Vastu Tips : ಹೊಸ ಮನೆಯಲ್ಲಿ ಸದಾ ಖುಷಿ, ಸಂಪತ್ತು ತುಂಬಿರಲು ಹೀಗೆ ಮಾಡಿ

By Suvarna NewsFirst Published Jan 5, 2022, 12:28 PM IST
Highlights

ಮನೆ ಚಿಕ್ಕದಾಗಿದ್ರೂ ಮನಸ್ಸು ದೊಡ್ಡದಾಗಿರ್ಬೇಕು ಎನ್ನುತ್ತಾರೆ. ಮನೆ ಹೇಗೆ ಇರಲಿ, ಮನಃಶಾಂತಿ ಬಹಳ ಮುಖ್ಯ. ಹೊಸ ಮನೆಯಲ್ಲಿ ನೆಮ್ಮದಿ ಬಯಸುವವರು ವಾಸ್ತುಶಾಸ್ತ್ರದ ಬಗ್ಗೆ ಗಮನ ನೀಡಬೇಕು. ಇಲ್ಲವಾದ್ರೆ ಇಷ್ಟವಾದ ಮನೆಯಲ್ಲಿ ಕಷ್ಟದ ಜೀವನ ನಡೆಸ್ಬೇಕಾಗುತ್ತೆ.
 

ಸ್ವಂತ ಸೂರು ಪ್ರತಿಯೊಬ್ಬನ ಕನಸು. ಜೀವನ ಪರ್ಯಂತ ಹಗಲಿರುಳು ದುಡಿದು,ಹಣ ಸಂಪಾದನೆ ಮಾಡಿ ಅದನ್ನು ಮನೆ (Home) ನಿರ್ಮಾಣಕ್ಕೆ ಹಾಕಿರ್ತಾನೆ. ಸುಂದರ ಮನೆಯೊಂದು ಆತನ ಬೆವರಿನಿಂದ ತಲೆ ಎತ್ತಿರುತ್ತದೆ. ಸ್ವಂತ ಮನೆಗೆ ಹೋಗುವ ಸಂಭ್ರಮವನ್ನು ವರ್ಣಿಸುವ ಅಗತ್ಯವಿಲ್ಲ. ಕನಸು ನನಸಾದ ಖುಷಿಯಲ್ಲಿರುವಾಗ್ಲೇ ಕೆಲವೊಂದು ಅನಾಹುತಗಳು ಸಂಭವಿಸಿರುತ್ತವೆ. ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬ ಆಸ್ಪತ್ರೆ ಸೇರುತ್ತಾನೆ,ಹಳೆ ಮನೆಯಲ್ಲಿದ್ದ ಖುಷಿ ಇಲ್ಲಿ ಕಾಣುವುದಿಲ್ಲ. ಹೊಸ ಮನೆ ಖರೀದಿಸಿದ್ದು ನಿಜ. ಆದ್ರೆ ಬಾಡಿಗೆ ಮನೆಯಲ್ಲಿದ್ದ ಖುಷಿ,ಸಂತೋಷ ಇಲ್ಲಿ ಮಾಯವಾಗಿದೆ,ಆ ಆರ್ಥಿಕ ಏಳ್ಗೆ ಇಲ್ಲ,ಸದಾ ಕಾಡುವ ಅನಾರೋಗ್ಯ, ಹೀಗೆ ಆಗಾಗ ಬರುವ ಸಮಸ್ಯೆ ನೆಮ್ಮದಿ ನೀಡುವುದಿಲ್ಲ. ಇದಕ್ಕೆ ಕಾರಣ ನೀವು ಖರೀದಿಸಿದ ಮನೆಯ ವಾಸ್ತು (Vastu)ವಾಗಿರಬಹುದು. 
|
ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯ ರಚನೆ ಅಥವಾ ಅದರ ಸುತ್ತಲಿನ ಪರಿಸರ(Environment)ವು ನಮ್ಮ ಜೀವನದಲ್ಲಿ ಧನಾತ್ಮಕ (Positive) ಮತ್ತು ನಕಾರಾತ್ಮಕ ಶಕ್ತಿ (Negative Energy) ಹರಿವಿಗೆ ಕಾರಣವಾಗುತ್ತದೆ. ನಮ್ಮ ಜೀವನದಲ್ಲಿ ಸಮೃದ್ಧಿ, ಬೆಳವಣಿಗೆ ಮತ್ತು ಸಂತೋಷ ಇರಬೇಕೆಂದ್ರೆ ಸಕಾರಾತ್ಮಕ  ಶಕ್ತಿಯ ಅವಶ್ಯಕತೆಯಿದೆ. ಸಕಾರಾತ್ಮಕ ಶಕ್ತಿ ಮನೆಯ ವಾಸ್ತು,ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಹೊಸ ವರ್ಷದಲ್ಲಿ ಮನೆ ಖರೀದಿಸುವ ಯೋಚನೆಯಲ್ಲಿದ್ದರೆ ಈ ವಾಸ್ತು ಸಲಹೆಗಳತ್ತ ಗಮನ ಹರಿಸಲೇ ಬೇಕು. ವಾಸ್ತು ಪ್ರಕಾರ ಮನೆ ಖರೀದಿಸದೆ ಹೋದ್ರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹೊಸ ಮನೆ ಖರೀದಿ ಮಾಡುವ ಮುನ್ನ ಅನೇಕ ವಿಷ್ಯಗಳನ್ನು ತಿಳಿದಿರಬೇಕು.

ಮನೆಯ ಮೂಲೆ : ಪ್ಲಾಟ್ ಖರೀದಿಸಲು ಅಥವಾ ಮನೆ ಖರೀದಿಸುವ ಪ್ಲಾನ್ ಮಾಡಿದ್ದರೆ  ಮನೆಯ ಎಲ್ಲಾ ನಾಲ್ಕು ಮೂಲೆಗಳ ಬಗ್ಗೆ ಗಮನ ಹರಿಸಿ. ಮನೆಯ ನಾಲ್ಕು ಮೂಲೆಗಳು ಸಮಾನವಾಗಿರುವಂತೆ ನೋಡಿಕೊಳ್ಳಿ.ಯಾವುದೇ ಮೂಲೆ ಕತ್ತರಿಸಿರಬಾರದು. ವಾಸ್ತು ಪ್ರಕಾರ ಮನೆ ಅಥವಾ ನಿವೇಶನದ ಆಕಾರ ಚೌಕಾಕಾರ ಅಥವಾ ಆಯತಾಕಾರವಾಗಿರಬೇಕು. ಅಂತಹ ಭೂಮಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮನೆಯ ಬೆಳಕು : ಮನೆಯನ್ನು ತೆಗೆದುಕೊಳ್ಳುವ ಮೊದಲು, ನೀವು ತೆಗೆದುಕೊಳ್ಳುವ ಮನೆಯಲ್ಲಿ ಸಾಕಷ್ಟು ಬೆಳಕಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸೂರ್ಯನ ಬೆಳಕು ಮನೆಯೊಳಗೆ ಪ್ರವೇಶಿಸುವುದು ಬಹಳ ಅಗತ್ಯ. ವಾಸ್ತು ಪ್ರಕಾರ, ಸೂರ್ಯನ ಬೆಳಕು ಮನೆಯೊಳಗೆ ಬೀಳುವುದು ಶುಭಕರ. ಸದಾ ಕತ್ತಲಿರುವ ಹಾಗೂ ಸೂಕ್ತ ಗಾಳಿ ಬರದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಹೊಂಡ, ಮುಳ್ಳು : ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳಿನ ಮರಗಳು ಬೆಳೆದಿರುವ ಅಥವಾ ನೆಲದಲ್ಲಿ ಹೊಂಡ ಇರುವ ಜಾಗದಲ್ಲಿ ನಿಮ್ಮ ಮನೆಯನ್ನು ಕಟ್ಟಬಾರದು. ಒಂದು ವೇಳೆ ಆ ಸ್ಥಳದಲ್ಲಿ ನೀವು ಮನೆಯ ನಿರ್ಮಾಣ ಮಾಡಿದರೆ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು.

Astrology And Personality Traits: ಈ ರಾಶಿಯವರು ಸಂಗಾತಿಗೆಂದೂ ಮೋಸ ಮಾಡಲ್ಲ!

ದಿಕ್ಕಿಗೆ ಮಹತ್ವ ನೀಡಿ : ವಾಸ್ತು ಶಾಸ್ತ್ರದ ಪ್ರಕಾರ, ನೈಋತ್ಯ ದಿಕ್ಕಿನ ಮನೆಗಳಿರದಂತೆ ನೋಡಿಕೊಳ್ಳಿ. ಮನೆಯ ಮೆಟ್ಟಿಲು ಯಾವಾಗಲೂ  ದಕ್ಷಿಣ-ಪೂರ್ವ ದಿಕ್ಕಿನಲ್ಲಿರಲಿ. ಈಶಾನ್ಯ ದಿಕ್ಕಿನಲ್ಲಿರಬಾರದು. ಅಡುಗೆ ಮನೆಯು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಈಶಾನ್ಯ ದಿಕ್ಕಿನಲ್ಲಿ ಇರಬಾರದು. ಮಾಸ್ಟರ್ ಬೆಡ್ ರೂಮ್ ನೈಋತ್ಯ ದಿಕ್ಕಿನಲ್ಲಿರಬೇಕು. ಇದು ಆಗ್ನೇಯ ದಿಕ್ಕಿನಲ್ಲಿ ಇರಬಾರದು. ಶೌಚಾಲಯವು ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಈಶಾನ್ಯ ದಿಕ್ಕಿನಲ್ಲಿ ಇರಬಾರದು.

2022 ಈ ರಾಶಿಯ ಹುಡುಗಿಯರಿಗೆ ಸಖತ್ Lucky Year

ಮನೆ ಮುಂದಿನ ಪರಿಸರ : ವಾಸ್ತು ಶಾಸ್ತ್ರದ ಪ್ರಕಾರ, ಮನೆ ಖರೀದಿಸುವಾಗ ಮನೆಯ ಮುಂದೆ ಯಾವುದೇ ಮರ, ಕಂಬ, ದೇವಸ್ಥಾನ ಇರದಂತೆ ನೋಡಿಕೊಳ್ಳಿ.ಈ ವಸ್ತುಗಳು ವಾಸ್ತು ದೋಷಗಳನ್ನು ಸೃಷ್ಟಿಸುತ್ತವೆ. ಹಾಗೆ ನೈಋತ್ಯ ದಿಕ್ಕಿನಲ್ಲಿ ಬಾವಿ,ಕೊಳ ಇರದಂತೆ ನೋಡಿಕೊಳ್ಳಿ.
 

click me!