Apr 22, 2023, 3:26 PM IST
ಕೆಜಿಎಫ್ 2 ಸಿನಿಮಾ ಬಂದು ಸೂಪರ್ ಹಿಟ್ ಆಗಿದೆ, ಇನ್ನೇನು ಕೆಲವೇ ವರ್ಷಗಳಲ್ಲಿ ‘ಕೆಜಿಎಫ್ 3’ ಆರಂಭ ಆಗಲಿದೆ. ಇದೇ ವೇಳೆ ಸುಕುಮಾರ್ ಕೂಡ ಕೆಜಿಎಫ್ ಮಾದರಿಯಂತೆ ಪುಷ್ಪ 2 ನಂತರ ‘ಪುಷ್ಪ 3’ಗೆ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಪುಷ್ಪ’ ಚಿತ್ರ ಕೂಡ ಮೂರು ಪಾರ್ಟ್ಗಳಲ್ಲಿ ಬರಲಿದೆಯಂತೆ.‘ಕೆಜಿಎಫ್’ ಹಾಗೂ ‘ಪುಷ್ಪ’ ಸಿನಿಮಾ ಮಧ್ಯೆ ಫೈಟ್ ಇದಿದ್ದು, ಇದಕ್ಕೆ ಕಾರಣ ತೆಲುಗು ನಿರ್ದೇಶಕ ನೀಡಿದ ಹೇಳಿಕೆ. ಪುಷ್ಪ ಬಗ್ಗೆ ಮಾತನಾಡಿದ್ದ ಉಪ್ಪೇನಾ ನಿರ್ದೇಶಕ ಬುಚಿ ಬಾಬು, ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ ಎಂದು ಹೇಳಿದ್ದರು. ಈಗ ಕೆಜಿಎಫ್ 2 ಸೂಪರ್ ಹಿಟ್ ಆಗಿದೆ. ಪುಷ್ಪ 2 ಕೂಡ ಬರುತ್ತಿದೆ. ಕೆಜಿಎಫ್ 3 ಆರಂಭ ಆಗಲಿದೆ. ಇದೇ ವೇಳೆ ಸುಕುಮಾರ್ ಕೂಡ ‘ಪುಷ್ಪ 3’ಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.