Dec 5, 2024, 11:54 AM IST
ಪುಷ್ಪ-2 ಸದ್ಯದ ಮೋಸ್ಟ್ ಅವೇಟೆಡ್ ಪ್ಯಾನ್ ಇಂಡಿಯಾ ಮೂವಿ. ನಾಳೆ ಪುಷ್ಪ-ದಿ ರೂಲ್ ವರ್ಲ್ಡ್ ವೈಡ್ ರಿಲೀಸ್ ಆಗ್ತಾ ಇದ್ದು, ಇಂದು ರಾತ್ರಿಯಿಂದಲೇ ಶೋ ಆರಂಭ ಆಗ್ತಾ ಇವೆ. ಪುಷ್ಪ ಮೂವಿ ಮೇಲೆ ಬಹುದೊಡ್ಡ ನಿರೀಕ್ಷೆಯ ಭಾರ ಇದೆ. ಜೊತೆಗೆ ಟಿಕೆಟ್ ದರವೂ ಯದ್ವಾತದ್ವಾ ಏರಿಕೆ ಆಗಿದೆ. ಭಾರತದಾದ್ಯಂತ 8 ಸಾವಿರ ಹಾಗೂ ವಿದೇಶಗಳಲ್ಲಿ 4 ಸಾವಿರ ಸೇರಿದಂತೆ ವರ್ಲ್ಡ್ ವೈಡ್ ಒಟ್ಟು 12 ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣ್ತಾ ಇದೆ. ಇಷ್ಟು ದೊಡ್ಡ ಸಂಖ್ಯೆಯ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗ್ತಾ ಇರೋ ಮೊದಲ ಭಾರತೀಯ ಸಿನಿಮಾ ಇದು. ಸೋ ಇಷ್ಟು ಸ್ಕ್ರೀನ್ ಗಳಲ್ಲಿ ರಿಲೀಸ್ ಆದ ಮೇಲೆ ಕಲೆಕ್ಷನ್ ನಲ್ಲೂ ಪುಷ್ಪ ರೆಕಾರ್ಡ್ ಮಾಡೋದು ಫಿಕ್ಸ್. ಇಷ್ಟು ಸ್ಕ್ರೀನ್ಸ್ ಮೊದಲ ದಿನ ಹೌಸ್ ಫುಲ್ ಆದ್ರೆ ಮೊದಲ ದಿನವೇ ಪುಷ್ಪ-2 300 ಕೋಟಿ ಗಳಿಕೆ ಮಾಡೋದು ಫಿಕ್ಸ್ ಎನ್ನಲಾಗ್ತಾ ಇದೆ.