Mar 23, 2023, 11:22 AM IST
ನಟ-ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ಎಂಬವರು ಶೀಘ್ರದಲ್ಲೇ ದಕ್ಷಿಣ ಭಾರತದ ನಟಿ ಮೀನಾ ಅವರನ್ನು ಧನುಷ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರೂ ಒಂಟಿಯಾಗಿರುವುದರಿಂದ ತಮ್ಮ ಅಗತ್ಯಗಳು ಮತ್ತು ಆಸೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ. ಇದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.ಸ್ವಾತಿ ಮುತ್ತು ಸಿಂಹಾದ್ರಿಯ ಸಿಂಹ ಮೈ ಆಟೊಗ್ರಾಪ್ ಸೇರಿದಂತೆ ಕನ್ನಡ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಮೀನಾ ರಜಿನಿ ಮಾಜಿ ಅಳಿಯ ಧನುಷ್ ಜೊತೆ ಮದುವೆಯಾಗಲಿರುವುದು ನಿಜಾನಾ? ಬನ್ನಿ ಕಂಪ್ಲೀಟ್ ಡೀಟೈಲ್ ತಿಳಿದುಕೊಳ್ಳೋಣ.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ. ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿರುವ ನಟಿ ಮೀನಾ ಅನೇಕರಿಗೆ ಅಚ್ಚುಮೆಚ್ಚು. ಇತ್ತೀಚೆಗಷ್ಟೇ, ಅಂದ್ರೆ 2022ರಲ್ಲಿ ಮೀನಾ ಅಭಿನಯದ ಮಲಯಾಳಂ ಸಿನಿಮಾ ‘ಬ್ರೋ ಡ್ಯಾಡಿ’ ತೆರೆಗೆ ಬಂದಿತ್ತು. ಮೀನಾ ಅವರ ಪತಿ ವಿದ್ಯಾಸಾಗರ್ ಕಳೆದ ವರ್ಷ ನಿಧನರಾದರು. ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯದಿಂದಾಗಿ ವಿದ್ಯಾಸಾಗರ್ ಮೃತಪಟ್ಟರು. ಇದೀಗ ನಟಿ ಮೀನಾ ಅವರ ಬಗ್ಗೆ ಹೊಸ ಗುಸುಗುಸು ಕೇಳಿಬರುತ್ತಿದೆ. ಅದೇ ಕೊಲೆವೆರಿ ಡಿ ಖ್ಯಾತಿಯ ನಟ ಧನುಷ್ ಜೊತೆ ಮೀನಾ ಮದುವೆ. ತಮಿಳು ಸ್ಟಾರ್ ನಟ ಧನುಷ್ ಮತ್ತು ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರನ್ನು ಚಿತ್ರರಂಗದಲ್ಲಿ ಪವರ್ ಜೋಡಿ ಎಂದು ಪರಿಗಣಿಸಲಾಗಿತ್ತು. ಆದರೆ 18 ವರ್ಷಗಳ ದಾಂಪತ್ಯದ ನಂತರ ಇಬ್ಬರೂ ತಮ್ಮ ವಿಚ್ಛೇದನವನ್ನು ಘೋಷಿಸಿದಾಗ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು.
ಈ ವಿಚ್ಛೇದಿತ ಜೋಡಿ ಬೇರೆಯಾಗಲು ಕಾರಣ ‘ಸರಿಪಡಿಸಲಾಗದ ಭಿನ್ನಾಭಿಪ್ರಾಯ’ಗಳು ಎಂದು ಉಲ್ಲೇಖಿಸಿದ್ದಾರೆ ಇಬ್ಬರೂ ಇದೀಗ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಧನುಷ್ ಮತ್ತು ಮೀನಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ನಟ ಬೈಲಾನ್ ರಂಗನಾಥನ್ ಮಾಹಿತಿ ಹಂಚಿಕೊಂಡಿದ್ದಾರೆ. ಧನುಷ್- ಮೀನಾ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂದು ಬೈಲಾನ್ ರಂಗನಾಥನ್ ಹೇಳಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಷ್ಷಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.