Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

By Suvarna NewsFirst Published Jan 3, 2022, 12:45 PM IST
Highlights

2022ರ ಹೊಸ ವರ್ಷ ಎಲ್ಲರಿಗೂ ಸುಖ- ಸಮೃದ್ಧಿ ತರಬೇಕೆಂಬ ಆಶಯ ಇರುತ್ತದೆ. ಆದರೆ, ಇದಕ್ಕೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಅಲ್ಪ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು, ನಿಮಗೆ ಯಶಸ್ಸು, ಧನಲಾಭ ಸುಲಭವಾಗಿ ಆಗುತ್ತದೆ. ಹಾಗಾದರೆ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ...

2021ರ ವರ್ಷ ಮುಕ್ತಾಯಗೊಂಡಿದೆ. ಕೊರೋನಾ (Corona) ಮಹಾಮಾರಿಯಿಂದ ರಾಜ್ಯ (State) ಮಾತ್ರವಲ್ಲದೆ ಇಡೀ ಪ್ರಪಂಚವೇ (World)  ನಲುಗಿಹೋಗಿದೆ. ಇದೀಗ ಆ ವರ್ಷ ಮುಗಿದಿದೆ. ಜನರಿಗೂ ಹೊಸ ವರ್ಷದಲ್ಲಿ ಹೊಸ ಅನುಭವ ಸಿಗಬೇಕು. ಮಾಡಿದ ಕೆಲಸ ಕಾರ್ಯಗಳೂ ಕೈಗೂಡಬೇಕು ಎಂಬ ಕನಸುಗಳು ಇರುವುದು ಸಹಜ. ವಾಸ್ತು ಶಾಸ್ತ್ರದ ಅನುಸಾರ, 2022ರ ಈ ಹೊಸ ವರ್ಷದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಮನೆಯಲ್ಲಿ ಧನಲಾಭದ (Money Profit)  ಜೊತೆಗೆ ಸುಖ, ಸಮೃದ್ಧಿ (Prosperity), ಸಂತೋಷ (Happiness) ನೆಲೆಸುತ್ತದೆ. ಹಾಗಾದರೆ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ... 

ನವಿಲು ಗರಿ (Peacock feather)
ಹಿಂದೂ ಧರ್ಮದಲ್ಲಿ (Hindu Religion) ನವಿಲು ಗರಿಗೆ ವಿಶೇಷ ಹಾಗೂ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ನಮ್ಮ ನೆಚ್ಚಿನ ಕೆಲವು ದೇವರಲ್ಲಿ ನಾವು ನವಿಲು ಗರಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಕಾಣಬಹುದಾಗಿದೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ (Lord Krishna), ವಿಘ್ನ ನಿವಾರಕ ಗಣೇಶ (Lord Ganesh), ಮಾತೇ ಸರಸ್ವತಿ (Lord Saraswati), ಲಕ್ಷ್ಮೀ (Lord Laxmi), ಕಾರ್ತಿಕೇಯ (Lord Karthikeya), ಇಂದ್ರ (Lord Indra) ಎಲ್ಲರೂ ನವಿಲು ಗರಿಗಳನ್ನು ಹೊಂದಿದ್ದಾರೆ. ನವಿಲು ಗರಿ ಸುಖ- ಸಮೃದ್ಧಿಯ ಪ್ರತೀಕವಾಗಿದ್ದು, ಇದನ್ನು ಮನೆಗೆ ಅಶುಭ ಸಂಗತಿಗಳು ತಪ್ಪಲಿದೆ. ಮನೆಯಲ್ಲಿನ ದೇವರ ಕೋಣೆ ಅಥವಾ ಗೋಡೆಯ (Wall) ಮೇಲೆ ನವಿಲು ಗರಿಗಳನ್ನು ಅಂಟಿಸಬಹುದು.

ಗೋಮತಿ ಚಕ್ರ (Gomati Chakra)
ವೈದಿಕ ಜ್ಯೋತಿಷ್ಯದಲ್ಲಿ ಗೋಮತಿ ಚಕ್ರಕ್ಕೆ ಬಹಳ ಮಹತ್ವವಿದ್ದು (Imortance), ಇದನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಈ ಕಲ್ಲುನ್ನು ಮನೆಯಲ್ಲಿಟ್ಟುಕೊಂಡರೆ ಲಕ್ಷ್ಮೀ ಮಾತೆ ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ 11 ಗೋಮಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ (Yellow cloth) ಸುತ್ತಿ ಸುರಕ್ಷಿತವಾಗಿಟ್ಟರೆ ಇಡೀ ವರ್ಷ ಮನೆ ಸುರಕ್ಷಿತ ಮತ್ತು ಸಮೃದ್ಧವಾಗಿರುತ್ತದೆ. 

ಮನಿ ಪ್ಲಾಂಟ್ (Money Plant)
ಹಣಕಾಸಿನ ತೊಂದರೆಗಳನ್ನು (Problem) ನಿವಾರಿಸಲು ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಟ್ಟರೆ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಇದಕ್ಕೆ ಉತ್ತಮ ಪರಿಹಾರವಾಗಿದೆ. ಮೊನಿ ಪ್ಲಾಂಟ್ ಲಕ್ಷ್ಮೀ ದೇವಿಯ (Goddess Lakshmi) ಒಂದು ರೂಪವೆಂಬ ನಂಬಿಕೆ ಇದೆ. ಆದರೆ, ಈ ಗಿಡವು ನೆಲವನ್ನು ಸ್ಪರ್ಶಿಸಲು ಬಿಡಬಾರದು. ಜೊತೆಗೆ ಅದಕ್ಕೆ ಸದಾ ನೀರು ಹಾಕುತ್ತಿರಬೇಕು. ಕಾರಣ ಅದು ಒಣಗಬಾರದು.

ಕಮಲದ ಮಾಲೆ (Lotus garland)
ಕಮಲದ ಬೀಜಗಳನ್ನು ಕಮಲದ ಮಾಲೆಗಳು ಎಂದು ಕರೆಯಲಾಗುತ್ತದೆ. ಇದನ್ನು ಮನೆಯಲ್ಲಿ (Home) ಇಟ್ಟುಕೊಳ್ಳಬೇಕು. ಇಲ್ಲವೇ ಅದನ್ನು ಧರಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ಮಾತೆಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದು. ಮನೆಯಲ್ಲಿ ಧನ ಸಂಪತ್ತು ಸಹ ವೃದ್ಧಿಸಲಿದೆ. 

ಇದನ್ನು ಓದಿ: Name And Luck: ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಸಖತ್ ಟ್ಯಾಲೆಂಟೆಡ್!

ಲಾಫಿಂಗ್ ಬುದ್ಧ  (Laughing Buddha)
ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿಟ್ಟುಕೊಂಡರೆ ಬಹಳ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಸಂತೋಷ, ಸಂಪತ್ತು ಮತ್ತು ಪ್ರಗತಿಯ (Progress) ಸಂಕೇತವೆಂದು ಪರಿಗಣಿಸಲಾಗಿದೆ. ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಮೃದ್ಧಿ ಮತ್ತು ಯಶಸ್ಸು ಸಿಗಲಿದೆ.

ಸ್ವಸ್ತಿಕ್ (Swastik)
ಪುರಾಣಗಳಲ್ಲಿ ಸ್ವಸ್ತಿಕ್ ಅನ್ನು ಲಕ್ಷ್ಮಿ ಮತ್ತು ಗಣೇಶನ ತಾಯಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅದನ್ನು ಹೊಂದಿರುವುದರಿಂದ ನಕಾರಾತ್ಮಕ (Negativity) ಶಕ್ತಿಯು ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯ ಗೋಡೆಯ ಮೇಲೆ ಈ ಚಿಹ್ನೆಯನ್ನು ಹೊಂದಬಹುದಾಗಿದ್ದು, ಕುಂಕಮದಲ್ಲಿ ಬರೆದಿಟ್ಟರೂ ಒಳ್ಳೆಯದು..

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಶಂಖ (Conch)
ಮನೆಯಲ್ಲಿ ದಕ್ಷಿಣಾವರ್ತಿ ಶಂಖ ಹಾಗೂ ಮುತ್ತಿನ ಶಂಖವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದನ್ನು ಮನೆಯ ಬೀರುವಿನಲ್ಲಿ ಅಥವಾ ಪೆಟ್ಟಿಗೆಯೊಂದರಲ್ಲಿ (Box) ಇಟ್ಟುಕೊಂಡರೆ ಸುಖ-ಸಮೃದ್ಧಿಯು ನೆಲೆಸುತ್ತದೆ. 

click me!