Jan 7, 2022, 1:44 PM IST
'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಮೋಡಿ ಮಾಡಿದ್ದಾರೆ. ಇದೀಗ ರಶ್ಮಿಕಾ ಮತ್ತು ವಿಜಯ್ ಗೋವಾದಲ್ಲಿ ಹೊಸ ವರ್ಷವನ್ನು (New Year) ಒಟ್ಟಾಗಿ ಆಚರಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಫೋಟೋ ಸಾಕ್ಷ್ಯ ಕೂಡ ಸಿಕ್ಕಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.
Rashmika Mandanna: ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ!
ಹೌದು! ಗೋವಾದಲ್ಲಿ ರೆಸಾರ್ಟ್‌ನ ಹೈಫೈ ಹೋಟೆಲ್‌ನಲ್ಲಿ ನ್ಯೂ ಇಯರ್ ಆಚರಿಸಿದ್ದಾರಂತೆ ಈ ಜೋಡಿ. ಅಲ್ಲದೇ ರಶ್ಮಿಕಾ ಅಲ್ಲಿ ಸೆರೆ ಹಿಡಿದ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ (Anand Devarakonda) ಕೂಡಾ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಹಾಗೂ ಆನಂದ್ ಹಂಚಿಕೊಂಡಿರುವ ಫೋಟೋದಲ್ಲಿನ ಬ್ಯಾಗ್‌ಗ್ರೌಂಡ್ ಒಂದೇ ಆಗಿದ್ದು, ಇವರಿಬ್ಬರು ಒಂದೇ ಕ್ಯಾಪ್ಷನ್ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಕೂಡ ಇಲ್ಲಿಯೇ ಇದ್ದರು ಎನ್ನಲಾಗುತ್ತಿದೆ. ಹೀಗಾಗಿ ನೆಟ್ಟಿಗರು ರಶ್ಮಿಕಾ ಮತ್ತು ವಿಜಯ್ ನಡುವೆ ಸಂಥಿಂಗ್ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment