Vastu Tips : ಖಾಲಿಯಿದೆ ಅಂತಾ ಡೈನಿಂಗ್ ಟೇಬಲ್ ತುಂಬಿಸಿಡ್ಬೇಡಿ

By Suvarna News  |  First Published Jan 18, 2023, 5:28 PM IST

ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ವಾಸ್ತುವಿಗೆ ಒಳಪಟ್ಟಿರುತ್ತದೆ. ಮನೆ ಸೌಂದರ್ಯ ಹೆಚ್ಚಿಸುವ ಹಾಗೂ ನಮಗೆ ಅನುಕೂಲಕರವಾಗಿರುವ ಡೈನಿಂಗ್ ಟೇಬಲ್ ಕೂಡ ವಾಸ್ತು ದೋಷವನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.
 


ಸೋಫಾ, ಖುರ್ಚಿ, ಡೈನಿಂಗ್ ಟೇಬಲ್ ಮುಂತಾದವುಗಳು ಮನೆಯ ಅಂದವನ್ನು ಇಮ್ಮಡಿಗೊಳಿಸುವ ವಸ್ತುಗಳಾಗಿವೆ. ಇದು ಐಷಾರಾಮಿ ವಸ್ತು ಎನ್ನಿಸಿಕೊಂಡ್ರೂ ಈಗಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲಿರುತ್ತದೆ. ಡೈನಿಂಗ್ ಟೇಬಲ್ ಇಲ್ಲದ ಮನೆ ಸಿಗೋದು ಬಹಳ ಅಪರೂಪ ಎನ್ನಬಹುದು. ನೆಲಕ್ಕೆ ಕುಳಿತು ಊಟ ಮಾಡಲು ಸಾಧ್ಯವಿಲ್ಲ ಎನ್ನುವವರು ಅವಶ್ಯಕವಾಗಿ ಡೈನಿಂಗ್ ಟೇಬಲ್ ತರ್ತಾರೆ.  

ಮನೆ (House) ಯವರನ್ನೆಲ್ಲ ಒಂದು ಮಾಡುವ ವಸ್ತು ಅಂದ್ರೆ ಅದು ಡೈನಿಂಗ್ (Dining) ಟೇಬಲ್ ಎನ್ನಬಹುದು. ಕೆಲಸ, ಓದು ಹೀಗೆ ಬೇರೆ ಬೇರೆ ಕಾರಣಕ್ಕೆ ಮನೆಯಿಂದ ಹೊರಗಿರುವ ಜನರು ಊಟ (Lunch) ದ ಸಮಯದಲ್ಲಿ ಒಟ್ಟಿಗೆ ಸೇರ್ತಾರೆ. ಡೈನಿಂಗ್ ಟೇಬಲ್ ಸುತ್ತ ಕುಳಿತು ಸಂತೋಷ (Happiness), ನೋವನ್ನು ಹಂಚಿಕೊಳ್ತ ಊಟ ಮಾಡುವ ಮಜವೇ ಬೇರೆ. ಮನೆಯಲ್ಲಿ ಡೈನಿಂಗ್ ಟೇಬಲ್ ಇದೆ ಅಂದ್ರೆ ಅದ್ರ ಮೇಲೆ ಒಂದಿಷ್ಟು ವಸ್ತುಗಳು ಇದ್ದೇ ಇರುತ್ವೆ. ಎಷ್ಟು ಚೊಕ್ಕಟವಾಗಿ ಮನೆ ಇಡ್ತೇನೆ ಎನ್ನುವವರು ಕೂಡ ಅಪ್ಪಿತಪ್ಪಿಯಾದ್ರೂ ಡೈನಿಂಗ್ ಟೇಬಲ್ ಮೇಲೆ ಕೆಲ ವಸ್ತುವನ್ನು ಇಟ್ಟಿರುತ್ತಾರೆ. ಮತ್ತೆ ಕೆಲವರ ಮನೆಯಲ್ಲಿ ಡೈನಿಂಗ್ ಟೇಬಲ್ ಊಟಕ್ಕಿಂತ ವಸ್ತುಗಳನ್ನು ಇಡಲು ಹೆಚ್ಚು ಬಳಕೆಯಾಗ್ತಿರುತ್ತದೆ. ಮನೆಯಲ್ಲಿರು ಈ ಡೈನಿಂಗ್ ಟೇಬಲ್ ಬರೀ ಊಟ, ವಸ್ತುಗಳನ್ನು ಇಡಲು ಮಾತ್ರ ಬಳಕೆಯಾಗುವುದಿಲ್ಲ. ಅದು ನಮ್ಮ ಸಂತೋಷ, ಆರೋಗ್ಯವನ್ನು ಹೆಚ್ಚಿಸುವ ಕೆಲಸ ಕೂಡ ಮಾಡುತ್ತದೆ. ಮನೆಯಲ್ಲಿರುವ ಡೈನಿಂಗ್ ಟೇಬಲ್ ನಿಂದ ನಮಗೆ ಸಂತೋಷ ಪ್ರಾಪ್ತಿಯಾಗ್ಬೇಕೆಂದ್ರೆ ನಾವು ವಾಸ್ತು ಶಾಸ್ತ್ರದ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ.  ವಾಸ್ತು ಶಾಸ್ತ್ರದ ಪ್ರಕಾರ, ಡೈನಿಂಗ್ ಟೇಬಲನ್ನು ಅದಕ್ಕೆ ಸೂಕ್ತವಾಗುವ ದಿಕ್ಕಿನಲ್ಲಿ ಇಡಬೇಕು. ಹಾಗೆಯೇ ಅವುಗಳ ಮೇಲೆ ಎಲ್ಲ ವಸ್ತುಗಳನ್ನು ಇಡಬಾರದು.  

ಪತ್ನಿಗೆ ಮೋಸ ಮಾಡಿ ಬೇರೆಯವರೊಟ್ಟಿಗೆ ಸಂಬಂಧ ಬೆಳೆಸೋರು ಮುಂದಿನ ಜನ್ಮದಲ್ಲಿ ಏನಾಗ್ತಾರೆ?

Tap to resize

Latest Videos

undefined

ಈ ದಿಕ್ಕಿನಲ್ಲಿರಲಿ ಡೈನಿಂಗ್ ಟೇಬಲ್ : ಮನೆಯಲ್ಲಿ ಡೈನಿಂಗ್ ಟೇಬಲ್ ಇದೆ ಎಂದಾದ್ರೆ ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಒಗ್ಗಟ್ಟು ಮೂಡುತ್ತದೆ. ಚಿಕ್ಕ ಪುಟ್ಟ ಮನಸ್ತಾಪಗಳು ದೂರವಾಗುತ್ತದೆ. ಡೈನಿಂಗ್ ಟೇಬಲ್ ಅನ್ನು ಮನೆಯ ಪಶ್ಚಿಮ ದಿಕ್ಕಿಗೆ ಹಾಕಬೇಡಿ. ಇದ್ರಿಂದ ವಿನಾಕಾರಣ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇಲ್ಲಿ ಡೈನಿಂಗ್ ಟೇಬಲ್ ಇಡಬೇಡಿ : ಮಲಗುವ ಕೋಣೆಯಲ್ಲಿ ಊಟ ಮಾಡುವುದು ನಿಷಿದ್ಧ. ಹಾಗೆಯೇ ಬೆಡ್ ರೂಮಿನಲ್ಲಿ ಅಥವಾ ಬೆಡ್ ರೂಮಿಗೆ ಹತ್ತಿರವಾಗಿ ಡೈನಿಂಗ್ ಟೇಬಲ್ ಹಾಕಬಾರದು. 

ಮೂಲೆಯಲ್ಲಿಡಬೇಡಿ : ಡೈನಿಂಗ್ ಟೇಬಲ್ ಅನ್ನು ಮನೆಯ ಯಾವುದಾದರೂ ಮೂಲೆಯಲ್ಲಿ ಇಡಬಾರದು. ಅದು ಯಾವಾಗ್ಲೂ ಮಧ್ಯಭಾಗದಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಡೈನಿಂಗ್ ಟೇಬಲ್ ಆಕಾರ ಹೀಗಿರಲಿ : ಯಾವಾಗಲೂ ಗೋಲಾಕಾರದ ಅಥವಾ ಅಂಡಾಕಾರದ ಡೈನಿಂಗ್ ಟೇಬಲ್ ಅನ್ನೇ ಖರೀದಿಸಬೇಕು. 

ಡೈನಿಂಗ್ ಟೇಬಲ್ ಮೇಲೆ ಈ ವಸ್ತು ಇಡಿ : ಡೈನಿಂಗ್ ಟೇಬಲ್ ಮೇಲೆ ಯಾವಾಗಲೂ ಸ್ವಚ್ಛವಾದ ಪಾತ್ರೆಗಳನ್ನೇ ಇಡಬೇಕು. ಒಡೆದ ಅಥವಾ ಹಾಳಾದ ಪಾತ್ರೆಗಳನ್ನು ಇಡಬಾರದು.

ಡೈನಿಂಗ್ ಟೇಬಲ್ ಮೇಲೆ ಇದನ್ನಿಡಬೇಡಿ : ಡೈನಿಂಗ್ ಟೇಬಲ್ ಮೇಲೆ ಆರ್ಟಿಫಿಶಿಯಲ್ ಹೂವುಗಳ ಬದಲು ನೈಜ ಹೂವುಗಳನ್ನು ಇಡಬೇಕು. ನೈಜವಾದ ಹೂವುಗಳು ಒಣಗುವ ಮೊದಲೇ ಅದನ್ನು ತೆಗೆದು ಬೇರೆ ಹೂವನ್ನು ಇಡಬೇಕು.

ಹಣ್ಣಿಡುವಾಗ ಈ ಪಾತ್ರೆ ಬಳಸಿ : ಡೈನಿಂಗ್ ಟೇಬಲ್ ಮೇಲೆ ಹಣ್ಣುಗಳನ್ನು ಇಡುವುದು ಸರ್ವೆ ಸಾಮಾನ್ಯ. ಹೀಗೆ ಹಣ್ಣುಗಳನ್ನು ಇಡುವವರು ಗೋಲಾಕಾರದ ಪಾತ್ರೆಯಲ್ಲೇ ಹಣ್ಣುಗಳನ್ನು ಇಡಿ. 

ಡೈನಿಂಗ್ ರೂಮಿನಲ್ಲಿ ಈ ವಸ್ತು ಬೇಡ : ಕೆಲವೊಂದು ಮನೆಯಲ್ಲಿ ಡೈನಿಂಗ್ ರೂಮ್ ಬೇರೆಯಾಗಿಯೇ ಇರುತ್ತದೆ. ಡೈನಿಂಗ್ ರೂಮ್ ಸಪರೇಟ್ ಆಗಿ ಇದ್ದಾಗ ಆ ರೂಮಿನಲ್ಲಿ ಟಿವಿ ಅಥವಾ ಗಡಿಯಾರವನ್ನು ಹಾಕಬೇಡಿ. 

ಇದು ಬೆಸ್ಟ್ : ನಿಮ್ಮ ಮನೆಯಲ್ಲಿ ಸಾಧ್ಯವಾದಷ್ಟು ಮರದಿಂದ ಮಾಡಿದ ಡೈನಿಂಗ್ ಟೇಬಲ್ ಬಳಸಿ. ಹಾಗೊಮ್ಮೆ ನೀವು ಗ್ಲಾಸ್ ನ ಟೇಬಲ್ ಬಳಸ್ತೀರಿ ಎಂದಾದ್ರೆ ಅದರ ಮೇಲೆ ತಾಮ್ರದ ಪಾತ್ರೆ ಅಥವಾ ಜಗ್ ಇಡಿ. ಮರದ ಡೈನಿಂಗ್ ಟೇಬಲ್ ಮೇಲೆ ಕೂಡ ತಾಮ್ರದ ಪಾತ್ರೆಯನ್ನು ಇಡುವುದು ಒಳ್ಳೆಯದು.

ಶನಿಯ ಕ್ರೂರದೃಷ್ಟಿಗೆ ತುತ್ತಾಗದಂತೆ ಯಾವ ಹರಳು ಧರಿಸಬೇಕು? ಜನ್ಮರಾಶಿಗೆ ತಕ್ಕಂತೆ ನೋಡಿ

ಅನವಶ್ಯಕ ವಸ್ತು ಬೇಡ : ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಡೈನಿಂಗ್ ಟೇಬಲ್ ಮೇಲೆ ಇಡಬೇಡಿ. ಅತೀ ಅವಶ್ಯಕವೆನಿಸುವ ವಸ್ತುಗಳನ್ನು ಮಾತ್ರ ಟೇಬಲ್ ಮೇಲಿಡಿ. ಡೈನಿಂಗ್ ಟೇಬಲ್ ತುಂಬಿದ್ರೆ ಒಳ್ಳೆಯದಲ್ಲ. 
 

click me!