Jun 12, 2022, 5:04 PM IST
777 ಚಾರ್ಲಿ ಸಿನಿಮಾದ ನಾಯಕಿ ಸಂಗೀತಾ ಶೃಂಗೇರಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಜೊತೆ ಸಿನಿಮಾದ ಅನುಭವ ಬಿಚ್ಚಿಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದಿರುವ ಸಿನಿಮಾದ ಬಗ್ಗೆ ಸಂಗೀತಾ ಫುಲ್ ಖುಷ್ ಆಗಿದ್ದಾರೆ. ಸಿನಿಮಾದಲ್ಲಿ ಸಾಮಾನ್ಯವಾಗಿ ಲವ್ ಸ್ಟೋರಿ ಇದ್ದೇ ಇರುತ್ತದೆ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಈ ಸಿನಿಮಾದಲ್ಲಿ ಲವ್ ಸ್ಟೋರಿ ಇಲ್ಲ, ಹಾಗಾಗಿ ತುಂಬಾ ಇಷ್ಟವಾಯಿತು ಎಂದಿದ್ದಾರೆ. ಈ ಸಿನಿಮಾದಲ್ಲಿ ಸಂಗೀತಾ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಸಿಂಪಲ್ ಹುಡುಗಿಯಾಗಿ ಸಂಗೀತಾ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಚಿತ್ರದ ಬಗ್ಗೆ ಸಂಗೀತಾ ಹೇಳಿದ್ದಿಷ್ಟು.