Shriram Bhat | Updated: Mar 15, 2025, 2:25 PM IST
ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ (Aamir Khan) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಆಮೀರ್ ತಮ್ಮ ಹೊಸ ಗರ್ಲ್ಫ್ರೆಂಡ್ ಬಗ್ಗೆ ನಡೀತಾ ಇದ್ದ ಚರ್ಚೆಗಳಿಗೂ ಫುಲ್ ಸ್ಟಾರ್ ಇಟ್ಟಿದ್ದಾರೆ. 60ರ ಹರೆಯಕ್ಕೆ ಕಾಲಿಟ್ಟಿರೋ ಆಮೀರ್ ತಮ್ಮ ಹೊಸ ಗೆಳತಿಯನ್ನ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ.
ಆಮೀರ್ ಖಾನ್ 60 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದ ಸಮಯದಲ್ಲೇ ತಮ್ಮ ಹೊಸ ಅಫೇರ್ ಬಗ್ಗೆ ಹರಡಿದ್ದ ಗಾಸಿಪ್ಸ್ಗೂ ಫುಲ್ ಸ್ಟಾಪ್ ಹಾಕಿದ್ದಾರೆ. ಎರಡು ಮದುವೆ, ಎರಡು ವಿಚ್ಛೆಧನ ಪಡೆದಿರೋ ಆಮೀರ್ .. ಹೌದು ನಾನು ಈಗ ಇನ್ನೊಬ್ಬ ಹೆಣ್ಣಿನ ಜೊತೆ ರಿಲೇಷನ್ ಶಿಪ್ನಲ್ಲಿದ್ದಿನಿ ಅಂತ ಹೇಳಿಕೊಂಡಿದ್ದಾರೆ.
ತಮ್ಮ ಹುಟ್ಟುಹಬ್ಬದ ದಿನವೇ ಮುಂಬೈನಲ್ಲಿ ಮಾಧ್ಯಮಗಳ ಮುಂದೆ ತಮ್ಮ ಹೊಸ ಲೈಫ್ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಮೂಲದ ಗೌರಿ ಅನ್ನೋ ಮಹಿಳೆ ಜೊತೆಗೆ ತಾನು ಕಳೆದ 18 ತಿಂಗಳಿಂದ ಸಹಜೀವನ ಮಾಡ್ತಾ ಇದ್ದೀನಿ ಅನ್ನೋ ವಿಷ್ಯ ಹೇಳಿಕೊಂಡಿದ್ದಾರೆ.
ವಿಶೇಷ ಅಂದ್ರೆ ಆಮೀರ್ ಖಾನ್ ಪ್ರೀ ಬರ್ತ್ಡೇ ಪಾರ್ಟಿನಲ್ಲಿ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡ ಭಾಗಿಯಾಗಿದ್ರು. ಅವರ ಮುಂದೆನೇ ತಮ್ಮ ಹೊಸ ಗೆಳತಿ ಹೆಸರು ಹೇಳಿದ್ದಾರೆ ಆಮೀರ್.
ಆಮೀರ್ ತಮ್ಮ ಹೊಸ ಗೆಳತಿ ಗೌರಿಯನ್ನ ಶಾರೂಖ್ ಮತ್ತು ಸಲ್ಮಾನ್ಗೂ ಪರಿಚಯ ಮಾಡಿಸಿದ್ದಾರಂತೆ. ಗೌರಿಗೆ ಒಬ್ಬ 6 ವರ್ಷದ ಮಗನಿದ್ದು ಇಬ್ಬರು ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದಾರಂತೆ. ಒಟ್ನಲ್ಲಿ ವಯಸ್ಸು ಅರವತ್ತಾದ್ರೂ ಆಮೀರ್ ಈ ಪರಿ ಜಾಲಿ ಜಾಲಿಯಾಗಿರೋ ಆಮೀರ್ ಕಂಡು ಹೆಂಗಪ್ಪಾ ಇದೆಲ್ಲಾ ಸಾಧ್ಯ ಅಂತಿದಾರೆ ಸಿನೀಯರ್ ಸಿಟಿಜನ್ಸ್. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..