ಬೆಟ್ಟಿಂಗ್ ಆಪ್ಗಳನ್ನ ಪ್ರಮೋಟ್ ಮಾಡಿದ ಸೆಲೆಬ್ರಿಟಿಗಳ ಹಿಂದೆ ಬಿದ್ದಿರೋ ಇಡಿ, ಒಬ್ಬೊರದ್ದೇ ವಿಚಾರಣೆ ನಡೆಸ್ತಾ ಇದೆ. ಸದ್ಯ ವಿಜಯ್ ದೇವರಕೊಂಡ ಇಡಿ ವಿಚಾರಣೆಗೆ ಹಾಜರಾಗಿದ್ದು ಅವರ ಹಣಕಾಸು ವಹಿವಬಾಟು, ಬ್ಯಾಂಕ್ ವಿವರಗಳ ಬಗ್ಗೆ ಇಡಿ ತನಿಖೆ ನಡೆಯಲಿದೆ.
ಬೆಟ್ಟಿಂಗ್ ಆಪ್‌ಗಳ ಜಾಹೀರಾತಿನಲ್ಲಿ ನಟಿಸಿದ ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್ ನೀಡಿರೋ ವಿಷ್ಯ ಗೊತ್ತೇ ಇದೆ. ಸದ್ಯ ಒಬ್ಬೊರನ್ನೇ ವಿಚಾರಣೆ ಮಾಡಲಾಗ್ತಾ ಇದ್ದು, ಮಂಗಳವಾರ ವಿಜಯ್ ದೇವರಕೊಂಡ ವಿಚಾರಣೆ ಎದುರಿಸಿದ್ದಾರೆ.ಈ ಆಪ್ ಪ್ರಚಾರಕ್ಕೆ ಎಷ್ಟು ಹಣ ಸಂಭಾವನೆ ರೂಪದಲ್ಲಿ ಬಂದಿತ್ತು. ಯಾವ ರೂಪದಲ್ಲಿ ಹಣ ಸ್ವೀಕರಿಸಿದ್ರಿ ಅನ್ನೋ ಪ್ರಶ್ನೆಗಳನ್ನ ವಿಜಯ್ ದೇವರಕೊಂಡ ಎದುರು ಇಡಲಾಗಿದೆ. ದೇವರಕೊಂಡ ಹಣಕಾಸು ವಹಿವಾಟುಗಳು ಮತ್ತು ಬ್ಯಾಂಕ್ವಿವರಗಳ ಬಗ್ಗೆ ಕೂಡ ವಿಚಾರಣೆ ನಡೆದಿದೆ. ಯೆಸ್ ಕಳೆದ ವಾರ ತೆರೆಗೆ ಬಂದ ಕಿಂಗ್ಡಮ್ ಸಿನಿಮಾ ವಿಜಯ್ ದೇವರಕೊಂಡಗೆ ದೊಡ್ಡ ಗೆಲುವು ತಂದುಕೊಡುತ್ತೆ ಅನ್ನಲಾಗಿತ್ತು. ಮೊದಲ ದಿನ ಸಿನಿಮಾ ವರ್ಲ್ಡ್ವೈಡ್ 30 ಪ್ಲಸ್ ಕೋಟಿ ಗಳಿಕೆ ಮಾಡಿದ್ದನ್ನ ನೋಡಿ ವಿಜಯ್ ದೇವರಕೊಂಡ ಸಕ್ಸಸ್ ಪಾರ್ಟಿ ಮಾಡಿದ್ರು. ಆದ್ರೆ ಭರ್ಜರಿ ಓಪನಿಂಗ್ ಪಡೆದ ಸಿನಿಮಾದ ಕಲೆಕಕ್ಷ್ ಎರಡನೇ ದಿನದಿಂದಲೇ ಡಲ್ ಆಯ್ತು.