ಮಕ್ಕಳ ಖುಷಿಗೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ, ಎಲ್ಲೆಲ್ಲಿ ಏನಿಡಬೇಕು?

By Suvarna News  |  First Published Dec 12, 2022, 1:03 PM IST

ನಿಮ್ಮ ಮಕ್ಕಳು ಆರೋಗ್ಯವಂತರಾಗಿ, ಖುಷಿ ಖುಷಿಯಿಂದ ಇರಬೇಕೇ? ಹಾಗಿದ್ದರೆ ಈ ವಾಸ್ತು ಅನುಸರಿಸಿ. 


ಮಕ್ಕಳು ಸಂಸಾರದ ಕಣ್ಣುಗಳಿದ್ದಂತೆ. ಮಕ್ಕಳು ಆರೋಗ್ಯವಾಗಿರಲಿ, ಬುದ್ಧಿವಂತರಾಗಲಿ, ಕಲಿಕೆಯಲ್ಲಿ ಪ್ರಗತಿ ತೋರಲಿ ಎಂದೇ ಎಲ್ಲರೂ ಬಯಸುವುದು. ಆದರೆ ಕೆಲವೊಮ್ಮೆ ಮಕ್ಕಳು ಮಂಕಾಗಿರುತ್ತಾರೆ. ಆರೋಗ್ಯ ಪದೇ ಪದೇ ಕೆಡುತ್ತದೆ. ಹೀಗಾಗುವುದರಲ್ಲಿ ಮನೆಯ ವಾಸ್ತುವಿನ ಪಾತ್ರವೂ ಇರಬಹುದು ಎಂಬುದು ನಿಮಗೆ ನೆನಪಿರಲಿ. ನಿಮ್ಮ ಮಗುವಿನ ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ನಿಮ್ಮ ಮನೆಯ ಶಕ್ತಿಯ ಸಮತೋಲನವು ದೊಡ್ಡ ಪಾತ್ರ ವಹಿಸುತ್ತದೆ ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಮಕ್ಕಳು ವಾಸ್ತುವಿನಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಮನೆಯ ವಾಸ್ತು ಅವರ ಭವಿಷ್ಯವನ್ನು ರೂಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ಮತ್ತು ಶಕ್ತಿಯ ಹರಿವು ಸರಿಯಾಗಿದ್ದರೆ, ಮಕ್ಕಳು ಚೆನ್ನಾಗಿರುತ್ತಾರೆ. ಹಾಗಾದರೆ ಮಕ್ಕಳ ಆರೋಗ್ಯಕ್ಕೆ ಅನುಕೂಲವಾಗುವಂತೆ ಮನೆಯ ವಾಸ್ತು ಸರಿಪಡಿಸುವುದು ಹೇಗೆ?

- ಮನೆಯ ಕಿಟಕಿಗಳು ಸಾಧ್ಯವಾದಷ್ಟೂ ಪೂರ್ವ ಭಾಗದಲ್ಲಿ ಇರಲಿ. ಇದು ಚೆನ್ನಾಗಿ ಬೆಳಕನ್ನೂ ಸಕಾರಾತ್ಮಕ ಶಕ್ತಿಯನ್ನೂ ತರುತ್ತದೆ. ಪೂರ್ವ ದಿಕ್ಕಿನಲ್ಲಿ ಮನೆಯ ಬಾಗಿಲು ಇರಬೇಕು. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಮನೆ ಕಟ್ಟಿದರೆ ತುಂಬಾ ಉತ್ತಮ. ಸೂರ್ಯನ ಕಿರಣ ಮನೆಯ ಪ್ರಧಾನ ಬಾಗಿಲಿನ ಮೇಲೆ ಬೀಳಬೇಕು.

Tap to resize

Latest Videos

undefined

- ಮಕ್ಕಳ ಮಲಗುವ ಕೋಣೆ ನಿಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿರಬೇಕು. ನಿಮ್ಮ ಮಗು ವಿಶ್ರಾಂತಿ ಮತ್ತು ಶಾಂತಿಯುತ ನಿದ್ರೆಗಾಗಿ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು ಎಂದು ವಾಸ್ತು ಸೂಚಿಸುತ್ತದೆ. ಮಗುವಿನ ಮಲಗುವ ಕೋಣೆಯ ಸ್ಥಳ ವಾಸ್ತು ಪ್ರಕಾರ ನೈಋತ್ಯವನ್ನು ಸಹ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

- ಧನಾತ್ಮಕ ಮತ್ತು ಸಂತೋಷದ ವೈಬ್‌ಗಳನ್ನು ಆಹ್ವಾನಿಸಲು ನಿಮ್ಮ ಮಗುವಿನ ಕೋಣೆಯ ಬಾಗಿಲು ಪೂರ್ವಕ್ಕೆ ಮುಖವಾಗಿರಬೇಕು. ಇದು ಪ್ರದಕ್ಷಿಣಾಕಾರವಾಗಿ ತೆರೆಯಬೇಕು. ವಾಸ್ತು ಪ್ರಕಾರ, ಆಕ್ರಮಣಶೀಲತೆ ಅಥವಾ ಅಹಂಕಾರದ ಘರ್ಷಣೆಗಳಂತಹ ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ಕಾರಣ ನೀವು ಬಾಗಿಲಿನ ಮೇಲೆ ಫಲಕಗಳನ್ನು ಅಥವಾ ಚಿಹ್ನೆಗಳನ್ನು ಸ್ಥಗಿತಗೊಳಿಸಬಾರದು.

- ವಾಸ್ತು ಶಾಸ್ತ್ರದ ಪ್ರಕಾರ ತಿಳಿ ಹಸಿರು ಮತ್ತು ತಿಳಿ ಹಳದಿಯಂತಹ ಉತ್ಸಾಹಭರಿತ ಬಣ್ಣಗಳನ್ನು ಮನೆಯ ಗೋಡೆಗೆ ಮತ್ತು ಮಗುವಿನ ಕೋಣೆಗೆ ಬಳಿಯಬೇಕು. ಬೆಡ್ ಶೀಟ್‌ಗಳು, ವಾಲ್‌ಪೇಪರ್‌ಗಳು ಅಥವಾ ಕಾರ್ಪೆಟ್‌ಗಳಿಗೆ ಕಪ್ಪು ಅಥವಾ ನೀಲಿ ಬಣ್ಣವನ್ನು ಬಳಸಬೇಡಿ ಏಕೆಂದರೆ ಈ ಬಣ್ಣಗಳು ಮಕ್ಕಳಲ್ಲಿ ನಕಾರಾತ್ಮಕ ಭಾವನೆಗಳನ್ನು ಉಂಟುಮಾಡಬಹುದು.

Griha Pravesh Muhurat 2023: ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶಕ್ಕೆ ಮುಹೂರ್ತ ಯಾವಾಗಿದೆ?

- ವಾಸ್ತು ಶಾಸ್ತ್ರದ ಪ್ರಕಾರ ಪುಸ್ತಕದ ಕಪಾಟು ಈಶಾನ್ಯ ದಿಕ್ಕಿನಲ್ಲಿರಲಿ. ಮಕ್ಕಳ ಅಧ್ಯಯನದ ಟೇಬಲ್(Table) ಕಸವಿಲ್ಲದೆ ಸ್ವಚ್ಛವಾಗಿರಲಿ. ಟೇಬಲ್‌ ಕೆಳಗೆ ಚಪ್ಪಲಿ ಇರಬಾರದು. ಸ್ಟಡಿ(Study) ಟೇಬಲ್ ಕೋಣೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು. ಜೊತೆಗೆ, ಉತ್ತಮ ಏಕಾಗ್ರತೆಗಾಗಿ ಓದುವಾಗ ಮಗು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು.

- ಈಶಾನ್ಯ ದಿಕ್ಕಿಗೆ ವಾಸ್ತು(Vasthu) ಶಾಸ್ತ್ರದಲ್ಲಿ ಪ್ರಥಮ ಆದ್ಯತೆ ನೀಡುತ್ತಾರೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಭಾಗ. ಈ ದಿಕ್ಕಿನಲ್ಲಿ ಭಾರ ಕಡಿಮೆ ಇರಬೇಕು. ದೇವರ ಮನೆ ಇರಬೇಕು. ಇದರಿಂದ ಮನೆಯ ಯಜಮಾನನಿಗೂ ಹಾಗೂ ಮನೆಯ ಮಕ್ಕಳಿಗೆ ಉತ್ತಮ ಬುದ್ಧಿಲಾಭವಾಗುತ್ತದೆ.

Aries ರಾಶಿಯ ವ್ಯಕ್ತಿ ಎಷ್ಟೆಲ್ಲಾ ವಿಶೇಷ ಗುಣ ಹೊಂದಿದ್ದಾರೆ ಗೊತ್ತಾ!?

- ಮಕ್ಕಳ ಕೌಶಲ್ಯ ಮತ್ತು ಸಂಬಂಧ(Relation)ದ ಕ್ಷೇತ್ರವೆಂದರೆ ನೈಋತ್ಯ ದಿಕ್ಕು. ನಿಮ್ಮ ಗುರು ಮತ್ತು ಪೂರ್ವಜರ ಚಿತ್ರಗಳನ್ನು ಇಲ್ಲಿ ಇರಿಸಿದರೆ ಒಳಿತು. ಅವರ ಆಶೀರ್ವಾದವೇ ಜೀವನದಲ್ಲಿ ಮುಂದೆ ಸಾಗಲು ಮಕ್ಕಳಿಗೆ ಸಹಾಯ(Help) ಮಾಡುತ್ತದೆ. ಪೆನ್ನುಗಳು ಮತ್ತು ಪೆನ್ಸಿಲ್‌ಗಳನ್ನು ಹೊಂದಿರುವ ಪೆನ್ಸಿಲ್ ಸ್ಟ್ಯಾಂಡ್ ಒಂದನ್ನು ಸಹ ಇಲ್ಲಿ ಇರಿಸಿ. ಇದು ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುತ್ತದೆ. ಇದು ಅಧ್ಯಯನ ಟೇಬಲ್ ಇಡಲು ಮತ್ತೊಂದು ಸೂಕ್ತ ಸ್ಥಳ. ಪುಸ್ತಕದ ಕಪಾಟನ್ನು ಸಹ ಇಲ್ಲಿ ಇಡಬಹುದು.

click me!