
ರಶ್ಮಿಕಾ ಮಂದಣ್ಣ ರಣಚಂಡಿ ಅವತಾರ ತಾಳಿದ್ದಾರೆ. ನಾಯಕಿ ಪ್ರಧಾನ ಚಿತ್ರವಾಗಿರೋ ಮೈಸಾದಲ್ಲಿ ರಶ್ಮಿಕಾ ರಗಡ್ ಅವತಾರ ಇದ್ದು, ವರ್ಷಾಂತ್ಯಕ್ಕೆ ಮಾಸ್ ಅವತಾರದ ಮೂಲಕ ಸದ್ದು ಮಾಡಿದ್ದಾರೆ ರಶ್ಮಿಕಾ.
ಇಷ್ಟು ದಿನ ಕ್ಯೂಟ್ ಅಂಡ್ ಸ್ವೀಟ್ ಅವತಾರದಲ್ಲಿ ಕಾಣಿಸಿಕೊಳ್ತಾ ನ್ಯಾಷನಲ್ ಕ್ರಶ್ ಅನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ರಣಚಂಡಿ ಅವತಾರ ತಾಳಿದ್ದಾರೆ. ನಾಯಕಿ ಪ್ರಧಾನ ಚಿತ್ರವಾಗಿರೋ ಮೈಸಾದಲ್ಲಿ ರಶ್ಮಿಕಾ ರಗಡ್ ಅವತಾರ ಇದ್ದು, ವರ್ಷಾಂತ್ಯಕ್ಕೆ ಮಾಸ್ ಅವತಾರದ ಮೂಲಕ ಸದ್ದು ಮಾಡಿದ್ದಾರೆ ರಶ್ಮಿಕಾ. ಯೆಸ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಂದಕೂಡಲೇ ಅವರ ಬಬ್ಲಿ ಬಬ್ಲಿ ಕ್ಯಾರೆಕ್ಟರ್ಸ್, ಚೆಲ್ಲು ಚೆಲ್ಲು ನಗೆಯ ಚೆಲುವೆ ಅವತಾರವೇ ಕಣ್ಮುಂದೆ ಬರುತ್ವೆ. ಇದೂವರೆಗೂ ಕಿರಿಕ್ ಬ್ಯೂಟಿ ಇಂಥದ್ದೇ ಕ್ಯೂಟ್ ಅವತಾರದಲ್ಲಿ ಮಿಂಚಿದ್ದೇ ಹೆಚ್ಚು. ಆದ್ರೀಗ ಸ್ವೀಟ್ ಅಂಡ್ ಕ್ಯೂಟ್ ಅವತಾರಕ್ಕೆ ಗುಡ್ ಬೈ ಹೇಳಿ ರಾ ಌಂಡ್ ರಗಡ್ ಲುಕ್‌ನಲ್ಲಿ ಹಾಜರಾಗಿದ್ದಾರೆ. ರಶ್ಮಿಕಾ ಅಭಿನಯದ ಮೈಸಾ ಸಿನಿಮಾದ ಫಸ್ಟ್ ಗ್ಲಿಮ್ಸ್ ರಿಲೀಸ್ ಆಗಿದ್ದು, …ಹಿಂದೆಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ರಶ್ಮಿಕಾ ಮಿಂಚಿದ್ದಾರೆ.
ಈಗಾಗಲೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ನಿಂದ ಸದ್ದು ಮಾಡಿದ್ದ ಮೈಸಾ ಸಿನಿಮಾ ವರ್ಷಾಂತ್ಯದಲ್ಲಿ ಈ ಗ್ಲಿಮ್ಸ್ ಮೂಲಕ ಎಲ್ಲರ ಗಮನ ಸೆಳೆದಿದೆ. ಮೈಸಾ ಸಿನಿಮಾದಿಂದ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತನ್ನ ಮೊದಲ ಇರಿಸಿದ್ದಾರೆ. ಅನ್‌ಫಾರ್ಮ್ಯುಲಾ ಫಿಲ್ಮ್ಸ್ ನಿರ್ಮಾಣ ಮಾಡ್ತಾ ಇರೋ ಈ ಸಿನಿಮಾ ಪ್ಯಾನ್ ಇಂಡಿಯಾರೆ ತೆರೆಗೆ ಬರಲಿದೆ. ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರೋ ರಶ್ಮಿಕಾ, ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ .. Gondi ಸಮುದಾಯದ ಮಹಿಳಾ ನಾಯಕಿಯ ಕಥೆ ಈ ಸಿನಿಮಾದಲ್ಲಿದೆಯಂತೆ. ಒಟ್ಟಾರೆ ರಶ್ಮಿಕಾ ವರ್ಷಾಂತ್ಯಕ್ಕೆ ಹೊಸ ಲುಕ್‌ನಲ್ಲಿ ಬಂದಿರೋ ರಶ್ಮಿಕಾ ಮುಂದಿನ ತನ್ನ ಹೊಸ ರೂಪ ತೋರಿಸ್ತಿನಿ ಅನ್ನೋ ಸೂಚನೆ ಕೊಟ್ಟಿದ್ದಾರೆ.