ಹೋದಲ್ಲಿ ಬಂದಲ್ಲಿ ಶ್ರೀನಿಧಿ ಶೆಟ್ಟಿಗೆ ರಮಿಕಾ ಸೇನ್ ಕಾಟ, ಡಾಮಿನೇಟ್ ಆಗ್ತಿದ್ದಾರಾ ಕೆಜಿಎಫ್ ಕ್ವೀನ್..?

ಹೋದಲ್ಲಿ ಬಂದಲ್ಲಿ ಶ್ರೀನಿಧಿ ಶೆಟ್ಟಿಗೆ ರಮಿಕಾ ಸೇನ್ ಕಾಟ, ಡಾಮಿನೇಟ್ ಆಗ್ತಿದ್ದಾರಾ ಕೆಜಿಎಫ್ ಕ್ವೀನ್..?

Published : May 16, 2022, 04:52 PM ISTUpdated : May 16, 2022, 05:40 PM IST

ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ರವೀನಾಗೆ (Raveena Tondon) ಕೆಜಿಎಫ್-2 ನಲ್ಲಿ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು. ಕೆಜಿಎಫ್-2 ಸಿನಿಮಾದ ಹೀರೋಯಿನ್ ನಾನೆ ಅನ್ನೋ ಹಾಗೆ ಹೋದಲ್ಲಿ ಬಂದಲ್ಲೆಲ್ಲಾ ವರ್ತಿಸಿದ್ದಾರೆ ರವೀನಾ ಟಂಡನ್. 

ರವೀನಾ ಟಂಡನ್.. ಒಂದ್ ಕಾಲದಲ್ಲಿ ಬಾಲಿವುಡ್  ಮಿಂಚುಳ್ಳಿ. ಕನ್ನಡ ಸಿನಿ ಪ್ರೇಕ್ಷರಿಗೆ ಮಾತ್ರ ಇಂದಿಗೂ ಮಸ್ತ್ ಮಸ್ತ್ ಹುಡುಗಿ. ಕಳೆದ 32 ವರ್ಷದಿಂದ ಸಿನಿಮಾ ಜಗತ್ತಿನಲ್ಲಿರೋ ರವೀನಾ ಟಂಡನ್  (Raveena Tondon) 2015 ರಿಂದೀಚೆಗೆ ಸುದ್ದಿಯೇ ಇರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ರವೀನಾಗೆ ಕೆಜಿಎಫ್-2ನಲ್ಲಿ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು. ಕೆಜಿಎಫ್-2 ಸಿನಿಮಾದ ಹೀರೋಯಿನ್ ನಾನೆ ಅನ್ನೋ ಹಾಗೆ ಹೋದಲ್ಲಿ ಬಂದಲ್ಲೆಲ್ಲಾ ವರ್ತಿಸಿದ್ದಾರೆ ರವೀನಾ ಟಂಡನ್. ಕೆಜಿಎಫ್ನಲ್ಲಿ ರಾಕಿ ರಾಣಿ ಶ್ರೀನಿಧಿ ಶೆಟ್ಟಿ. ಆದ್ರೆ ಕೆಜಿಎಫ್-2 ಸಿನಿಮಾದ ಪ್ರಮೋಷನ್ಗೆ ಹೋದ್ರೆ ನಾನೆ ಎಲ್ಲಾ. ನಂದೇ ಎಲ್ಲಾ ಅಂತ ಶ್ರೀನಿಧಿ ಶೆಟ್ಟಿಯನ್ನ (Shrinidhi Shetty) ಅವಯ್ಡ್ ಮಾಡುತ್ತಿದ್ರು ರವೀನಾ ಟಂಡನ್. ಯಾವ್ ಮಟ್ಟಕ್ಕೆ ಅಂದ್ರೆ ರಾಕಿಯ ಅಕ್ಕ ಪಕ್ಕದಲ್ಲೂ ಶ್ರೀನಿಧಿಯನ್ನ ಸುಳಿಯಲು ಬಿಟ್ಟಿಲ್ಲ ರವೀನಾ ಟಂಡನ್. 

ಶ್ರೀನಿಧಿ ಶೆಟ್ಟಿಯನ್ನ ಬಿಟೌನ್ ಬ್ಯೂಟಿ ರವೀನಾ ಟಂಡನ್ ಸಿಕ್ಕಾಪಟ್ಟೆ ಡಾಮಿನೇಟ್ ಮಾಡಿದ್ದಾರೆ. ಇದಕ್ಕೆ ಮತ್ತೊಂದು ಎಕ್ಸಾಂಪಲ್ ಕೂಡ ಇದೆ. ಕೆಜಿಎಫ್-2 ಸಿನಿಮಾದ ಪ್ರಚಾರಕ್ಕೆ ಹೋದಲ್ಲೆಲ್ಲಾ ಶ್ರೀನಿಧಿಯನ್ನ ಪಕ್ಕಕ್ಕೆ ತಳ್ಳಿ ಯಶ್ ಪಕ್ಕ ಬಂದು ನಿಲ್ತಿದ್ದ ರವೀನಾ ಟಂಡನ್, ಕ್ಯಾಮೆರಾ ಕಂಡೊಡನೆ ಓಡೋಡಿ ಬಂದು ಯಶ್ ಜೊತೆ ನಿಂತು ಫೋಟೋಗೆ ಪೋಸ್ ಕೊಡ್ತಿದ್ರು. ಇದನ್ನೆಲ್ಲಾ ನೋಡಿಯೂ ನೋಡಿಲ್ಲದ ಹಾಗೆ ಶ್ರೀನಿಧಿ ಶೆಟ್ಟಿ ಸುಮ್ಮನಾಗುತ್ತಿದ್ರು.

ಸಾಮಾನ್ಯವಾಗಿ ಒಂದ್ ಸಿನಿಮಾ ಸುದ್ದಿಗೋಷ್ಠಿ ಅಂದ್ರೆ ಮೊದ್ಲಿಗೆ ಹೀರೋ ಹೀರೋಯಿನ್ ಅಕ್ಕ ಪಕ್ಕದಲ್ಲಿ ನಿಲ್ತಾರೆ ಕೂರ್ತಾರೆ. ಆದ್ರೆ ಕೆಜಿಎಫ್-2 ಸಿನಿಮಾ ಪ್ರಮೋಷನ್ ಸಮಯದಲ್ಲಿ ಹಾಗಾಗಿಲ್ಲ, ಶ್ರೀನಿಧಿ ಸಿನಿಮಾ ಹೀರೋಯಿನ್ ಆಗಿದ್ರೂ, ಯಶ್ ಅಕ್ಕ ಪಕ್ಕ ಕಾಣ್ತಿದ್ದದ್ದು ರವೀನಾ ಟಂಡನ್ ಮಾತ್ರ. ಮಾಧ್ಯಮಗೋಷ್ಠಿ ಒಂದರಲ್ಲಿ ಕುಳಿತಿದ್ದ ರವೀನಾ ಟಂಡನ್ ಕಾಲು ತಾಗಿಸಿ ನೀರಿನ ಬಾಟಲಿ ಹಾಗು ಮೈಕ್ ಅನ್ನ ಕೆಡವಿದ್ರು. ಆದ್ರೆ ಅದನ್ನ ಎತ್ತಿಡುವ ಸೌಜನ್ಯವನ್ನೂ ರವೀನಾ ಟಂಡನ್ ತೋರಿಸಲಿಲ್ಲ. ಭಟ್ ಪಕ್ಕದಲ್ಲೇ ಇದ್ದ ಕೆಜಿಎಫ್ ಕ್ವೀನ್ ಶ್ರೀನಿಧಿ ತಕ್ಷಣ ನೀರಿನ ಬಾಟಲಿ ಹಾಗು ಮೈಕ್ ಅನ್ನ ಎತ್ತಿಟ್ರು. ಹೀಗೆ ಮಾಡಿದ್ದಕ್ಕೆ ಶ್ರೀನಿಧಿಗೆ ಒಂದು ಥ್ಯಾಕ್ಸ್ ಕೂಡ ಹೇಳದೇ ಕುಳಿತಿದ್ರು ರವೀನಾ.

 

ರವೀನಾ ಟಂಡನ್ ಶ್ರೀನಿಧಿ ವಿಷಯದಲ್ಲಿ ಯಾಕಿಂಗೆ ಅಂತ ಕೇಳುವಷ್ಟು ಮಟ್ಟಕ್ಕೆ ಶ್ರೀನಿಧಿಯನ್ನ ಡಾಮಿನೇಟ್ ಮಾಡಿದ್ದಾರೆ ರವೀನಾ ಟಂಡನ್. ಆದ್ರೆ ಯಶ್ ಹಾಗಲ್ಲ. ಕೆಜಿಎಫ್-2 ಪ್ರಮೋಷನ್ಗೆ ಕರ್ನಾಟಕ ಮುಂಬೈ, ಹೈದರಾಬಾದ್ ಆಂಧ್ರ ಅಂತ ಸುತ್ತುತ್ತಿದ್ದ ಯಶ್ ತಮ್ಮ ಕೋ ಸ್ಟಾರ್ ಶ್ರೀನಿಧಿಗೆ ಒಂದು ಕಂಫರ್ಟ್ ಫೀಲ್ ಕೊಟ್ಟು ತಮ್ಮ ಜೊತೆಗೆ ಶ್ರೀನಿಧಿಯನ್ನೂ ಗುರುತಿಸಿಕೊಳ್ಳುವಂತೆ ಮಾಡಿದ್ರು. ಯಶ್ರನ್ನ ಕ್ಯಾಮೆರಾಗಳು ಮುತ್ತಿಕೊಳ್ಳುತ್ತಿದ್ರೆ. ಶ್ರೀನಿಧಿಯನ್ನ ಪಕ್ಕದಲ್ಲಿ ಕರೆದು ನಿಲ್ಲಿಸಿಕೊಂಡು ಫೋಟೋಗೆ ಪೋಸ್ ಕೊಡುತ್ತಿದ್ರು ಯಶ್. ಏನೇ ಆದ್ರು ಮಿಸ್ ಸುಪ್ರ ನ್ಯಾಷನಲ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರೋ ಶ್ರೀನಿಧಿ ಇಂದು ರೀನಾ ಆಗಿ ಹತ್ತಾರು ಕೋಟಿ ಜನರ ಮನಸ್ಸು ಗೆದ್ದಿದ್ದಾರೆ. ಮತ್ತೊಂದ್ ಕಡೆ ಡಾಮಿನೇಟ್ ಮಾಡೋದು ಬಾಲಿವುಡ್ ಮಂದಿಯ ಹುಟ್ಟುಗುಣ ಅಂತ ರವೀನಾ ಟಂಡನ್ ಪದೇ ಪದೇ ತೋರಿಸಿಕೊಟ್ಟಿದ್ದಾರೆ.  
 

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್