ಇದೇನಿದು ಈ ವಯಸ್ಸಿನಲ್ಲಿ 'ಮುಗಿಲು ಮುಟ್ಟಿದ' ತ್ರಿಶಾ ಕೃಷ್ಣನ್ ಸಂಭಾವನೆ!

Oct 5, 2023, 7:01 PM IST

ಸಿನಿಮಾ ಒಂದಕ್ಕೆ ಬರೋಬ್ಬರಿ 10 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಒಂದು ನಿಮಿಷಕ್ಕೆ ಇಷ್ಟು ಅಂತ ಸಂಭಾವನೆ ಫಿಕ್ಸ್ ಮಾಡಿಬಿಟ್ಟಿದ್ದಾರಂತೆ. ಸೌತ್ ಇಂಡಸ್ಟ್ರಿಯ ಘಟಾನುಘಟಿ ನಾಯಕನಟರೊಂದಿಗೆ ನಟಿಸಿದ್ದ ನಟಿ. ಈಗಲೂ ಎಲ್ಲ ನಾಯಕರೊಂದಿಗೆ ನಾಯಕಿಯಾಗಿ ನಟಿಸುತ್ತ ಕಾಲ್‌ಶೀಟ್ ಕೊಡುತ್ತಿರುವ ನಟಿ. ಇವರು ಯಾರು ಬಲ್ಲಿರೇನು? ಇವರೇ ನಟಿ ತ್ರಿಶಾ. ಇದೀಗ ತಮ್ಮ ಹೊಸ ಇನ್ನೊಂದು ಇನ್ನಿಂಗ್ಸ್ ಶುರು ಮಾಡಿಕೊಂಡಿರುವ ಈ ನಟಿ ಮತ್ತೆ ಮಿಂಚುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಥರ್ಟಿ ಪ್ಲಸ್‌ ವಯಸ್ಸಿನಲ್ಲಿ ಇದೇನಿದು ಜಾದೂ ಅಂತಿದ್ದಾರೆ ಸುದ್ದಿ ಕೇಳಿ ಶಾಕ್ ಆಗಿರುವ ಸಿನಿಮಾಪ್ರಿಯರು!

ಹೌದು, ನಟಿ ತ್ರಿಶಾ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ. 'ಪೊನ್ನಿಯನ್ ಸೆಲ್ವನ್' ಸಿನಿಮಾ ಬಳಿಕ ನಟಿ ತ್ರಿಶಾ ಲಕ್ ಮತ್ತು ರೇಂಜ್ ಬದಲಾಗಿದೆ. ಆಕೆಯ ಕಾಲ್‌ಶೀಟ್ ಪಡೆಯಲು ಇಡೀ ಸೌತ್ ಇಂಡಸ್ಟ್ರಿ ತುದಿಗಾಲಲ್ಲಿ ನಿಂತಿದೆಯಂತೆ. ನಯನತಾರಾ, ಸಮಂತಾರನ್ನು ಸಂಭಾವನೆ ವಿಷಯದಲ್ಲೂ ಹಿಂದಿಕ್ಕಿರುವ ನಟಿ ತ್ರಿಶಾ, ಬರೋಬ್ಬರಿ 10 ಕೋಟಿಗೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಡಾನ್ಸ್ ಒಂದಕ್ಕೆ ನಿಮಿಷಗಳಲ್ಲಿ ತಮ್ಮ ಸಂಭಾವನೆ ಫಿಕ್ಸ್ ಮಾಡಿದ್ದಾರಂತೆ ತ್ರಿಶಾ!

ತ್ರಿಶಾ ಈ ಎಲ್ಲ ಬೆಳವಣಿಗೆ ಮೂಲಕ ಸೌತ್ ಇಂಡಿಯಾದ ನಂಬರ್ ಒನ್ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎನ್ನಬಹುದು. ಈಗಾಗಲೇ ಸೌತ್ ಇಂಡಿಯಾದ ಘಟಾನುಘಟಿ ಸ್ಟಾರ್ ನಟರೊಂದಿಗೆ ನಟಿಸಿರುವ ತ್ರಿಶಾ, ಸದ್ಯ ಕಮಲ್ ಹಾಸನ್, ಚಿರಂಜೀವಿ ಮತ್ತು ವಿಕ್ರಮ್ ಸಿನಿಮಾಗಳಿಗೆ ಬುಕ್ ಆಗಿದ್ದಾರಂತೆ. ಇನ್ನೂ ಹಲವರಿಗೆ ಕಾಲ್‌ ಶೀಟ್ ಕೊಡಲಿರುವ ತ್ರಿಶಾ, ಸ್ಟಾರ್ ನಟರೊಂದಿಗೆ ಜೋಡಿಯಾಗುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರನ್ನೂ ಮೀರಿ ಟಾಪ್‌ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ ಎನ್ನಲಾಗಿದೆ.