Vastu tips: ಹೊಸ ಮನೆ ಪ್ರವೇಶ ಹೀಗಾದರೆ ಫಲ ಮಂಗಳಕರ..

Published : May 21, 2022, 11:55 AM IST
Vastu  tips: ಹೊಸ ಮನೆ ಪ್ರವೇಶ ಹೀಗಾದರೆ ಫಲ ಮಂಗಳಕರ..

ಸಾರಾಂಶ

ಹೊಸ ಮನೆಯನ್ನು ಪ್ರವೇಶ ಮಾಡುವಾಗ ಅನೇಕ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ವಾಸ್ತು ಶಾಸ್ತ್ರದ ಹೇಳುವ ಪ್ರಕಾರ ಹೊಸ ಮನೆ ಪ್ರವೇಶಕ್ಕೂ ಮುನ್ನ ಪಾಲಿಸಲೇಬೇಕಾದ ಕೆಲವಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದು ಉತ್ತಮ. ಅವು ಯಾವುವು ಎಂಬುದನ್ನು ತಿಳಿಯೋಣ.

ವಾಸವಿದ್ದ ಮನೆಯಿಂದ ಬೇರೆಡೆಗೆ ಹೋಗುವುದು ಬೇರೆ ಮನೆಗೆ ಶಿಫ್ಟ್ (Shift) ಆಗುವುದು ಎಂದರೆ ತುಂಬಾ ಕಷ್ಟದ ಕೆಲಸ. ಬಾಡಿಗೆ (Rental house) ಮನೆಯಲ್ಲಿದ್ದವರು ಕೆಲ ವರ್ಷಗಳ ನಂತರ ಅಥವಾ ಇತರ ಕಾರಣಗಳಿಂದ ಬೇರೆ ಬಾಡಿಗೆ ಮನೆಗೆ (House) ತೆರಳಬೇಕೆಂದಿದ್ದಾಗ ಅನೇಕ ವಿಷಯಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ (Vastu shastra) ಈ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ. ಹೊಸ ಮನೆಗೆ ಹೋಗುವ ಮುನ್ನ ಅಥವಾ ಗೃಹ ಪ್ರವೇಶಕ್ಕೂ ಮೊದಲು ವಾಸ್ತು ಶಾಸ್ತ್ರ ಹೇಳುವ ಈ ವಿಷಯಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಮನೆಯಲ್ಲಿ ನೆಮ್ಮದಿ, ಸುಖ, ಶಾಂತಿ ನೆಲೆಸಿರಬೇಕೆಂದರೆ, ಕೆಲವೊಂದು ವಾಸ್ತು ಉಪಾಯಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ..

  • ಹೊಸ ಸ್ವಂತ ಮನೆಯೇ ಆಗಿರಲಿ ಅಥವಾ ಬಾಡಿಗೆ ಮನೆ ಆಗಿರಲಿ, ಅದಕ್ಕೆ ಹೋಗುವ ಮುನ್ನ ವಾರ (Day), ತಿಥಿ (Tithi), ನಕ್ಷತ್ರ (Star) ಮತ್ತು ದಿನವನ್ನು ನೋಡಿಕೊಂಡು ಹೋಗಬೇಕು. ಗೃಹ ಪ್ರವೇಶಕ್ಕೂ ಮುನ್ನ ಒಳ್ಳೆ ಮುಹೂರ್ತವನ್ನು (Muhurtha) ಸಹ ನೋಡಬೇಕಾಗುತ್ತದೆ. ಅದೇ ಮುಹೂರ್ತದಲ್ಲಿ ಮನೆಗೆ ಹೋಗುವುದು ಒಳ್ಳೆಯದು. 
  • ಮಾಘ, ಪಾಲ್ಗುಣ, ವೈಶಾಖ ಮತ್ತು ಜೇಷ್ಠ ಮಾಸಗಳು ಹೊಸ ಮನೆಗೆ ಹೋಗಲು ಅತ್ಯಂತ ಶುಭ ಮಾಸಗಳೆಂದು (Month) ಹೇಳಲಾಗುತ್ತದೆ.  ಆಷಾಢ, ಶ್ರಾವಣ, ಭಾದ್ರಪದ, ಅಶ್ವಿನಿ ಮತ್ತು ಪುಷ್ಯ ಮಾಸಗಳು ಗೃಹಪ್ರವೇಶಕ್ಕೆ ಶುಭವಲ್ಲ ಎಂದು ಹೇಳಲಾಗುತ್ತದೆ. 


ಇದನ್ನು ಓದಿ: ಶನಿ ಜಯಂತಿಯಂದು ಸರ್ವಾರ್ಥ ಸಿದ್ಧಿ ಯೋಗ

  • ಮಂಗಳವಾರ (Tuesday) ಗೃಹ ಪ್ರವೇಶಕ್ಕೆ ಶುಭವಲ್ಲ. ವಿಶೇಷ ಪರಿಸ್ಥಿತಿಗಳಲ್ಲಿ ಭಾನುವಾರ ಮತ್ತು ಶನಿವಾರವನ್ನು ಸಹ ಗೃಹಪ್ರವೇಶಕ್ಕೆ ಶುಭ ದಿನವೆಂದು ಹೇಳಲಾಗುತ್ತದೆ. ವಾರದ ಉಳಿದೆಲ್ಲಾ ದಿನಗಳು ಹೊಸ ಮನೆಗೆ ಹೋಗಲು ಶುಭ ಎಂದೇ ಹೇಳಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯನ್ನು ಹೊರತುಪಡಿಸಿ ಉಳಿದ 2, 3, 5, 7, 10, 11, 12 ಮತ್ತು 13 ತಿಥಿಯು ಪ್ರವೇಶಕ್ಕೆ ಶುಭ ಎಂದು ಹೇಳಲಾಗುತ್ತದೆ. 
  • ಪೂಜೆಗೆ ಬೇಕಾಗುವ ಸಾಮಗ್ರಿಗಳು (Pooje materials) : ಕಲಶ, ತೆಂಗಿನಕಾಯಿ, ದೀಪ, ಅಕ್ಷತೆ, ಹೂವು, ಶುದ್ಧ ಜಲ, ಕುಂಕುಮ, ಧೂಪ, ಆರತಿ, 5 ಮಂಗಳ ವಸ್ತುಗಳು, ಮಾವಿನ ಎಲೆ, ಬೆಲ್ಲ, ಅಕ್ಕಿ, ಹಾಲು ಇತ್ಯಾದಿ ವಸ್ತುಗಳ ಅಗತ್ಯವಿರುತ್ತದೆ. 
  • ಮಂಗಳ ಕಲಶದ ಜೊತೆಗೆ ಹೊಸ ಮನೆಯನ್ನು ಪ್ರವೇಶಿಸಬೇಕು. ಮಂಗಳ ಕಲಶದಲ್ಲಿ ಶುದ್ಧ ಜಲವನ್ನು (Water) ತುಂಬಿ ಅದರ ಮೇಲೆ ಎಂಟು ಎಲೆಗಳಿರುವ ಮಾವಿನ ಸೊಪ್ಪನ್ನು ಇಟ್ಟು ಅದರ ಮೇಲೆ ತೆಂಗಿನ ಕಾಯಿಯನ್ನು (Coconut) ಇಡಬೇಕು. 
  • ಕಲಶ ಅಥವಾ ತೆಂಗಿನಕಾಯಿಯ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು (Swasthik) ಬರೆಯಬೇಕು. 
  • ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ 5 ಮಂಗಳ ವಸ್ತುಗಳಾದ ತೆಂಗಿನಕಾಯಿ ಅರಿಶಿಣ, ಅಕ್ಕಿ, ಬೆಲ್ಲ ಮತ್ತು ಹಾಲನ್ನು (Milk) ತೆಗೆದುಕೊಳ್ಳಬೇಕು. ಮನೆಯನ್ನು ರಂಗೋಲಿ ಮತ್ತು ಹೂವುಗಳಿಂದ ಸಿಂಗರಿಸಬೇಕು.
  • ಪ್ರಥಮ ಪೂಜಿತ ಗಣೇಶನ ಮೂರ್ತಿ (Ganesha idol) ದಕ್ಷಿಣಾವರ್ತಿ ಶಂಖ ಮತ್ತು ಶ್ರೀ ಯಂತ್ರವನ್ನು ಹೊಸ ಮನೆ ಪ್ರವೇಶಿಸುವಾಗ ತೆಗೆದುಕೊಂಡು ಹೋಗಬೇಕು. 
  • ದೇವರ ಸ್ತೋತ್ರಗಳನ್ನು ಮತ್ತು ಮಂತ್ರಗಳನ್ನು ಪಠಿಸುತ್ತಾ ಮನೆಯನ್ನು ಪ್ರವೇಶಿಸಬೇಕು.
  • ಮನೆಯ ಯಜಮಾನ ಬಲಗಾಲಿಟ್ಟು ಮೊದಲು ಮನೆಯನ್ನು ಪ್ರವೇಶಿಸಿದ ನಂತರ ಪತ್ನಿಯು ಮನೆ ಪ್ರವೇಶಿಸಬೇಕು. 
  • ಗಣಪತಿಯ್ನು ಧ್ಯಾನಿಸುತ್ತಾ, ಗಣೇಶನ ಮಂತ್ರಗಳನ್ನು ಪಠಿಸುತ್ತಾ ಗಣೇಶನ ವಿಗ್ರಹವನ್ನು ಈಶಾನ್ಯ ಮೂಲೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಇಡಬೇಕು ಮತ್ತು ಅಲ್ಲೇ ಕಲಶವನ್ನು ಸ್ಥಾಪಿಸಬೇಕು.
  • ಅಡುಗೆ ಮನೆಯಲ್ಲಿ (Kitchen) ನೀರಿಡುವ ಜಾಗ ಸ್ಟೌ ಮತ್ತು ಸ್ಟೋರ್ ರೂಮ್ ಗಳಿಗೂ ಪೂಜೆ ಸಲ್ಲಿಸಬೇಕು. ಸ್ಟೌ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು. 

ಇದನ್ನು ಓದಿ: ಪತಿಯ ಆಯಸ್ಸು ಹೆಚ್ಚಿಸೋ ವಟ ಸಾವಿತ್ರಿ ವ್ರತ; ಆಚರಣೆ ಹೇಗೆ?

  • ಅಡುಗೆ ಮನೆಯಲ್ಲಿ ಬೆಲ್ಲ (Jaggery) ಮತ್ತು ಹಸಿರು ತರಕಾರಿಗಳನ್ನು ಇಡುವುದು ಶುಭ ಎಂದು ಹೇಳಲಾಗುತ್ತದೆ.
  • ಆ ದಿನ ಸ್ಟೌ (Stove) ಹಚ್ಚಿದಾಗ ಮೊದಲು ಹಾಲನ್ನು ಇಟ್ಟು ಉಕ್ಕಿಸಬೇಕು. 
  • ಸಿಹಿ (Sweet) ಮಾಡಿ ದೇವರಿಗೆ ನೈವೇದ್ಯ ಮಾಡಬೇಕು ಮತ್ತು ಗೋಗ್ರಾಸ ಕೊಡಬೇಕು
  • ಬ್ರಾಹ್ಮಣರಿಗೆ ಭೋಜನ (Meals) ನೀಡಬೇಕು. ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ನೀಡಬೇಕು. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ. ಅಷ್ಟೆ ಅಲ್ಲದೆ ಯಾವುದಾದರೂ ದೋಷವಿದ್ದರೂ ನಿವಾರಣೆಯಾಗುತ್ತದೆ.

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು