ಮದುವೆ ಮಂಟಪ ಹಾಗೂ ಮದುವೆ ಹಾಲ್‌ಗಳೂ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ವಿವಾಹಿತ ಜೋಡಿ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು..
ನೀವು ವಿವಾಹ ಸಮಾರಂಭಕ್ಕೆ ವಧುವರರನ್ನು ನಿಶ್ಚಿಯಿಸಿರಬಹುದು. ಅತಿಥಿಗಳ ಲಿಸ್ಟ್ ಫೈನಲ್ ಆಗಿರಬಹುದು. ಬಟ್ಟೆಬರೆ, ಆಭರಣಗಳ ಖರೀದಿಯೂ ಮುಗಿದಿರಬಹುದು. ಇಷ್ಟೆಲ್ಲ ಮಾಡಿದವರು ನೀವು ವಿವಾಹ ಮಾಡಲು ಬುಕ್ ಮಾಡಿದ ಚೌಲ್ಟ್ರಿ ವಾಸ್ತು ಪ್ರಕಾರವಾಗಿ ಇದೆಯೋ ಇಲ್ಲವೋ ಎಂದು ನೋಡದಿದ್ದರೆ ದೊಡ್ಡ ಪ್ರಮಾದವಾದೀತು.
ಮೊದಲೆಲ್ಲ ವಿವಾಹವೆಂದರೆ ಮನೆಯಲ್ಲಿಯೇ ನಡೆಯುತ್ತಿತ್ತು. ತಿಂಗಳ ತಯಾರಿ ನಡೆಯುತ್ತಿತ್ತು. ಆದರೆ ಈಗ ಮದುವೆ ಮಂಟಪಗಳಲ್ಲಿ ಮದುವೆಯನ್ನು ಆಚರಿಸುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಸಾಕಷ್ಟು ಹಣಕಾಸಿನ ಅಗತ್ಯವಿದ್ದರೂ, ಜನರು ಹೆದರದೆ ಮದುವೆಗಾಗಿ ಅದ್ದೂರಿಯಾಗಿ ಖರ್ಚು ಮಾಡುತ್ತಿದ್ದಾರೆ. ನಾವು ನಮ್ಮ ಸುತ್ತಲೂ ಅನೇಕ ಮದುವೆ ಹಾಲ್‌ಗಳನ್ನು ಕಾಣಬಹುದು. ಕೆಲವು ಪಾರ್ಟಿ/ವಿವಾಹ ಹಾಲ್‌ಗಳು ಉತ್ತಮವಾಗಿ ಅಭಿವೃದ್ಧಿ ಹೊಂದುವುದಿಲ್ಲ ಮತ್ತು ಕೆಲವು ಸರಳವಾಗಿ ದೊಡ್ಡ ವ್ಯಾಪಾರವನ್ನು ಮಾಡುವುದನ್ನು ನಾವು ನೋಡುತ್ತೇವೆ.
undefined
ಮಾನಸಿಕ ಶಕ್ತಿ ಕುಗ್ಗಿದೆಯೇ? ಪಂಚಧಾತು ಧರಿಸಿ ನೋಡಿ
ಮದುವೆ ಮಂಟಪದ ಸುಗಮ ಕೆಲಸಕ್ಕಾಗಿ ಉತ್ತಮ ಮತ್ತು ಪ್ರಗತಿಪರ ಭವಿಷ್ಯಕ್ಕಾಗಿ ವಾಸ್ತು ತತ್ವಗಳೊಂದಿಗೆ (Vastu rules) ಈ ಸ್ಥಳವನ್ನು ನಿರ್ಮಿಸಬೇಕು. ಆಗ ಹೆಚ್ಚು ಹೆಚ್ಚು ಗ್ರಾಹಕರು ಮದುವೆ ಹಾಲ್‌ಗೆ ಬರುತ್ತಾರೆ. ಉತ್ತಮ ವ್ಯಾಪಾರ, ಹೆಚ್ಚಿನ ಲಾಭ ಮತ್ತು ಸದ್ಭಾವನೆಯನ್ನು ಖಚಿತಪಡಿಸಿಕೊಳ್ಳಲು ಮದುವೆಯ ಸಭಾಂಗಣಗಳನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಿರಬೇಕು.
ಮದುವೆ ಮಂಟಪಗಳು(Marriage halls) ಸರಿಯಾದ ದಿಕ್ಕಿನಲ್ಲಿ ಸರಿಯಾದ ವಿಭಾಗವನ್ನು ಹೊಂದಿರಬೇಕು. ಮದುವೆ ಹಾಲ್‌ಗಳು ಪ್ರತಿಯೊಂದು ವಿಭಾಗವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬುದನ್ನು ವಾಸ್ತು ಹೇಳುತ್ತದೆ: