ಅಲ್ಲು ಅರ್ಜುನ್ ಹೇಳಿಕೆ ದಾಖಲು, ‘ಬೌನ್ಸರ್’ ಆಂಟನಿ ಅರೆಸ್ಟ್: ವಕೀಲ ಪೋಡೂರಿ ರೆಡ್ಡಿ ಸಿಡಿಸಿದ್ರು ಹೊಸ ಬಾಂಬ್!

Dec 25, 2024, 9:13 AM IST

‘ಪುಷ್ಪ-2’ ಕಾಲ್ತುಳಿತ ಕೇಸ್.. ಅಲ್ಲು ಅರ್ಜುನ್‌ಗೆ ಖಾಕಿ ಗ್ರಿಲ್..!. ಚಿಕ್ಕಡಪಲ್ಲಿ ಠಾಣೆಯಲ್ಲಿ  ಅಲ್ಲು ಅರ್ಜುನ್​ಗೆ 4 ಗಂಟೆ ವಿಚಾರಣೆ ಫೈರ್​ ಪುಷ್ಪರಾಜ್​.. ಪೊಲೀಸರ ವಿಚಾರಣೆ ವೇಳೆ ಫುಲ್ ಥಂಡಾ ಆಗಿದ್ದರು. 50 ಪ್ರಶ್ನೆ.. 20 ಪ್ರಶ್ನೆಗಳಿಗೆ ಉತ್ತರ.. ಉಳಿದ ಪ್ರಶ್ನೆಗಳಿಗೆ ಸೈಲೆಂಟ್​ ಆಗಿದ್ರು ಬನ್ನಿ. 4 ಗಂಟೆ ವಿಚಾರಣೆ ನಡೆಸಿ ಕಳಿಸಿಕೊಟ್ಟ ಚಿಕ್ಕಡಪಲ್ಲಿ ಪೊಲೀಸರು. ಅಲ್ಲು ಅರ್ಜುನ್ ಹೇಳಿಕೆ ದಾಖಲು..‘ಬೌನ್ಸರ್’ ಆಂಟನಿ ಅರೆಸ್ಟ್. ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಅಲ್ಲು ಅರ್ಜುನ್ ಸ್ಪಷ್ಟನೆ. ಡಿ.4ರಂದು ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದರು. ತೆಲುಗು ನಟ ಅಲ್ಲು ಅರ್ಜುನ್​ಗೆ ಪೋಲಿಸರು ಪ್ರಶ್ನೆಗಳನ್ನು ಕೇಳಿದ್ದಾರೆ. 

ಥಿಯೇಟರ್‌ಗೆ ಬರುವ ಬಗ್ಗೆ ನೀವು ಯಾರಿಗೆ ತಿಳಿಸಿದ್ದಿರಿ..?. ನಿಮ್ಮ ರೋಡ್ ಶೋಗೆ ಅನುಮತಿ ಪಡೆದಿದ್ರಾ..? ಇಲ್ಲವಾ..? ಅನುಮತಿ ನಿರಾಕರಿಸಿದ್ದು ನಿಮಗೆ ಯಾರೂ ಹೇಳಲಿಲ್ಲವೇ?. ನಿಮ್ಮ ಕುಟುಂಬಸ್ಥರು ಯಾಱರು ಥಿಯೇಟರ್​ಗೆ ಬಂದಿದ್ರು?. ಥಿಯೇಟರ್​ನಲ್ಲಿದ್ದಾಗ ರೇವತಿ ಸತ್ತಿದ್ದು ಗೊತ್ತಿರಲಿಲ್ಲವೇ?. ಎಸಿಪಿ ಮತ್ತು ಸಿಐ ನಿಮ್ಮನ್ನು ಭೇಟಿ ಮಾಡಿದ್ದು ನಿಜವಲ್ಲವೇ?. ನಿಮ್ಮೊಂದಿಗೆ ಎಷ್ಟು ಬೌನ್ಸರ್‌ಗಳು ಬಂದರು?.  ಫ್ಯಾನ್ಸ್​​ ಮೇಲೆ ದಾಳಿ ಮಾಡಿದ ಬೌನ್ಸರ್‌ಗಳು ಯಾರು? ಮಹಿಳೆಯ ಸಾವಿನ ಬಗ್ಗೆ ನಿಮಗೆ ಯಾವಾಗ ಗೊತ್ತಾಯಿತು? ಥಿಯೇಟರ್​ ಬಳಿಕ 850 ಮೀ. ರೋಡ್ ಶೋ ಮಾಡಿದ್ದು ಏಕೆ? ಹೆಚ್ಚಿನ ವಿಚಾರಣೆಗೆ ಕರೆದರೆ ಬರಬೇಕೆಂದು ಪೊಲೀಸರು ಸೂಚನೆ ಕೊಟ್ಟಿದ್ದು, ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಅಲ್ಲು ಅರ್ಜುನ್ ಸ್ಪಷ್ಟಪಡಿಡಸಿದ್ದಾರೆ.