May 13, 2024, 12:10 PM IST
ಎಲೆಕ್ಷನ್ ಬಂದ್ರೆ ಬಣ್ಣದ ಜಗತ್ತಿನ ಸೂಪರ್ ಸ್ಟಾರ್ಸ್ಗಳೆಲ್ಲಾ ಬ್ಯುಸಿಯಾಗಿ ಬಿಡುತ್ತಾರೆ. ಅದು ಪರಭಾಷೆಯವರೇ ಆಗ್ಲಿ ಕನ್ನಡದ ಸ್ಟಾರ್ಗಳೇ ಆಗ್ಲಿ. ಯಾಕಂದ್ರೆ ಅವರ ಕೆಲಸ ಏನಿದ್ರು ಚುನಾವಣೆಗೆ ನಿಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದು. ನಟ ಯಶ್, ದರ್ಶನ್, ಸುದೀಪ್ ಚುನಾವಣೆ ಸಮಯದಲ್ಲಿ ಇದನ್ನೇ ಮಾಡಿದ್ದು, ಈಗ ಇವರ ಹಾದಿಯಲ್ಲಿ ಟಾಲಿವುಡ್ ಸೂಪರ್ ಸ್ಟಾರ್ಸ್ ಹೊರಟಿದ್ದಾರೆ. ಅಲ್ಲು ಅರ್ಜುನ್.. ಟಾಲಿವುಡ್ನ ಸೂಪರ್ ಸ್ಟಾರ್. ಪುಷ್ಪ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಅಲ್ಲುಗೆ ಈ ಭಾರಿಯ ಚುನಾವಣೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ. ಯಾರ್ ನೋಡಿದ್ರು ನಮ್ ಪರ ಎಲೆಕ್ಷನ್ ಪ್ರಚಾರಕ್ಕೆ ಬನ್ನಿ ಅಂತ ಆಫರ್ ಮಾಡುತ್ತಿದ್ದಾರೆ.
ಹೀಗಾಗಿ ಅಲ್ಲು ಅರ್ಜುನ್ ತನಗೆ ಬೇಕಾದವರ ಪರ ಪ್ರಚಾರಕ್ಕಾಗಿ ಎಲೆಕ್ಷನ್ ರಣಕಣಕ್ಕೆ ಧುಮುಕಿದ್ದಾರೆ. ಅಲ್ಲು ಅರ್ಜುನ್ ರಾಜಕಾರಣಿಗಳ ಹಿಂದೆ ಹೋದವರಲ್ಲ. ಆದ್ರೆ ಈ ಭಾರಿ ಚುನಾವಣಾ ಪ್ರಚಾರದ ಬ್ಯುಸಿಯಲ್ಲಿ ಅಲ್ಲು ಮುಳುಗಿದ್ದಾರೆ. ಅಲ್ಲು ಅರ್ಜುನ್ ವೈಎಸ್ಆರ್ಸಿಪಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಆಂಧ್ರದ ನಾಂದ್ಯಾಲ್ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿ ಪರವಾಗಿ ಅಲ್ಲು ಅರ್ಜುನ್ ಮತ ಬೇಡಿದ್ದಾರೆ. ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಭಾರಿ ಗಮನ ಸೆಳೆದಿದೆ. ಆಡಳಿತ ಪಕ್ಷ ವೈಎಸ್ಆರ್ ಸಿಪಿಯನ್ನ ಸೋಲಿಸಿಯೇ ತೀರುವುದಾಗಿ ನಟ ಪವನ್ ಕಲ್ಯಾಣ್ ಹಾಗು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟೊಂಕ ಕಟ್ಟಿ ನಿಂತಿದ್ದಾರೆ.
ಪವನ್ ಕಲ್ಯಾಣ್ಗೆ ಈ ಚುನಾವಣೆ ಅತ್ಯಂತ ಮಹತ್ವದ್ದು. ಈ ಚುನಾವಣೆಯಿಂದ ತಮ್ಮ ಜನ ಸೇನಾ ಪಕ್ಷಕ್ಕೆ ದೊಡ್ಡ ಬೂಸ್ಟ್ ನೀಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಪವನ್ ಪರ ಮೆಗಾಸ್ಟಾರ್ ಕುಟುಂಬದ ಕೆಲ ಸದಸ್ಯರು ಪ್ರಚಾರಕ್ಕೆ ಧುಮುಕಿದ್ದಾರೆ. ರಾಮ್ ಚರಣ್ ಚಿಕ್ಕಪ್ಪ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಪಿತಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ರಾಮ್ ಚರಣ್ ಮತ ಬೇಡಿದ್ದಾರೆ. ಈ ಭಾರಿ ಆಂಧ್ರ ಎಲೆಕ್ಷನ್ ಸ್ಟಾರ್ಸ್ಗಳ ಹಂಗಾಮಕ್ಕೆ ಸಾಕ್ಷಿಯಾಗುತ್ತಿದೆ. ಒಂದ್ ಕಡೆ ಅಲ್ಲು ಅರ್ಜುನ್ ಮತ್ತೊಂದ್ ಕಡೆ ಮೆಗಾ ಕುಟುಂಬದ ಸದಸ್ಯರು ಬೀದಿಗಿಳಿದು ತಮಗೆ ಬೇಗಾದವರಿಗೆ ಪ್ರಚಾರ ಮಾಡುತ್ತಿದ್ದಾರೆ.
ಒಂದ್ ರೀತಿ ಕಳೆದ ಭಾರಿಯ ಮಂಡ್ಯ ಎಲೆಕ್ಷನ್ ಆಗಿತ್ತಲ್ಲವಾ ಹಾಗೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ. ರಾಮ್ ಚರಣ್ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದ್ರೆ, ಮೆಗಾ ಫ್ಯಾಮಿಲಿಯವರೇ ಆದ ಅಲ್ಲು ಅರ್ಜುನ್ ಮಾವ ಪವನ್ ಪರ ನಿಲ್ಲದೇ ಎದುರಾಳಿ ಪಕ್ಷದ ಅಭ್ಯರ್ಥಿ ಪರ ಸ್ಟೈಲಿಶ್ ಸ್ಟಾರ್ ಮತಬೇಟೆ ನಡೆಸಿದ್ದಾರೆ. ಈ ವಿಚಾರ ಈಗ ಟಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತದೆ. ಸದ್ಯ ಈ ಘಟನೆಯಿಂದ ಮತ್ತೆ ಆ ಚರ್ಚೆ ಮುನ್ನಲೆಗೆ ಬಂದಿದೆ.