
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ರಿಲೀಸ್ ಗೆ ಕೌಂಟ್ಡೌನ್ ಶುರುವಾಗಿದೆ. ಆಡಿಯೋ ಲಾಂಚ್ ಇವೆಂಟ್ನಲ್ಲಿ ಕೂಲಿ ಸ್ಟಾರ್ಸ್ಗಳೆಲ್ಲಾ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಧೂಳ್ ಎಬ್ಬಿಸಿದ್ದಾರೆ.
ಕೂಲಿ.. ಸದ್ಯ ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿರೋ ಸಿನಿಮಾ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಅಂದ್ರೆ ಸಹಜವಾಗೇ ದೊಡ್ಡ ಹೈಪ್ ಇರುತ್ತೆ. ರಜನಿ ಜೊತೆಗೆ ಈ ಸಿನಿಮಾದಲ್ಲಿ ಎಲ್ಲಾ ಭಾಷೆಯ ಬಿಗ್ ಸ್ಟಾರ್ಗಳು ಇದ್ದು, ಇಂಡಿಯನ್ ಸಿನಿಇಂಡಸ್ಟ್ರಿಯಲ್ಲೇ ಇದು ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿ ಅಂದ್ರೆ ತಪ್ಪಾಗಲ್ಲ. ನಮ್ಮ ರಿಯಲ್ ಸ್ಟಾರ್ ಉಪೇಂದ್ರ, ತೆಲುಗಿನ ಕಿಂಗ್ ನಾಗಾರ್ಜುನ, ಮಲಯಾಳಂನ ಶೌಬಿನ್ ಸಾಹಿರ್, ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಜೊತೆಗೆ ಶೃತಿ ಹಾಸನ್, ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಸಿನಿಮಾದಲ್ಲಿದ್ದಾರೆ. ಸದ್ಯ ಟ್ರೈಲರ್ನಲ್ಲಿ ಇವರೆಲ್ಲರ ಲುಕ್ನ ರಿವೀಲ್ ಮಾಡಲಾಗಿದೆ.