ಮೈಯೋಸಿಟಿಸ್ ಮುಗಿಸಿ ಮತ್ತೊಂದು ಮಹಾ ಕಾಯಿಲೆಗೆ ತುತ್ತಾದ ಸಮಂತಾ; ಏನಿದು ಕರ್ಮ?

ಮೈಯೋಸಿಟಿಸ್ ಮುಗಿಸಿ ಮತ್ತೊಂದು ಮಹಾ ಕಾಯಿಲೆಗೆ ತುತ್ತಾದ ಸಮಂತಾ; ಏನಿದು ಕರ್ಮ?

Published : Jan 12, 2025, 01:46 PM IST

ಸಮಂತಾಗೆ ಅದ್ಯಾಕೋ ಒಂದಾದ ಮೇಲೊಂದು ಕಷ್ಟಗಳು ಬಂದು ತೊಂದರೆ ಕೊಡ್ತಾನೇ ಇವೆ. ಈ ಹಿಂದೆ ಮೈಯೋಸಿಟಿಸ್ ಅನ್ನೋ ಅಪರೂಪದ ಖಾಯಿಲೆಗೆ ತುತ್ತಾಗಿದ್ದ ಸ್ಯಾಮ್, ಸಿನಿಲೋಕದಿಂದ ಕೊಂಚ ಬ್ರೇಕ್ ಪಡೆದು ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ರು. ಆದರೆ...

ನಟಿ ಸಮಂತಾ ( Samantha Ruth Prabhu) ಮೈಯೋಸಿಟಿಸ್ ಅನ್ನೋ ಅಪರೂಪದ ಖಾಯಲೆಯಿಂದ ಬಳಲ್ತಾ ಇರೋ ವಿಷ್ಯ ಗೊತ್ತೇ ಇದೆ. ಇದೀಗ ತಮ್ಮನ್ನ ಕಾಡ್ತಾ ಇರೋ ಮತ್ತೊಂದು ಆರೋಗ್ಯ ಸಮಸ್ಯೆ ಬಗ್ಗೆ ಸಮಂತಾ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸ್ಯಾಮ್​ನ ಕಾಡ್ತಿರೋ ಆ ಹೊಸ ಖಾಯಿಲೆ ಯಾವುದು..? ಯಾಕೆ ಸಮಂತಾಗೆ ಪದೇ ಪದೇ ತೊಂದರೆಗಳು ಬೆನ್ನು ಬೀಳ್ತಾ ಇವೆ..? ಸುಂದರಿಯ ಆ ನೋವಿನ ಕಥೆ ಇಲ್ಲಿದೆ ನೋಡಿ.

ಯೆಸ್, ಕೋಮಲಾಂಗಿ ಸಮಂತಾಗೆ ಅದ್ಯಾಕೋ ಒಂದಾದ ಮೇಲೊಂದು ಕಷ್ಟಗಳು ಬಂದು ತೊಂದರೆ ಕೊಡ್ತಾನೇ ಇವೆ. ಈ ಹಿಂದೆ ಮೈಯೋಸಿಟಿಸ್ ಅನ್ನೋ ಅಪರೂಪದ ಖಾಯಿಲೆಗೆ ತುತ್ತಾಗಿದ್ದ ಸ್ಯಾಮ್, ಸಿನಿಲೋಕದಿಂದ ಕೊಂಚ ಬ್ರೇಕ್ ಪಡೆದು ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ರು.

ಸಿಟಾಡೆಲ್ ವೆಬ್ ಸರಣಿ ಮೂಲಕ ಸ್ಯಾಮ್ ಜಬರ್ದಸ್ತ್ ಆಗಿ ಕಂಬ್ಯಾಕ್ ಮಾಡಿದ್ದಾಳೆ. ಈ ಸ್ಪೈ ಆಕ್ಷನ್ ಸೀರೀಸ್​​ನಲ್ಲಿ ಸ್ಯಾಮ್ ಒಂದು ಕಡೆ ವರುಣ್ ಜೊತೆ ಬೋಲ್ಡ್ ಆಗಿ ರೊಮ್ಯಾಂಟಿಕ್ ಸೀನ್​ಗಳಲ್ಲಿ ನಟಿಸಿದ್ರೆ , ಇನ್ನೊಂದು ಕಡೆಗೆ ಭರ್ಜರಿ ಆಕ್ಷನ್ ಸೀಕ್ವೆನ್ಸ್​​ಗಳಲ್ಲಿ ಮಿಂಚಿದ್ದಾಳೆ.

ಸ್ಯಾಮ್ ಆಕ್ಷನ್ ಕ್ವೀನ್ ಅವತಾರ ಅಂತೂ ಸಖತ್ ರೋಚಕವಾಗಿದೆ. ಫ್ಯಾನ್ಸ್ ಇದು ಸಮಂತಾಳ ಸೆಕೆಂಡ್ ಇನ್ನಿಂಗ್ಸ್ ಅಂತಾ ಇದ್ದಾರೆ. ಸದ್ಯ ರಕ್ತಬ್ರಹ್ಮಾಂಡ ಅನ್ನೋ ಮತ್ತೊಂದು ಬಿಗ್ ಬಜೆಟ್ ವೆಬ್ ಸರಣಿಯಲ್ಲಿ ಈ ಚೆಲುವೆ ನಟಿಸ್ತಾ ಇದ್ದಾಳೆ.

ಒಂದು ಖಾಯಿಲೆಯಿಂದ ಚೇತರಿಸಿಕೊಂಡು ಮತ್ತೆ ಇಂಡಸ್ಟ್ರಿಯಲ್ಲಿ ಆಕ್ಟಿವ್ ಆಗೋವಷ್ಟರಲ್ಲಿ ಸಮಂತಾಗೆ ಮತ್ತೊಂದು ಖಾಯಿಲೆ ವಕ್ಕರಿಸಿಕೊಂಡಿದೆ. ಸುಂದರಿ ಸ್ಯಾಮ್​ ಮತ್ತೆ ಆಸ್ಪತ್ರೆ ಸೇರುವಂತೆ ಆಗಿದೆ.

ಹೌದು ಸಮಂತಾಗೆ ಚಿಕನ್ ಗುನ್ಯಾ ಆಗಿದ್ದು, ಅದರ ಅಡ್ಡಪರಿಣಾಮದಿಂದ ಸಂಧಿವಾತ ಕೂಡ ಈ ಸುಂದರಿಯನ್ನ ಬಾಧಿಸಿದೆ. ಸದ್ಯ ಇದಕ್ಕೆ ಚಿಕಿತ್ಸೆ ಪಡೆದು ಹೊರಬಂದಿರೋ ಸ್ಯಾಮ್, ಕಾಲು ನೋವಿನಿಂದ ಮುಕ್ತಳಾಗೋದಕ್ಕೆ ಜಿಮ್​ನಲ್ಲಿ ಕಸರತ್ತು ಮಾಡ್ತಾ ಇದ್ದಾಳೆ.

ಈ ಬಗ್ಗೆ ಖುದ್ದು ಪೋಸ್ಟ್ ಹಾಕಿರೋ ಸ್ಯಾಮ್, ಜಾಯಿಂಟ್ ಪೇನ್​ನಿಂದ ಚೇತರಿಸಿಕೊಂಡಿರೋದು ಖುಷಿಯಾಗಿದೆ ಅಂತ ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಸ್ಯಾಮ್ ನೀನು ನಿಜಕ್ಕೂ ಸ್ಟ್ರಾಂಗ್ ಲೇಡಿ ಕಾಮೆಂಟ್ ಮಾಡ್ತಾ ಇದ್ದಾರೆ.

ನಾಗಚೈತನ್ಯ ಜೊತೆ ವಿಚ್ಛೇಧನ ಆದ ಮೇಲೆ ಸಮಂತಾ ಒಬ್ಬಂಟಿಯಾಗಿದ್ದಾರೆ. ಮೈಯೋಸಿಟಿಸ್ ಖಾಯಲೆ ಜೊತೆ ಹೋರಾಡಿ ಗೆದ್ದಿರೋ ಈ ಚೆಲುವೆ ಮತ್ತೆ ಸಿನಿಲೋಕದಲ್ಲಿ ಆಕ್ಟಿವ್ ಆಗಿದ್ದಾರೆ. ಅದೆಷ್ಟೇ ಕಷ್ಟ ಬಂದ್ರೂ ಖುಷಿ ಖುಷಿಯಾಗಿ ಎದುರಿಸ್ತೀನಿ ಅಂತಾರೆ ಈ ಯು ಟರ್ನ್ ಬ್ಯೂಟಿ.

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more