ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!

ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!

Published : Dec 18, 2025, 07:35 PM IST

ಇತ್ತೀಚೆಗೆ ಎಐ, ಡೀಪ್ ಫೇಕ್ ವಿಡಿಯೋಗಳ ಕಾಟ ಹೆಚ್ಚಾಗಿದೆ. ಅದ್ರಲ್ಲೂ ನಟಿಮಣಿಯರಿಗೆ ಈ ಎಐ, ಡೀಪ್ಫೇಕ್ ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ. ಹಲವು ನಾಯಕನಟಿಯರು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ.

ಇತ್ತೀಚೆಗೆ ಎಐ, ಡೀಪ್ ಫೇಕ್ ವಿಡಿಯೋಗಳ ಕಾಟ ಹೆಚ್ಚಾಗಿದೆ. ಅದ್ರಲ್ಲೂ ನಟಿಮಣಿಯರಿಗೆ ಈ ಎಐ, ಡೀಪ್ಫೇಕ್  ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ. ಹಲವು ನಾಯಕನಟಿಯರು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಇದೀಗ ಕಿಸ್ ಬ್ಯೂಟಿ ಶ್ರೀಲೀಲಾ ಕೂಡ ಎಐನಿಂದ ತೊಂದರೆ ಅನುಭವಿಸಿದ್ದು, ಸುಧಿರ್ಘ ಸಂದೇಶವೊಂದರನ್ನ ಬರೆದು ನಿಮ್ಮ ಕೈ ಮುಗಿದು ಕೇಳಿಕೊಳ್ತಿನಿ ಅಂತ ವಿನಂತಿ ಮಾಡಿದ್ದಾರೆ. ಯೆಸ್ ಇತ್ತೀಚಿಗೆ ಎಐ , ಡೀಪ್ ಫೇಕ್ ಮಾಡ್ತಾ ಇರೋ ಅವಾಂತಗಳು ಒಂದೆರಡಲ್ಲ. ಆರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಡಿಪ್ ಫೇಕ್ ವಿಡಿಯೊವೊಂದು ಬಂದು ಬಿರುಗಾಳಿ ಎಬ್ಬಿಸಿತ್ತು. ಆಗ ಇಡೀ ಚಿತ್ರರಂಗ ಅದನ್ನ ಖಂಡಿಸಿತ್ತು. ಆ ವಿಡಿಯೋ ಮಾಡಿದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಆದ್ರೆ ಈ ಘಟನೆ ಬಳಿಕ ಎಐ ಅವಾಂತರಗಳು ಕಡಿಮೆ ಆಗೋ ಬದಲು ಹೆಚ್ಚೇ ಆಗೋದಕ್ಕೆ ಶುರುವಾದವು.

ಈಗ ಎಐ , ಡೀಫ್ ಫೇಕ್ ವಿಡಿಯೋಗಳು ಅದ್ಯಾವ ಮಟ್ಟಕ್ಕೆ ಹೋಗಿವೆ ಅಂದ್ರೆ ನಿಜ ಯಾವುದು ಎಐ ಯಾವುದು ಅನ್ನೋದೇ ಗೊತ್ತಾಗದಷ್ಟು. ಹೌದು ಡ್ಯಾನ್ಸಿಂಗ್ ಡಾಲ್ ಶ್ರೀಲೀಲಾ ಇಂಥಾ ವಿಡಿಯೋಗಳ ಬಗ್ಗೆ ಧ್ವನಿ ಯೆತ್ತಿದ್ದಾರೆ. ಇತ್ತೀಚಿಗೆ ಶ್ರೀಲೀಲಾ ಮತ್ತು ಕೆಲ ನಟಿಯರ ಬಾತ್ ರೂಮ್ ಫೋಟೋಗಳನ್ನ ಎಐನಲ್ಲಿ ಜನರೇಟ್ ಮಾಡಿ ಹರಿಬಿಡಲಾಗಿತ್ತು. ಇದನ್ನ ಕಂಡು ಶಾಕ್ ಆಗಿರೋ ಶ್ರೀಲೀಲಾ ಸುದೀರ್ಘ ಪೋಸ್ಟ್ ವೊಂದನ್ನ ಹಾಕಿ ಕಳವಳ ವ್ಯಕ್ತಪಡಿಸಿದ್ದಾರೆ. ನಾನು ನನ್ನ ಕೈಗಳನ್ನು ಜೋಡಿಸಿ ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿನಂತಿಸುತ್ತೇನೆ, ಎಐ-ಜನರೇಟೆಡ್ ಅಸಂಬದ್ಧತೆಯನ್ನು ಬೆಂಬಲಿಸಬೇಡಿ. ತಂತ್ರಜ್ಞಾನವನ್ನು ಬಳಸುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದರ ನಡುವೆ ವ್ಯತ್ಯಾಸವಿದೆ.

ನನ್ನ ಅಭಿಪ್ರಾಯದಲ್ಲಿ ತಂತ್ರಜ್ಞಾನದಲ್ಲಿನ ಪ್ರಗತಿಗಳು ಜೀವನವನ್ನು ಸರಳಗೊಳಿಸಲು ಉದ್ದೇಶಿಸಲಾಗಿದೆ, ಅದನ್ನು ಸಂಕೀರ್ಣಗೊಳಿಸಲು ಅಲ್ಲ. ಪ್ರತಿಯೊಬ್ಬ ಹುಡುಗಿಯೂ ಮಗಳು, ಮೊಮ್ಮಗಳು, ಸಹೋದರಿ, ಸ್ನೇಹಿತೆ ಅಥವಾ ಸಹೋದ್ಯೋಗಿ ಇರುತ್ತಾಳೆ, ಅವಳು ಕಲೆಯನ್ನು ತನ್ನ ವೃತ್ತಿಗಳಲ್ಲಿ ಒಂದಾಗಿ ಆರಿಸಿಕೊಂಡರೂ ಸಹ ಅವಳೂ ಒಬ್ಬ ಹುಡುಗಿಯೇ. ನಾವು ಸಂರಕ್ಷಿತ ವಾತಾವರಣದಲ್ಲಿದ್ದೇವೆ ಎಂಬ ವಿಶ್ವಾಸದೊಂದಿಗೆ ಸಂತೋಷವನ್ನು ಹರಡುವ ಉದ್ಯಮದ ಭಾಗವಾಗಲು ನಾವು ಬಯಸುತ್ತೇವೆ. ನನ್ನ ಶೆಡ್ಯೂಲ್ನಿಂದಾಗಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಅನೇಕ ವಿಷಯಗಳ ಬಗ್ಗೆ ನನಗೆ ತಿಳಿದಿರುವುದಿಲ್ಲ, ಮತ್ತು ಇದನ್ನು ನನ್ನ ಗಮನಕ್ಕೆ ತಂದಿದ್ದಕ್ಕಾಗಿ ನನ್ನ ಹಿತೈಷಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

ನಾನು ಯಾವಾಗಲೂ ನನ್ನದೇ ಆದ ಜಗತ್ತಿನಲ್ಲಿ ವಾಸಿಸುತ್ತಿದ್ದೇನೆ, ಆದರೆ ಇದು ತುಂಬಾ ತೊಂದರೆ ಉಂಟುಮಾಡುವ ಬೆಳವಣಿಗೆ, ಇದು ತುಂಬಾ ವಿನಾಶಕಾರಿಯಾಗಿದೆ. ನನ್ನ  ಸಹೋದ್ಯೋಗಿಗಳು ಅದೇ ರೀತಿ ಅನುಭವಿಸುತ್ತಿರುವುದನ್ನು ನಾನು ನೋಡುತ್ತೇನೆ ಮತ್ತು ಎಲ್ಲರ ಪರವಾಗಿ ಇದನ್ನು ಹೇಳುತ್ತಿದ್ದೇನೆ. ಘನತೆಯಿಂದ ಮತ್ತು ನನ್ನ ಪ್ರೇಕ್ಷಕರಲ್ಲಿ ನಂಬಿಕೆಯೊಂದಿಗೆ, ದಯವಿಟ್ಟು ನಮ್ಮೊಂದಿಗೆ ನಿಲ್ಲುವಂತೆ ನಾನು ನಿಮ್ಮನ್ನು ಕೇಳುತ್ತೇನೆ. ಹೌದು ಇಂಥದ್ದೊಂದು ಸುದೀರ್ಘ ಪೋಸ್ಟ್ ಹಾಕಿರೋ ಶ್ರೀಲೀಲಾ ಎಐ ಫೋಟೋ, ವಿಡಿಯೋಗಳನ್ನ ಹಂಚಬೇಡಿ ಅಂತ ವಿನಂತಿ ಮಾಡಿಕೊಂಡಿದ್ದಾರೆ. ಸಿನಿಮಾ ನಟಿಯರ ಎಐ ವಿಡಿಯೋಗಳು ಅದೆಷ್ಟರ ಮಟ್ಟಿಗೆ ಸೋಷಿಯಲ್ ಮಿಡಿಯಾದಲ್ಲಿ ಹರಡಿಕೊಂಡಿವೆ ಅಂದ್ರೆ, ಇವುಗಳ ಸೃಷ್ಟಿಕರ್ತರನ್ನ ಹುಡುಕೋದು ಅಸಾಧ್ಯವೇ ಸರಿ.

03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
Read more