ರಶ್ಮಿಕಾ ಮಂದಣ್ಣ ಅಕೌಂಟ್​​ಗೆ ಮತ್ತೊಂದು ಹಿಟ್: ನೂರು ಕೋಟಿ ಬಾಚಿದ ಕುಬೇರ

ರಶ್ಮಿಕಾ ಮಂದಣ್ಣ ಅಕೌಂಟ್​​ಗೆ ಮತ್ತೊಂದು ಹಿಟ್: ನೂರು ಕೋಟಿ ಬಾಚಿದ ಕುಬೇರ

Published : Jun 27, 2025, 04:19 PM IST

ರಶ್ಮಿಕಾ ಅಕೌಂಟ್​ಗೆ ಮತ್ತೊಂದು ನೂರು ಕೋಟಿಯ ಸಿನಿಮಾ ಸೇರ್ಪಡೆಯಾಗಿದೆ. ಧನುಷ್, ನಾಗಾರ್ಜುನ, ರಶ್ಮಿಕಾ ನಟನೆಯ ಕುಬೇರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಅನ್ನಿಸಿಕೊಂಡಿದೆ.

ರಶ್ಮಿಕಾ ಮಂದಣ್ಣ ಅದೆಂತಾ ಲಕ್ಕಿ ಬ್ಯೂಟಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕುಬೇರ ಸಿನಿಮಾ ಶತಕೋಟಿ ಕ್ಲಬ್ ಸೇರಿದೆ. ಈ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಸಿನಿಮಾದ ಅನೌನ್ಸ್​ಮೆಂಟ್ ಆಗಿದೆ. ಕಿರಿಕ್ ಬ್ಯೂಟಿ ವೀರನಾರಿಯಾಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಅಕೌಂಟ್​ಗೆ ಮತ್ತೊಂದು ನೂರು ಕೋಟಿಯ ಸಿನಿಮಾ ಸೇರ್ಪಡೆಯಾಗಿದೆ. ಧನುಷ್, ನಾಗಾರ್ಜುನ, ರಶ್ಮಿಕಾ ನಟನೆಯ ಕುಬೇರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಅನ್ನಿಸಿಕೊಂಡಿದೆ. ತೆರೆಕಂಡು ಮೂರೇ ದಿನಕ್ಕೆ 50 ಕೋಟಿ ಬಾಚಿದ್ದ ಈ ಸಿನಿಮಾ ಈಗ ನೂರು ಕೋಟಿ ಗಳಿಸಿ ಮುನ್ನುಗ್ತಾ ಇದೆ. ಕುಬೇರ ಮೂವಿಯಲ್ಲಿ ಧನುಷ್ ಬಿಕ್ಷುಕನ ಪಾತ್ರ ಮಾಡಿದ್ದಾರೆ. ರಶ್ಮಿಕಾ ಕೂಡ ಸಾದಾ ಸೀದಾ ಮಿಡ್ಲ್ ಕ್ಲಾಸ್ ಹುಡುಗಿ ಪಾತ್ರ ಮಾಡಿದ್ದಾರೆ.

ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್ ಇಲ್ಲ, ಲವ್ ಸೀನ್ ಇಲ್ಲ. ಇದೊಂದು ಪಕ್ಕಾ ಕಂಟೆಂಟ್ ಸಿನಿಮಾ. ಸೀಟಿನ್ ತುದಿಗೆ ತಂದು ಕೂರಿಸೋ ಈ ಥ್ರಿಲ್ಲರ್ ಈಗ ಬಿಗ್ ಹಿಟ್  ಅನ್ನಿಸಿಕೊಂಡಿದೆ. ರಶ್ಮಿಕಾ ನಾಯಕಿಯಾಗಿದ್ರೆ ಆ ಸಿನಿಮಾ ಕೋಟಿ ಕೋಟಿ ಬಾಚುತ್ತೆ ಅನ್ನೋದು ಮತ್ತೆ ಪ್ರೂವ್ ಆಗಿದೆ. ಅನಿಮಲ್, ಪುಷ್ಪ-2,  ಛಾವಾ ಚಿತ್ರಗಳ ಹ್ಯಾಟ್ರಿಕ್ ಸಕ್ಸಸ್​ನಿಂದ ಇಂಡಿಯನ್ ಇಂಡಸ್ಟ್ರಿಯಲ್ಲಿ ನಂ.1 ಪಟ್ಟಕ್ಕೇರಿದ್ದ ರಶ್ಮಿಕಾ, ಸಿಕಂದರ್ ಸೋಲಿನಿಂದ ಕೊಂಚ ಡಲ್ ಆಗಿದ್ರು. ಆದ್ರೆ ಈಗ ಮತ್ತೆ ಕುಬೇರ ಸಕ್ಸಸ್​​ನಿಂದ ಮತ್ತೆ ಯಶಸ್ಸಿನ ಸವಿ ಸವಿದಿದ್ದಾರೆ ರಶ್ಮಿಕಾ. ಕುಬೇರ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಚಿತ್ರ ಅನೌನ್ಸ್ ಆಗಿದೆ.

ಅನ್​ಫಾರ್ಮುಲಾ ಫಿಲ್ಮ್ಸ್​ ನಿರ್ಮಾಣ ಮಾಡ್ತಾ ಇರೋ ಹೊಸ ಚಿತ್ರ ಪೋಸ್ಟರ್ ಹಂಚಿಕೊಂಡಿರೋ ರಶ್ಮಿಕಾ ಹೊಸ ಚಿತ್ರದಲ್ಲಿ ರಗಡ್ ಲುಕ್​ನಲ್ಲಿ ಮಿಂಚಲಿದ್ದೀನಿ ಅನ್ನೋ ಸೂಚನೆ ಕೊಟ್ಟಿದ್ದಾರೆ.  ಈ ಪೋಸ್ಟರ್​​ನಲ್ಲಿ ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದಾರೆ.  ವಾರಿಯರ್ ರೀತಿ ಕಾಣಿಸಿಕೊಂಡಿದ್ದಾರೆ. ರಶ್  ಕೈಯಲ್ಲಿ  ಆಯುಧ ರೀತಿಯ ವಸ್ತುವಿದೆ. ‘ಬೇಟೆಗೊಳಗಾಗಿ ಗಾಯಗೊಂಡರೂ ಅಚಲವಾಗಿ ನಿಂತಿದ್ದಾಳೆ’ಎಂಬ ಸಂದೇಶವನ್ನ ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:08ಕ್ಕೆ ರಿಲೀಸ್ ಆಗಲಿದೆ. ಒಟ್ಟಾರೆ ಯಶಸ್ಸಿನ ಉತ್ತುಂಗದಲ್ಲಿರೋ ರಶ್ಮಿಕಾ ಹೊಸತೊಂದು ಪಾತ್ರದ ಮೂಲಕ ರಂಜಿಸೋಕೆ ಸಿದ್ದವಾಗಿದ್ದಾರೆ. ಕಿರಿಕ್ ಬ್ಯೂಟಿಯ ಹೊಸ ಅವತಾರ ನೋಡ್ಲಿಕ್ಕೆ ನೀವು ಕೂಡ ಸಜ್ಜಾಗಿ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more