Idol Vastu : ದೇವರ ಮನೆಯಲ್ಲಿ ಈ ಮೂರ್ತಿ ಇಟ್ರೆ ನಷ್ಟ ನಿಮಗೆ

By Suvarna News  |  First Published Jan 17, 2023, 2:36 PM IST

ಕಷ್ಟ ಬಂದಾಗ ದೇವರನ್ನು ನೆನಪು ಮಾಡಿಕೊಳ್ಳುವ ನಾವು ಪ್ರತಿ ದಿನ ದೇವರ ಪೂಜೆ ಮಾಡ್ತೇವೆ. ದೇವರ ಮನೆಯಲ್ಲಿ ನಾನಾ ದೇವರ ಮೂರ್ತಿಗಳನ್ನು ಇಡ್ತೇವೆ. ಆದ್ರೆ ನಾವಿಟ್ಟ ಮೂರ್ತಿ ಯಾವ ಲೋಹದ್ದು ಎಂಬುದನ್ನು ತಿಳಿದು ಪೂಜೆ ಮಾಡಿದ್ರೆ ಒಳ್ಳೆಯದು.
 


ಭಾರತದ ಎಲ್ಲ ಹಿಂದೂಗಳ ಮನೆಯಲ್ಲಿ ದೇವರ ಕೋಣೆಯೊಂದು ಇರ್ಲೇಬೇಕು. ದೇವರಿಗೆ ಪ್ರತ್ಯೇಕ ರೂಮಿಲ್ಲವೆಂದ್ರೂ ದೇವರ ಮೂರ್ತಿ ಮಾತ್ರ ಇದ್ದೇ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆಯಲ್ಲಿ ಎಲ್ಲರು ಭಕ್ತಿಯಿಂದ ಮಾಡ್ತಾರೆ. ತಮ್ಮಿಷ್ಟದ ದೇವರನ್ನು ಪೀಠದಲ್ಲಿಟ್ಟು ಪೂಜೆ ಮಾಡ್ತಾರೆ. ದೇವರ ಮೂರ್ತಿ ಆಯ್ಕೆ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡಿರ್ತೇವೆ. ಮಾರುಕಟ್ಟೆಯಲ್ಲಿ ಸಿಕ್ಕ ಮೂರ್ತಿಯನ್ನು ತಂದು ಪೂಜೆ ಮಾಡ್ತೇವೆ. ಆದ್ರೆ ಆ ಮೂರ್ತಿ ಯಾವ ಲೋಹದಿಂದ ತಯಾರಾಗಿದೆ ಎಂಬುದನ್ನು ಹೆಚ್ಚಾಗಿ ಪರೀಕ್ಷೆ ಮಾಡಲು ಹೋಗೋದಿಲ್ಲ. 

ಮಾರುಕಟ್ಟೆ (Market) ಯಲ್ಲಿ ದೇವರ ಪೀಠದಲ್ಲಿಟ್ಟು ಪೂಜೆ ಮಾಡುವ ವಿಗ್ರಹ (Idol) ಹಾಗೂ ಶೋ ಕೇಸ್ ನಲ್ಲಿಡುವ ಮೂರ್ತಿ ಹೀಗೆ ಬೇರೆ ಬೇರೆ ಮೂರ್ತಿಗಳಿರುತ್ತವೆ. ದೇವರ ಮನೆಯಲ್ಲಿ ಮೂರ್ತಿ ಪೂಜೆ ಮಾಡುವ ಮುನ್ನ ಯಾವುದನ್ನ  ಪೂಜೆ ಮಾಡ್ಬೇಕು, ಯಾವುದನ್ನು ಮಾಡಬಾರದು ಎಂಬುದು ನಮಗೆ ತಿಳಿದಿರಬೇಕು. ತಪ್ಪು ವಿಗ್ರಹ ಪೂಜೆ ಮಾಡುವುದ್ರಿಂದ ಪೂಜೆಯ ಫಲ ಸಿಗುವುದಿಲ್ಲ. ಹಾಗೆಯೇ ಜೀವನ (Life) ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಫಲ ನೀಡಿ, ಜೀವನದಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗ್ಬೇಕು ಅಂದ್ರೆ ಸರಿಯಾದ ಮೂರ್ತಿ ಪೂಜೆ ಮಾಡ್ಬೇಕು. ನಾವಿಂದು ದೇವರ ಮನೆಯಲ್ಲಿ ಯಾವ ಮೂರ್ತಿಗಳನ್ನು ಇಡಬೇಕು, ಯಾವುದನ್ನು ಇಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.  

Tap to resize

Latest Videos

undefined

ದೇವರ ಮನೆಯಲ್ಲಿ ಈ ಲೋಹ (Metal) ದ ಮೂರ್ತಿ ಇಟ್ಟು ಪೂಜೆ ಮಾಡ್ಬೇಡಿ : ಕಬ್ಬಿಣ (Iron), ಅಲ್ಯೂಮಿನಿಯಂ, ಉಕ್ಕಿನ ದೇವರ ಮನೆಯಲ್ಲಿ ಇಡಬಾರದು. ಅಂತಹ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದು ಅಶುದ್ಧವೆಂದು ಪರಿಗಣಿಸಲಾಗಿದೆ. ಈ ಲೋಹದಿಂದ ಮಾಡಿದ ಮೂರ್ತಿಗಳನ್ನು ಪೂಜಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.  

ದೇವರ ಮನೆಯಲ್ಲಿ ಈ ವಿಗ್ರಹವೂ ಬೇಡ : ಯಾವ ಲೋಹ ಮಾತ್ರವಲ್ಲ ಅದ್ರ ಗಾತ್ರದ ಬಗ್ಗೆಯೂ ನೀವು ಗಮನ ನೀಡಬೇಕಾಗುತ್ತದೆ. ಮನೆಯ ದೇವಸ್ಥಾನದಲ್ಲಿ ಇಡುವ ವಿಗ್ರಹಗಳು ನಿಗದಿತ ಗಾತ್ರದಲ್ಲಿರಬೇಕು. ಶಾಸ್ತ್ರಗಳ ಪ್ರಕಾರ 9 ಇಂಚು ಎತ್ತರದ ವಿಗ್ರಹಗಳನ್ನು ಪೂಜಾ ಸ್ಥಳದಲ್ಲಿ ಇಡಬಾರದು. ಮೂರ್ತಿಗಳನ್ನು ದೀರ್ಘಕಾಲ ಪೂಜಿಸುವುದರಿಂದ ಪೂಜೆಯ ಪೂರ್ಣ ಫಲವೂ ಸಿಗುವುದಿಲ್ಲ. ಇದಲ್ಲದೇ ವಿಗ್ರಹಗಳ ಶುದ್ಧತೆಯೂ ಉಳಿಯುವುದಿಲ್ಲ. ಶಾಸ್ತ್ರಗಳ ಪ್ರಕಾರ, ಚಿಕ್ಕ ವಿಗ್ರಹಗಳನ್ನು ಯಾವಾಗಲೂ ಮನೆಯಲ್ಲಿ ಇಡಬೇಕು. ಅಂದ್ರೆ 9 ಇಂಚಿಗಿಂತ ಕಡಿಮೆ ಗಾತ್ರದ ವಿಗ್ರಹವನ್ನು ನೀವು ಇಡಬೇಕು. 

Astrology Tips: ದೇವಸ್ಥಾನಕ್ಕೆ ಹೋಗ್ವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ದೇವರ ಮನೆಯಲ್ಲಿ ಇರಲಿ ಇಂಥ ವಿಗ್ರಹ : ದೇವರ ಮನೆಯಲ್ಲಿ ಬೆಳ್ಳಿಯ ವಿಗ್ರಹಗಳನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ ತಾಮ್ರದ ವಿಗ್ರಹ, ಚಿನ್ನದ ವಿಗ್ರಹವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತಾಮ್ರ ಮತ್ತು ಹಿತ್ತಾಳೆಯ ವಿಗ್ರಹಗಳನ್ನು ಇಡುವುದು ಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ವಿಗ್ರಹಗಳನ್ನು ಪೂಜಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ. ಅನುಕೂಲವಿದೆ ಎನ್ನುವವರು ಮನೆಯಲ್ಲಿ ಚಿನ್ನದ ವಿಗ್ರಹಗಳನ್ನು ಪೂಜಿಸಬಹುದು. ಇದ್ರಿಂದ ಮನೆಗೆ ಧನಾತ್ಮಕ ಶಕ್ತಿ ಸದಾ ನೆಲೆಸುತ್ತದೆ  ಎಂದು ನಂಬಲಾಗಿದೆ.

ಬೆಳ್‌ಬೆಳ್ಗೆ ಈ ರೀತಿ ಗೋಸುಂಬೆ ಕಾಣಿಸಿಕೊಂಡ್ರೆ ಹಣ ಕೈಗೆ ಬರುತ್ತಂತ ಅರ್ಥ!

ಶನಿ ಪೂಜೆ ವೇಳೆ ಬಳಸ್ಬೇಡಿ ಈ ಪಾತ್ರೆ : ಪೂಜೆ ಮಾಡುವ ಮುನ್ನ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದ್ರಲ್ಲೂ ಶನಿ ಪೂಜೆ ವೇಳೆ ಹೆಚ್ಚು ಜಾಗೃತಿ ವಹಿಸಬೇಕಾಗುತ್ತದೆ. ಶನಿ ಪೂಜೆ ಮಾಡುವವರಿದ್ದರೆ ತಾಮ್ರದ ಪಾತ್ರೆಗಳನ್ನು ಬಳಸಬಾರದು. ತಾಮ್ರವನ್ನು ಸೂರ್ಯನ ಲೋಹವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿ ಪರಸ್ಪರ ಶತ್ರುಗಳು. ಹಾಗಾಗಿ ಶನಿ ದೇವರ ಪೂಜೆಯಲ್ಲಿ ತಾಮ್ರದ ಪಾತ್ರೆ ಬದಲು ನೀವು ಕಬ್ಬಿಣದ ಪಾತ್ರೆಗಳನ್ನು ಬಳಸಬಹುದು.
 

click me!