70 ಲಕ್ಷಕ್ಕೂ ಅಧಿಕ ಹಣ ಖರ್ಚು: ಸಿನಿಮಾದ130 ಮಂದಿಗೆ ಚಿನ್ನದ ನಾಣ್ಯ ಕೊಟ್ಟ ಕೀರ್ತಿ ಸುರೇಶ್!

70 ಲಕ್ಷಕ್ಕೂ ಅಧಿಕ ಹಣ ಖರ್ಚು: ಸಿನಿಮಾದ130 ಮಂದಿಗೆ ಚಿನ್ನದ ನಾಣ್ಯ ಕೊಟ್ಟ ಕೀರ್ತಿ ಸುರೇಶ್!

Published : Mar 23, 2023, 12:12 PM IST

ಲಕ್ಷಾಂತರ ಮೌಲ್ಯದ ಚಿನ್ನದ ನಾಣ್ಯಗಳನ್ನು 130 ಮಂದಿಗೆ ಕೀರ್ತಿ ಸುರೇಶ್ ನೀಡಿದ್ದಾರಂತೆ! ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ದಸರಾ' ಸಿನಿಮಾದಲ್ಲಿ ವನ್ನೆಲಾ ಎಂಬ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. 

ಇದ್ರೆ ಇಂಥಾ ನಟಿ ಇರಬೇಕಪ್ಪಾ ಎನ್ನುತ್ತಿದ್ದಾರೆ ತೆಲುಗು ಸಿನಿಮಾ ದಸರಾ ಟೀಂ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಮಾಡಿರೋ ಈ ಕೆಲಸಕ್ಕೆ ಇಡೀ ದಸರಾ ಟೀಂ  ವಾವಾ ಎನ್ನುತ್ತಿದೆ. ಮಹಾನಟಿ' ಕೀರ್ತಿ ಸುರೇಶ್ ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಟಾಲಿವುಡ್‌ನಲ್ಲೇ ಹೆಚ್ಚು ಸಕ್ರಿಯರಾಗಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು ಕೂಡ ತೆಲುಗಿನ 'ಮಹಾನಟಿ' ಸಿನಿಮಾ. ಇದೀಗ ಅವರು ತೆಲುಗಿನ 'ದಸರಾ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನಿ ಈ ಸಿನಿಮಾದ ಹೀರೋ. ಸದ್ಯ ಒಂದು ವಿಚಾರಕ್ಕೆ ಕೀರ್ತಿ ಸುರೇಶ್ ಸಖತ್ ಸುದ್ದಿಯಲ್ಲಿದ್ದಾರೆ. 

ಹೌದು, ಲಕ್ಷಾಂತರ ಮೌಲ್ಯದ ಚಿನ್ನದ ನಾಣ್ಯಗಳನ್ನು 130 ಮಂದಿಗೆ ಕೀರ್ತಿ ಸುರೇಶ್ ನೀಡಿದ್ದಾರಂತೆ! ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ದಸರಾ' ಸಿನಿಮಾದಲ್ಲಿ ವನ್ನೆಲಾ ಎಂಬ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇದೊಂದು ಡಿಗ್ಲಾಮರಸ್ ಪಾತ್ರ. ಈ ಸಿನಿಮಾದ ತಂಡದ ಮೇಲೆ ಕೀರ್ತಿಗೆ ಅದೇನೋ ವಿಶೇಷ ಪ್ರೀತಿ. ಹಾಗಾಗಿ, ಚಿತ್ರಕ್ಕಾಗಿ ಕೆಲಸ ಮಾಡಿದ ಸುಮಾರು 130 ಜನರಿಗೆ 10 ಗ್ರಾಂ ತೂಕದ ಒಂದೊಂದು ಚಿನ್ನದ ನಾಣ್ಯಗಳನ್ನು ಕೀರ್ತಿ ಸುರೇಶ್ ನೀಡಿದ್ದಾರೆ ಎನ್ನಲಾಗಿದೆ. ಈ ಚಿನ್ನದ ನಾಣ್ಯಗಳ ಒಟ್ಟು ಮೌಲ್ಯ 70ರಿಂದ 75 ಲಕ್ಷ ರೂ. ಎಂದು ತಿಳಿದುಬಂದಿದೆ. ಚಿತ್ರೀಕರಣದ ಕೊನೆಯ ದಿನ ಕೀರ್ತಿ ಸುರೇಶ್ ಅವರು ಈ ಚಿನ್ನದ ನಾಣ್ಯಗಳನ್ನು ನೀಡಿದ್ದಾರಂತೆ. ತನಗೆ ದಸರಾ ಸಿನಿಮಾದಲ್ಲಿ ಬಂದ ಸಂಭಾವನೆಯನ್ನು ಇಡೀ ಚಿತ್ರತಂಡಕ್ಕಾಗಿಯೇ ಖರ್ಚು ಮಾಡಿದ ಏಕೈಕ ನಟಿ ಕೀರ್ತಿ ಸುರೇಶ್.

ನಿಜಕ್ಕೂ ನೀವು ರಿಯಲ್ ಲೈಫಲ್ಲೂ ಮಹಾನಟಿಯೇ ಎಂದು ಚಿತ್ರತಂಡ ಬಣ್ಣಿಸುತ್ತಿದೆ. 'ಕೀರ್ತಿ ಸುರೇಶ್ ಅವರು ಕೊನೆಯ ದಿನದ ಶೂಟಿಂಗ್ ವೇಳೆ ತುಂಬ ಭಾವುಕರಾಗಿದ್ದರು. ತಮಗೆ ಇಂಥದ್ದೊಂದು ಸಿನಿಮಾ ನೀಡಿದ್ದಕ್ಕಾಗಿ ಚಿತ್ರತಂಡದ ಸದಸ್ಯರಿಗೆ ಏನಾದರೂ ವಿಶೇಷವಾದದ್ದನ್ನು ನೀಡಬೇಕು ಎಂದು ಅವರು ಅಂದುಕೊಂಡಿದ್ದರು' ಎಂದು ಹೇಳಿದ್ದಾರೆ. ಕಳೆದ ವರ್ಷ ತೆರೆಕಂಡ 'ಸರ್ಕಾರು ವಾರಿ ಪಾಟ' ಸಿನಿಮಾ ಕೀರ್ತಿಗೆ ಬ್ರೇಕ್ ನೀಡಿತು. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 'ದಸರಾ' ನಂತರ ಚಿರಂಜೀವಿ ಜೊತೆಗೆ 'ಭೋಳಾ ಶಂಕರ್' ಸಿನಿಮಾ ಮಾಡುತ್ತಿದ್ದಾರೆ. ಹಾಗೆಯೇ, ತಮಿಳಿನಲ್ಲಿ 'ಮಾಮಣ್ಣನ್', 'ಸೈರೆನ್', ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಘು ತಾತ' ಹಾಗೂ 'ರಿವಾಲ್ವಾರ್ ರೀಟಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ಧಾರೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more