Vastu Tips: ಮನೆಯಲ್ಲಿ ಈ ಬದಲಾವಣೆ ತನ್ನಿ, ದುಪ್ಪಟ್ಟು ಹಣ ಗಳಿಸಿ

By Suvarna News  |  First Published May 22, 2022, 8:49 PM IST

ವಾಸ್ತು (Vastu) ಸರಿಯಾಗಿಲ್ಲದಿದ್ದರೆ ಹಣ – ನೆಮ್ಮದಿ ಎರಡರ ಹರಣವೂ ಆಗುತ್ತದೆ. ಅಂದರೆ, ಹಣ (Money) ಎಷ್ಟೇ ಬಂದರೂ ಕೈಯಲ್ಲಿ ನಿಲ್ಲದೆ ನೀರಿನಂತೆ ವ್ಯಯವಾಗಿಬಿಡುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣ. ಆದರೆ, ಕೆಲವು ಬದಲಾವಣೆ (Changes) ಮಾಡಿಕೊಂಡರೆ ಮನೆಯಲ್ಲಿ ಹಣ ದುಪ್ಪಟ್ಟಾಗುತ್ತದೆ ಎಂಬುದನ್ನು ನೋಡೋಣ...


ಮನುಷ್ಯನಿಗೆ ನೆಮ್ಮದಿಯ (Peaceful) ಬದುಕು ಮುಖ್ಯವಾಗುತ್ತದೆ. ಎಷ್ಟೇ ಕೆಲಸದ ಒತ್ತಡಗಳಿದ್ದರೂ (Work pressure) ಮನೆಗೆ ಬಂದ ಮೇಲೆ ನೆಮ್ಮದಿ ಕಾಣಬೇಕು ಎಂಬುದು ಎಲ್ಲರ ಇಚ್ಛೆಯೂ ಆಗಿರುತ್ತದೆ. ಆದರೆ, ಕೆಲವೊಮ್ಮೆ ಮನೆಗೆ ಬಂದರೂ ನೆಮ್ಮದಿ ಇರುವುದಿಲ್ಲ. ಮನೆಯಲ್ಲಿ ನೆಮ್ಮದಿ ನೆಲೆಸಿಲ್ಲವಾದರೆ ಅದಕ್ಕೆ ವಾಸ್ತು ದೋಷವೂ ಕಾರಣ ಇರಬಹುದು. ಮನೆ ಎಂದ ಮೇಲೆ ವಾಸ್ತು ಬಹಳ ಮುಖ್ಯ. ಮನೆಗಳನ್ನು ಕಟ್ಟಿಸುವಾಗ ವಾಸ್ತು ನೋಡುವುದು ಸಹ ಅದಕ್ಕೇ. ದೇವರ ಕೋಣೆ, ಅಡುಗೆ ಮನೆ (Kitchen), ಬೆಡ್ ರೂಂ (Bed Room), ಬೆಂಕಿ ಉರಿಯುವ ಜಾ, ಬಾತ್ ರೂಂ ಸೇರಿದಂತೆ ಎಲ್ಲವಕ್ಕೂ ನಿರ್ದಿಷ್ಟ ಜಾಗ ಎಂಬುದಿದೆ. ಆದರೆ, ಕೆಲವರು ಹಣ (Money) - ಜಾಗದ ಉಳಿತಾಯ ಎಂಬ ಹೆಸರಿನಲ್ಲಿ ವಾಸ್ತು ನೋಡುವುದಿಲ್ಲ. ಮುಂದೆ ಇದಕ್ಕೆ ಸಾಕಷ್ಟು ಬೆಲೆ ತೆರಬೇಕಾಗುತ್ತದೆ ಎಂಬುದು ಆಗ ತಿಳಿಯುವುದಿಲ್ಲ. ಹೀಗಾಗಿ ಆರ್ಥಿಕವಾಗಿ ಲಾಭ ತರುವಂತೆ ಮನೆಯಲ್ಲಿ ಏನು ಬದಲಾವಣೆ ಮಾಡಬೇಕು ಎಂಬುದನ್ನು ನೋಡೋಣ...

ಹೀಗೆ ಮಾಡಿ…
• ಮನೆಯಿಂದ ಹೊರ ಹರಿಯುವ ನೀರು (Water) ಸಮರ್ಪಕ ದಿಕ್ಕಿನಲ್ಲಿ ಹೋಗಬೇಕು. ಹೀಗಾಗದಿದ್ದರೆ ಹಣದ ಹರಿವಿನಲ್ಲಿ ಸಮಸ್ಯೆಯಾಗುವುದಲ್ಲದೆ, ಆರ್ಥಿಕ ಕೊರತೆಯಾಗುತ್ತದೆ. 

• ಮನೆಯಿಂದ ಹೊರ ಹೋಗುವ ನೀರು ದಕ್ಷಿಣ (South) ಹಾಗೂ ಪಶ್ಚಿಮ ದಿಕ್ಕಿನ (West) ಕಡೆ ಹರಿಯಬಾರದು. ಇದು ಯಾವಾಗಲೂ ಪೂರ್ವ (East) ಅಥವಾ ಉತ್ತರ ದಿಕ್ಕಿಗೆ (North Direction) ಹೋಗಬೇಕು. ಹೀಗೆ ಹೋದರೆ ಶುಭಫಲ ಲಭ್ಯವಾಗುತ್ತದೆ. ಹೀಗಾದಲ್ಲಿ ಹಣದ ಕೊರತೆ ಉಂಟಾಗದು. 

Tap to resize

Latest Videos

undefined

• ಹಣ ಇಡುವ ಲಾಕರ್ (Money locker) ಅನ್ನು ಉತ್ತರ ದಿಕ್ಕಿಗೆ ಮುಖ ಮಾಡಿಡಬೇಕು. ಇದರಿಂದ ಆರ್ಥಿಕ ಲಾಭವಾಗುತ್ತದೆ. ಜೊತೆಗೆ ಹಣವೂ ಕೈಯಲ್ಲಿ ನಿಲ್ಲುತ್ತದೆ. ಇನ್ನೊಂದು ಬಹುಮುಖ್ಯ ವಿಚಾರವೆಂದರೆ ದಕ್ಷಿಣ ದಿಕ್ಕಿನಲ್ಲಿ ಹಣವನ್ನು ಯಾವುದೇ ಕಾರಣಕ್ಕೂ ಇಡಬಾರದು. ಹೀಗೆ ಇಡುವುದರಿಂದ ನಷ್ಟವಾಗುತ್ತದೆ. 

ಇದನ್ನು ಓದಿ: Vastu tips: ಹೊಸ ಮನೆ ಪ್ರವೇಶ ಹೀಗಾದರೆ ಫಲ ಮಂಗಳಕರ..

• ಮಲಗುವ ಕೋಣೆಯ ಮೂಲೆಯಲ್ಲಿ ಮೆಟಲ್ ಸೇರಿದಂತೆ ಯಾವುದೇ ಲೋಹದ ವಸ್ತುಗಳನ್ನು ಇಡಬಾರದು. ಜೊತೆಗೆ ಬೆಡ್ ರೂಂನ ಮೂಲೆಯಲ್ಲಿ ಬಿರುಕು ಬಿಟ್ಟಿರಕೂಡದು. ಹೀಗಿದ್ದರೆ ಆರ್ಥಿಕ ನಷ್ಟ ತಲೆದೋರುತ್ತದೆ.

• ಮನೆಯೊಳಗೆ, ಗೋಡೌನ್‌ನಲ್ಲಿ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳಬಾರದು. ಮುರಿದ ಮಂಚ, ಬಳಸದ ಕಪಾಟುಗಳು ಇರಬಾರದು. ಒಂದು ವೇಳೆ ಇದ್ದರೆ ಆರ್ಥಿಕ ತೊಂದರೆ, ಖರ್ಚುಗಳು ಹೆಚ್ಚುತ್ತವೆ. 

• ಮನೆ ನಲ್ಲಿಯಲ್ಲಿ ನೀರು ಸೋರಿಕೆಯನ್ನು ಮೊದಲು ತಡೆಯೊಡ್ಡಿ. ನೀರು ತೊಟ್ಟಿಕ್ಕುತ್ತಿದ್ದರೆ ವಾಸ್ತು ದೋಷವಾಗುತ್ತದೆ. ಇದಿಂದ ಗಂಭೀರ ಪ್ರಮಾಣದ ನಷ್ಟವಾಗುತ್ತದೆ. 

• ಮನೆಯ ಮುಖ್ಯದ್ವಾರಕ್ಕೂ ಹಣಕ್ಕೂ ನೇರಾನೇರ ಸಂಬಂಧ ಇದೆ. ಇದರಲ್ಲಿ ದೋಷವಾದರೆ ವಾಸ್ತುವಿಗೆ ದೋಷ ಆದಂತೆಯೇ ಲೆಕ್ಕ. ದಕ್ಷಿಣ ದಿಕ್ಕಿಗೆ ಮನೆಯ ಮುಖ್ಯದ್ವಾರ ಇದ್ದರೆ ಯಾವಾಗಲೂ ಆರ್ಥಿಕ ತೊಂದರೆ (Financial difficulties) ಆಗುತ್ತದೆ. ಅಲ್ಲದೆ, ಮುಖ್ಯದ್ವಾರದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದೇ ಆದಲ್ಲಿ, ಇಲ್ಲವೇ ಸರಿಯಾಗಿ ತೆರೆದುಕೊಳ್ಳದಿದ್ದರೂ ಸಹ ಆರ್ಥಿಕವಾಗಿ ಭಾರಿ ಮಟ್ಟದ ಹಾನಿಯಾಗಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಶನಿ ಜಯಂತಿಯಂದು ಸರ್ವಾರ್ಥ ಸಿದ್ಧಿ ಯೋಗ

• ಪಶ್ಚಿಮ ದಿಕ್ಕಿನಲ್ಲಿ ಅಡುಗೆಮನೆ ಇದೆ ಎಂದಾದರೆ ಹಣವು ಕೈತುಂಬಾ ಬರುತ್ತದೆ. ಆದರೆ, ಬಂದ ಹಣವು ಅಷ್ಟೇ ವೇಗವಾಗಿ ಖರ್ಚಾಗಿ ಬಿಡುತ್ತದೆ. 

• ಬಾಡಿ ಹೋಗಿರುವ ಹೂವುಗಳನ್ನು ಮನೆಯೊಳಗೆ ಇಟ್ಟುಕೊಳ್ಳಬಾರದು, ಶೋಕೇಸ್‌ಗೆಂದೋ, ಮನೆ ಸಿಂಗಾರಕ್ಕೆಂದೋ ತರುವ ಪ್ಲಾಸ್ಟಿಕ್ ವಸ್ತುಗಳಾದ ಹೂವು, ಗಿಡಗಳು ನೆಗೆಟಿವ್ ಎನರ್ಜಿಯನ್ನು (Negative energy) ಉಂಟು ಮಾಡುತ್ತದೆ. ಇದರ ಜೊತೆಗೆ ಮನೆಯ ಒಳಗೆ ಬಾಡಿದ ಹೂವುಗಳನ್ನು ಸಹ ಇಟ್ಟುಕೊಳ್ಳಬಾರದು.

click me!