
ಡಾನ್ಸ್ಗೆ ಐಕಾನ್ ಆಗಿರೋ ಶ್ರೀಲೀಲಾಗೆ ಡಾನ್ಸ್ ಅಂದ್ರೆ ಇಷ್ಟ ಇಲ್ವಾ..? ಇಂತಹದ್ದೊಂದು ಪ್ರಶ್ನೆ ಶ್ರೀಲೀಲಾರನ್ನ ಸುತ್ತುವರೆದವರಲ್ಲಿ ಕಾಡುತ್ತಿದೆ.
ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಈಗ ಕುಂತ್ರು ನಿಂತ್ರು ಏನ್ ಮಾಡಿದ್ರೂ ಸುದ್ದಿನೇ. ಯಾಕಂದ್ರೆ ಶ್ರೀಲೀಲಾ ಕ್ರೇಝ್ ಆ ಮಟ್ಟಕ್ಕೆ ಹಬ್ಬಿದೆ. ಸ್ಟಾರ್ ಹೀರೋಗಳ ಸಿನಿಮಾದಲ್ಲಿ ಮಿಂಚುತ್ತಿರೋ ಶ್ರೀಲೀಲಾ ಸಖತ್ ಆಗಿ ಡಾನ್ಸ್ ಮಾಡಿ ನೃತ್ಯ ಪ್ರಪಂಚದಲ್ಲಿ ಮೆರೆಯುತ್ತಿದ್ದಾರೆ. ಡಾನ್ಸ್ಗೆ ಐಕಾನ್ ಆಗಿರೋ ಶ್ರೀಲೀಲಾಗೆ ಡಾನ್ಸ್ ಅಂದ್ರೆ ಇಷ್ಟ ಇಲ್ವಾ..? ಇಂತಹದ್ದೊಂದು ಪ್ರಶ್ನೆ ಶ್ರೀಲೀಲಾರನ್ನ ಸುತ್ತುವರೆದವರಲ್ಲಿ ಕಾಡುತ್ತಿದೆ. ಅದಕ್ಕೆ ಕಾರಣ ನಿರೂಪಕಿ ಒಬ್ರಿಗೆ ಕಿಸ್ ಬ್ಯೂಟಿ ಹಾಕಿರೋ ಆವಾಜ್. ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾದಲ್ಲಿ ನಟಿಸಿದ ಬ್ಯೂಟಿ ಶ್ರೀಲೀಲಾ.
ಶ್ರೀಲೀಲಾ ಸೌಂಧರ್ಯದ ಗಣಿ.. ಟಾಲಿವುಡ್ನಿಂದ ರಶ್ಮಿಕಾ ಕಾಲಿ ಮಾಡಿದ ಜಾಗವನ್ನ ಸಖತ್ತಾಗೆ ಬಾಚಿಕೊಂಡಿರೋ ಶ್ರೀಲೀಲಾ ಈಗ ತೆಲುಗು ಸಿನಿ ರಸಿಕರ ಮಹಾರಾಣಿ ಆಗಿದ್ದಾರೆ. ಅಷ್ಟೆ ಅಲ್ಲ ದಕ್ಷಿಣ ಭಾರತದ ಡಾನ್ಸ್ ಲೋಕದ ದೇವತೆ ಆಗಿರೋ ಶ್ರೀಲೀಲಾ ಡಾನ್ಸ್ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಡಾನ್ಸ್ ವಿಷಯದಲ್ಲಿ ಶ್ರೀಲೀಲಾಗೆ ಆ ಭಗವಂತ ಎಕ್ಸ್ಸ್ಟ್ರಾ ಟ್ಯಾಲೆಂಟ್ಅನ್ನೇ ಕೊಟ್ಟಿದ್ದಾನೆ. ಇದಕ್ಕೆ ಎಲ್ಲರ ಕಣ್ಣಿಗೆ ಶ್ರೀಲೀಲಾ ಡಾನ್ಸ್ ಸಿಕ್ಕಾಪಟ್ಟೆ ಅಟ್ರಾಕ್ಷನ್.. ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ ಹೀಗೆ ಟಾಪ್ ಹೀರೋಗಳ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಿದ್ರೂ ಶ್ರೀಲೀಲಾರನ್ನ ಟಾಲಿವುಡ್ನಲ್ಲಿ ಟಾನ್ಸರ್ ಆಗಿ ನೋಡೋಕೆ ಇಷ್ಟ ಪಡುತ್ತಿದ್ದಾರೆ. ಇದು ಹಾಟಿ ಶ್ರೀಲೀಲಾಗೆ ಉರಿ ಉರಿ ಆಗೋ ಹಾಗೆ ಮಾಡುತ್ತಿದೆ. ಶ್ರೀಲೀಲಾ ಅಭಿನಯದಲ್ಲಿ ಯಾರಿಗೇನು ಕಡಿಮೆ ಇಲ್ಲ. ಆದರೂ ಕೂಡ ಕೆಲವರು ಶ್ರೀಲೀಲಾರನ್ನ ನಾಯಕಿ ಎಂದು ಒಪ್ಪಿಕೊಳ್ಳಲು ಕೆಲವರು ತಯಾರಿಲ್ಲ. ಶ್ರೀಲೀಲಾ ಅಭಿನಯದ ಕುರಿತು ಮಾತನಾಡುತ್ತಿಲ್ಲ.
ಬದಲಿಗೆ ಶ್ರೀಲೀಲಾಗೆ ಬೆಸ್ಟ್ ಡ್ಯಾನ್ಸರ್ ಎಂಬ ಹಣೆ ಪಟ್ಟಿ ಕಟ್ಟಿದ್ದಾರೆ. ಕೆಲವರ ಈ ಮನಸ್ಥಿತಿಯಿಂದ ಶ್ರೀಲೀಲಾಗೆ ಕಿರಿಕಿರಿಯಾಗುತ್ತಿದೆ. ಇದಕ್ಕೆ ಮೊನ್ನೆ ನಡೆದ ಸಮಾರಂಭವೇ ಸಾಕ್ಷಿ. ಕಿಸ್ ಬ್ಯೂಟಿ ಶ್ರೀಲೀಲಾ ತೆಲುಗಿನಲ್ಲಿ ರಾಬಿನ್ ಹುಡ್ ಸಿನಿಮಾದಲ್ಲೂ ನಾಯಕಿ. ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಿರೂಪಕಿ ಶ್ರೀಲೀಲಾ ಅಂದರೆ ಹಾಡು, ಹಾಡು ಅಂದರೆ ಡ್ಯಾನ್ಸ್, ಡ್ಯಾನ್ಸ್ ಅಂದರೆ ಶ್ರೀಲೀಲಾ ಎಂದು ಹೊಗಳಿದ್ದಾರೆ. ಆದ್ರೆ ಈ ಮಾತನ್ನ ಸಹಿಸದ ಶ್ರೀಲೀಲಾ ರಾಬಿನ್ ಹುಡ್ ಬಿಡುಗಡೆ ನಂತರ ಶ್ರೀಲೀಲಾ ಅಂದರೆ ಡೈಲಾಗ್, ಡೈಲಾಗ್ ಅಂದರೆ ಅಭಿನಯ, ಅಭಿನಯ ಅಂದರೆ ಶ್ರೀಲೀಲಾ ಎನ್ನುವಂತೆ ನಾನು ನಟಿಸಿದ್ದೇನೆ ಎಂದು ಹೇಳಿದ್ದಾರೆ. ನನ್ನ ಬಗ್ಗೆ ನಿಮ್ಮಲ್ಲಿರುವ ಅಭಿಪ್ರಾಯ ಈ ಚಿತ್ರದ ನಂತರ ಬದಲಾಗಲಿದೆ ಎಂದಿದ್ದಾರೆ. ಎನಿ ವೇ ಶ್ರೀಲೀಲಾ ಕನ್ನಡದ ಟ್ಯಾಲೆಂಟ್. ಈ ಟ್ಯಾಲೆಂಟ್ ಈಗ ಬಾಲಿವುಡ್ ಜಗತ್ತಿಗೂ ಎಂಟ್ರಿ ಕೊಟ್ಟಿದೆ. ನಟಿಯರು ಅಂದ್ಮೇಲೆ ಡಾನ್ಸ್. ನಟನೆ ಎಲ್ಲದರಲ್ಲೂ 100 ಪರ್ಸೆಂಟ್ ಪರ್ಫೆಕ್ಟ್ ಇರಬೇಕು. ಈ ವಿಷಯದಲ್ಲಿ ಶ್ರೀಲೀಲಾ ಏನು ಕಮ್ಮಿ ಇಲ್ಲ ಬಿಡಿ.