Vastu Tips : ಹೊಸ ವರ್ಷದಲ್ಲಿ ಹಣದ ಹೊಳೆಯಾಗ್ಬೇಕೆಂದ್ರೆ ಈ ವಸ್ತು ತನ್ನಿ

By Suvarna News  |  First Published Dec 3, 2022, 5:01 PM IST

ಹೊಸ ವರ್ಷ ಹೊಸ ಭಾಗ್ಯ ತರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಬರುವ ವರ್ಷ ಖುಷಿ ತುಂಬಿರಬೇಕು ಎಂದಾದ್ರೆ ನಾವು ಕೆಲ ವಾಸ್ತು ನಿಯಮ ಪಾಲನೆ ಮಾಡ್ಬೇಕು. ಶಾಸ್ತ್ರದಲ್ಲಿ ಹೇಳಿದ ಕೆಲ ವಸ್ತುಗಳನ್ನು ಮನೆಗೆ ತರಬೇಕು.


ಇದು ವರ್ಷದ ಕೊನೆ ತಿಂಗಳು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷದ ಆಗಮನವಾಗ್ತಿದೆ. 2023ರ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ವರ್ಷದ ಕಷ್ಟಗಳು ಕಳೆದು ಮುಂದಿನ ವರ್ಷ ಸುಖ ಪ್ರಾಪ್ತಿಯಾಗಲಿ ಎಂದು ಜನರು ಆಶಿಸುತ್ತಿದ್ದಾರೆ. ಹೊಸ ವರ್ಷದಲ್ಲಿ  ಪ್ರತಿಯೊಬ್ಬ ವ್ಯಕ್ತಿ ದುಃಖ ದೂರವಾಗಬೇಕು, ಬಯಕೆಗಳು ಈಡೇರಬೇಕು, ವರ್ಷ ಪೂರ್ತಿ ಸಂತೋಷ ಮನೆಯಲ್ಲಿ ನೆಲೆಸಬೇಕು, ಮನೆಯಲ್ಲಿ ಹಣದ ಕೊರತೆ ಇರಬಾರದು, ಮನೆಯಲ್ಲಿ ಯಾವಾಗಲೂ ಸಮೃದ್ಧಿ ಇರಬೇಕು ಅಂದ್ರೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲನೆ ಮಾಡಬೇಕು. 

ವಾಸ್ತು ಶಾಸ್ತ್ರ (Vastu Shastra )ದ ಪ್ರಕಾರ, ಮನೆಯಲ್ಲಿ ಕೆಲ ವಸ್ತು (Material) ಗಳಿದ್ದರೆ ಅದು ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹೊಸ ವರ್ಷ (New Year ) ಸದಾ ಹೊಸತಾಗಿರಬೇಕು ಎಂದು ಬಯಸುವವರು ಹೊಸ ವರ್ಷದಲ್ಲಿ ಕೆಲ ವಸ್ತುಗಳನ್ನು ಅವಶ್ಯಕವಾಗಿ ಮನೆಗೆ ತರಬೇಕು. ಮನೆಯಲ್ಲಿ ಸಂತೋಷ, ಸಮೃದ್ಧಿ ಬೇಕು ಎನ್ನುವವರು ಹೊಸ ವರ್ಷ ಯಾವ ವಸ್ತುಗಳನ್ನು ಮನೆಯಲ್ಲಿ ಇಡಬೇಕು ಎಂಬುದನ್ನು ನಾವಿಂದು ಹೇಳ್ತೆವೆ.

Tap to resize

Latest Videos

undefined

ನವ ವರ್ಷ ಮನೆಗೆ ತನ್ನಿ ನವಿಲು (Peacock) ಗರಿ: ನವಿಲು ಗರಿಯನ್ನು ಎಲ್ಲರೂ ಇಷ್ಟಪಡ್ತಾರೆ. ನಿಮ್ಮ ಮನೆಯಲ್ಲಿ ನವಿಲುಗರಿ ಇಲ್ಲ ಎಂದಾದ್ರೆ ಹೊಸ ವರ್ಷದಲ್ಲಿ ನವಿಲು ಗರಿಯನ್ನು ಮನೆಗೆ ತನ್ನಿ. ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನವಿಲು ಗರಿಯು ಶ್ರೀಕೃಷ್ಣನಿಗೆ ಪ್ರಿಯವಾದ ವಸ್ತು.  ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಅದ್ಭುತ ಪರಿಣಾಮಗಳನ್ನು ಕಾಣಬಹುದು. ಅದೃಷ್ಟದ ಬಾಗಿಲು ತೆರೆಯಲು ನೆರವಾಗುತ್ತದೆ. ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. 

Zodiac Sign: ಸೆಲ್ಫ್‌ ಕೇರ್‌ ಎನ್ನುವುದು ಈ ರಾಶಿಗಳ ಜನಕ್ಕೆ ರಕ್ತದಲ್ಲೇ ಬಂದಿರುತ್ತೆ

ಹೊಸ ವರ್ಷ ಮನೆಯಲ್ಲಿರಲಿ ಆಮೆ: ವರ್ಷದ ಆರಂಭದಲ್ಲಿ  ಲೋಹವನ್ನು ಖರೀದಿಸಿದ್ರೆ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ನೀವು ವರ್ಷದ ಮೊದಲ ದಿನವೇ ಲೋಹವನ್ನು ಖರೀದಿ ಮಾಡಬಹುದು. ಇದ್ರಿಂದ ಮಂಗಳಕರ ಫಲವನ್ನು ನೀವು ಪಡೆಯಬಹುದು. ವಾಸ್ತು ಶಾಸ್ತ್ರದಲ್ಲಿ  ಆಮೆಗೆ ಮಹತ್ವದ ಸ್ಥಾನವಿದೆ. ಆಮೆಯನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.  ಹೊಸ ವರ್ಷದಲ್ಲಿ ನೀವು ಲೋಹದಿಂದ ಮಾಡಿದ ಆಮೆಯನ್ನು ಖರೀದಿ ಮಾಡಬಹುದು. ನೀವು  ಹಿತ್ತಾಳೆ ಅಥವಾ ಕಂಚಿನ ಆಮೆಯನ್ನು ಖರೀದಿಸಿ ಮನೆಯಲ್ಲಿಡಿ. ಇದ್ರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಜೊತೆಗೆ ಒಳ್ಳೆ ದಿನಗಳ ನಿಮ್ಮದಾಗುತ್ತವೆ. 

ಆನೆ ಇದ್ರೆ ಅದೃಷ್ಟ ಒಲಿದಂತೆ:  ಹೊಸ ವರ್ಷ ಹೊಸ ವಸ್ತು ಖರೀದಿ ಮಾಡಲು ನೀವು ಮುಂದಾಗಿದ್ದರೆ ಆನೆಯ ಪ್ರತಿಮೆ ಖರೀದಿ ಮಾಡಿ. ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇಡುವುದು ಶುಭ ಸಂಕೇತವಾಗಿದೆ.  ವಾಸ್ತು ಶಾಸ್ತ್ರದ ಪ್ರಕಾರ, ಲೋಹದಿಂದ ಮಾಡಿದ ಆನೆಯ ವಿಗ್ರಹವನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು  ಮನೆಯ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ. ಆನೆಯ ಪ್ರತಿಮೆ ಮನೆಯಲ್ಲಿದ್ದರೆ ಯಾವುದೇ ದುಷ್ಟ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ. ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಯೂರಿರುತ್ತದೆ. ಬೆಳ್ಳಿ ಲೋಹದಿಂದ ಮಾಡಿದ ಆನೆಯ ಪ್ರತಿಮೆಯನ್ನು ನೀವು ಮನೆಯಲ್ಲಿ ಇಟ್ಟರೆ ಒಳ್ಳೆಯದು. ಮನೆಯಲ್ಲಿ ಆನೆ ಪ್ರತಿಮೆ ಇದ್ದರೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ನೀವು ಕಾಣಬಹುದು. ಆರ್ಥಿಕ ಲಾಭ ನಿಮಗೆ ಸಿಗಲಿದೆ. 

ತುಲಾ ರಾಶಿಯವರು ನಿಮ್ಮ ಹೆಂಡತಿಯಾದರೆ, ಗಂಡಿನ ಜೀವನ ಹೇಗಿರುತ್ತೆ?

ಚಿಕ್ಕ ತೆಂಗಿನ ಕಾಯಿ : ತೆಂಗಿನ ಕಾಯಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಹೊಸ ವರ್ಷದಲ್ಲಿ ಸಣ್ಣ ತೆಂಗಿನ ಕಾಯಿಯನ್ನು ಮನೆಗೆ ತಂದು ಅದನ್ನು ಕಪಾಟಿನಲ್ಲಿ ಇಡಿ. ಇದ್ರಿಂದ ಸಂಪತ್ತಿನ ವೃದ್ಧಿಯಾಗುತ್ತದೆ.

click me!