದ್ರೆ ಮಾಲಿನ್ಯ ಆಗಲ್ವಾ ಅಂತ ಜನ ಸೋನಾಕ್ಷಿಗೆ ಪ್ರಶ್ನೆ ಕೇಳ್ತಾ ಇದ್ದಾರೆ. ಅಂದಿನ ಮತ್ತು ಇಂದಿನ ಸ್ಟೇಟಸ್​​ನ ಜೊತೆಗೆ ಹಾಕಿ ಸೋನಾಕ್ಷಿ ಮತ್ತವಳ ಗಂಡನನ್ನ ಟ್ರೋಲ್ ಮಾಡಲಾಗ್ತಾ ಇದೆ.

ಅಸಲಿಗೆ ಸೋನಾಕ್ಷಿ ತಂದೆ ಶತ್ರುಘ್ನ ಸಿಹ್ನಾ ಅಪ್ಪಟ ರಾಮಭಕ್ತ. ಇವರ ಮನೆಮಂದಿಗೆಲ್ಲಾ ರಾಮಯಣದ ಹೆಸರುಗಳನ್ನ ಇಟ್ಟಿದ್ದಾರೆ. ಆದ್ರೆ ಸೋನಾಕ್ಷಿ ವರಿಸಿದ್ದು ಮುಸ್ಲಿಂ ಯುವಕನನ್ನ. ಅದನ್ನೂ ಎಳೆದು ತಂದು ಈಗ ಸೋನಾಕ್ಷಿಯನ್ನ ಟ್ರೋಲ್ ಮಾಡಲಾಗ್ತಾ ಇದೆ.

ಹಿಂದೂ ಹಬ್ಬಗಳಿಗೆ ಪಾಠ ಹೇಳುವ ನಿಮಗೆ ಈ ಟೈಂನಲ್ಲಿ ಆ ಪಾಠ ನೆನಪಾಗಲ್ವಾ..? ಇದು ಡಬಲ್ ಸ್ಟಾಂಡರ್ಡ್ ಅಲ್ವಾ ಅಂತ ಜನ ಪ್ರಶ್ನೆ ಕೇಳ್ತಾ ಇದ್ದಾರೆ. ಜನರ ಪ್ರಶ್ನೆಗಳ ಬಾಣ ಎದುರಿಸದೇ ಸೋನಾಕ್ಷಿ ಮತ್ತವಳ ಪತಿ ಕಾಮೆಂಟ್ಸ್ ಬಾಕ್ಸ್ ಆಫ್ ಮಾಡಿಕೊಂಡಿದ್ದಾರೆ. ಪಟಾಕಿ ಹೊಡೆಯೋಕೆ ಹೋಗಿ ತಪರಾಕಿ ಬೀಳ್ತಲ್ಲಪ್ಪಾ ಅಂತ ಗೋಳಾಡ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್