ಚಪ್ಪಲಿ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಮನೆಯಿಂದ ಹೊರಗೆ ಚಪ್ಪಲಿಯಿಲ್ಲದೆ ಯಾರೂ ಕಾಲಿಡರು. ಈಗಂತೂ ಮನೆಯೊಳಗೂ ಚಪ್ಪಲಿ ಹಾಕಿಕೊಂಡಿರುವವರಿದ್ದಾರೆ. ಈ ಚಪ್ಪಲಿಗೂ ವಾಸ್ತುವಿನಲ್ಲಿ ಸ್ಥಾನವಿದೆ ಎಂಬುದು ನಿಮಗೆ ಗೊತ್ತೇ? ಅಂದ ಹಾಗೆ, ಚಪ್ಪಲಿ ಹೇಗಿದ್ದರೆ ಧನಲಾಭ ಅಂತ ತಿಳ್ದಿದೀರಾ?
ಮನೆಯಲ್ಲಿ ಸಕಲ ಸೌಕರ್ಯವೂ ಇದೆ. ವಾಸ್ತು(Vastu)ವಿನಂತೆಯೇ ಮನೆ ನಿರ್ಮಿಸಲಾಗಿದೆ. ಹೇಳಿದ ಪೂಜೆ ಪುನಸ್ಕಾರ ಮಾಡಿಯಾಗಿದೆ. ಪ್ರತಿ ದಿನ ದೇವರ ಪೂಜೆಯೂ ನಡೆಯುತ್ತದೆ. ಹಾಗಿದ್ದೂ ಸಮಸ್ಯೆಗಳು(problems) ತಪ್ಪುತ್ತಿಲ್ಲ ಎಂದು ಕೊರಗುತ್ತಿದ್ದೀರಾ? ನೆಮ್ಮದಿ ಇಲ್ಲದೆ ಬಳಲುತ್ತಿದ್ದೀರಾ? ಬಹುಷಃ ನೀವು ನಿಮ್ಮ ಚಪ್ಪಲಿ(Slipper) ವಿಷಯದಲ್ಲಿ ಎಡವಿರಬಹುದು. ಚಪ್ಪಲಿ ವಿಷಯದ ವಾಸ್ತು ಸಲಹೆಗಳನ್ನು ಪರಿಗಣಿಸಿದರೆ ಸಾಕಷ್ಟು ಸಮಸ್ಯೆ ನಿವಾರಣೆಯಾಗುವುದಷ್ಟೇ ಅಲ್ಲ, ಧನಪ್ರಾಪ್ತಿಯೂ ಸಾಧ್ಯವಿದೆ. ಏಕೆಂದರೆ ಚಪ್ಪಲಿಗೆ ಶನಿ ಗ್ರಹ(Saturn)ದೊಂದಿಗೆ ಸಂಪರ್ಕ ಇರುತ್ತದೆ.
ಹೌದು, ಮನುಷ್ಯನ ದೈನಂದಿನ ಚಟುವಟಿಕೆಗಳು, ಆಗು ಹೋಗುಗಳು ನಿರ್ದಿಷ್ಟ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗೆಯೇ ನಾವು ಧರಿಸುವ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷ(Shani dosh)ದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದರಿಂದ ಸಾಕಷ್ಟು ಒಳಿತಾಗುತ್ತದೆ.
undefined
ಕೈ ನೋಡಿ ಭವಿಷ್ಯ(future prediction) ಹೇಳುವವರಿದ್ದಾರೆ, ಮುಖ ನೋಡಿ ಹೇಳುವವರಿದ್ದಾರೆ, ಜಾತಕ ನೋಡಿ ಹೇಳುವವರೂ ಇದ್ದಾರೆ. ಸಾಮುದ್ರಿಕಾ ಶಾಸ್ತ್ರದಲ್ಲಿ ದೇಹದ ಲಕ್ಷಣಗಳ ಆಧಾರದ ಮೇಲೆ ಭವಿಷ್ಯ ಹೇಳುತ್ತಾರೆ. ಹಾಗೆಯೇ ಅಂಗಾಲು ನೋಡಿ ಭವಿಷ್ಯ ಹೇಳುವವರೂ ಇದ್ದಾರೆ. ಕಾಲುಗಳ ಉದ್ದ, ಅಗಲ, ರೇಖೆಗಳು, ಬೆರಳ ಆಕಾರ, ರಚನೆ ಎಲ್ಲವನ್ನೂ ಅಭ್ಯಸಿಸಿ ಭವಿಷ್ಯ ಹೇಳಲಾಗುತ್ತದೆ. ಕಾಲುಗಳು ನಮ್ಮ ದೇಹದ ಬಹು ಮುಖ್ಯ ಅಂಗವಾಗಿದ್ದು ಅವುಗಳನ್ನು ಕಾಪಾಡುವಲ್ಲಿ ಚಪ್ಪಲಿಗಳ ಪಾತ್ರ ಹಿರಿದು. ಕಾಲಿನ ಆರೋಗ್ಯ(health) ಚೆನ್ನಾಗಿ ಕಾಪಾಡಿಕೊಂಡವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತವೆ ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದವರೇ ಹೆಚ್ಚು. ಆದರೆ ಆಗಲೂ ಮರದ ಚಪ್ಪಲಿಯನ್ನು ಧರಿಸಲು ಸಲಹೆ ನೀಡಲಾಗುತ್ತಿತ್ತು. ಹೀಗಾಗಿ, ಚಪ್ಪಲಿಗಳು ಹೇಗಿರಬೇಕು, ಅವುಗಳ ಗುಣಮಟ್ಟ(quality) ಹೇಗಿರಬೇಕು ಮತ್ತು ಯಾವಾಗ ಯಾವ ರೀತಿಯ ಚಪ್ಪಲಿಗಳನ್ನು ಧರಿಸಬೇಕೆಂಬ ಬಗ್ಗೆ ಶಾಸ್ತ್ರಗಳಲ್ಲಿ, ವಾಸ್ತುವಿನಲ್ಲಿ ಹೇಳಲಾಗಿದೆ. ಹಾಗಾದರೆ ಚಪ್ಪಲಿಯಿಂದ ಜೀವನ ಝಗಮಗಿಸಲು ನೀವು ಅನುಸರಿಸಬೇಕಾದ ವಾಸ್ತು ಮತ್ತು ಜ್ಯೋತಿಷ್ಯ ಸಲಹೆಗಳೇನು ನೋಡೋಣ.
Vastu Tips: ಪೊರಕೆ ಹೀಗಿಟ್ರೆ ದಾರಿದ್ರ್ಯ ಒಕ್ಕರಿಸುತ್ತೆ, ಎಚ್ಚರ!