ದಿರಿಸು ಖರೀದಿಸೋ ದಿನದಿಂದ ಧರಿಸೋ ತನ್ಕ Vastu ಏನನ್ನುತ್ತೆ ಕೇಳಿ..

By Reshma Rao  |  First Published Jun 13, 2022, 12:02 PM IST

ನೀವು ಬಟ್ಟೆ ಖರೀದಿಸೋ ದಿನದಿಂದ ಹಿಡಿದು ಧರಿಸುವ ರೀತಿ ತನಕ ಎಲ್ಲವೂ ನಿಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. 


ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ, ನಿಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಇರುವ ಎಲ್ಲದರ ದಿಕ್ಕು ಮತ್ತು ಸ್ಥಳದ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ಹೇಳಲಾಗುತ್ತದೆ. ಅದೇ ರೀತಿ, ನೀವು ಧರಿಸುವ ಬಟ್ಟೆಗಳು(cloths) ನಿಮ್ಮ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಾದರೆ ವಾಸ್ತು ಪ್ರಕಾರ ಬಟ್ಟೆ ಖರೀದಿಸುವುದರಿಂದ ಹಿಡಿದು ಧರಿಸುವವರೆಗೆ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯೋಣ.

1. ಬಟ್ಟೆ ಖರೀದಿಸುವಾಗ ಏನು ನೆನಪಿನಲ್ಲಿಟ್ಟುಕೊಳ್ಳಬೇಕು?
ಇಂದಿನ ದಿನಗಳಲ್ಲಿ ಜನರು ಯಾವಾಗ ಬೇಕಾದರೂ ಆನ್‌ಲೈನ್‌ನಲ್ಲಿ ಏನನ್ನೂ ಖರೀದಿಸಬಹುದು. ಹೀಗಾಗಿ, ಜನರು ಮನಸ್ಸಿಗೆ ಬಂದಾಗ ಯಾವುದೇ ದಿನ ಮತ್ತು ಯಾವುದೇ ಸಮಯದಲ್ಲಿ ಏನಾದರೂ ಆರ್ಡರ್ ಮಾಡುತ್ತಾರೆ. ಅಥವಾ ಅವರು ಯಾವಾಗ ಬೇಕಾದರೂ ಮಾರುಕಟ್ಟೆ(market)ಗೆ ಹೋಗುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಬಟ್ಟೆಗಳನ್ನು ಖರೀದಿಸುವ ಸಮಯ ಮತ್ತು ದಿನವು ನಿಮ್ಮ ಅದೃಷ್ಟ(luck)ದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಬಟ್ಟೆ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಶುಕ್ರವಾರ(Friday) ಹೊಸ ಬಟ್ಟೆಗಳನ್ನು ಖರೀದಿಸಲು ಮಂಗಳಕರವಾಗಿದೆ. ಅಂತೆಯೇ ಶನಿವಾರ(Saturday) ಬಟ್ಟೆ ಶಾಪಿಂಗ್‌ಗೆ ಉತ್ತಮ ದಿನವಲ್ಲ. 

Tap to resize

Latest Videos

undefined

ಸೂರ್ಯ ಗೋಚಾರ ಜೂನ್ 2022: ಹೊಳೆಯಲಿದೆ ಈ ನಾಲ್ಕು ರಾಶಿಗಳ ವೃತ್ತಿಜೀವನ

2. ಬಟ್ಟೆಗಳ ಬಣ್ಣವೂ ಮುಖ್ಯ
ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಉತ್ತೇಜಿಸಲು, ಶುಕ್ರನಿಗೆ ಸಂಬಂಧಿಸಿದ ಬಿಳಿ(White) ಬಣ್ಣದ ಬಟ್ಟೆಗಳನ್ನು ಹೆಚ್ಚು ಧರಿಸುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ನಕಾರಾತ್ಮಕ ಯೋಚನೆಗಳು ಕಡಿಮೆಯಾಗುತ್ತವೆ. ಇದಲ್ಲದೆ, ಗುರು(Jupiter) ಗ್ರಹಕ್ಕೆ ಸಂಬಂಧಿಸಿದ ಹಳದಿ(yellow) ಬಟ್ಟೆಗಳನ್ನು ಧರಿಸಿದರೆ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ಎರಡು ಗ್ರಹಗಳಾದ ಶುಕ್ರ ಮತ್ತು ಗುರುವನ್ನು ನಿಮ್ಮ ಜೀವನದಲ್ಲಿ ಪ್ರಗತಿ, ಸಂಪತ್ತು, ಸಂತೋಷ ಮತ್ತು ಸಮೃದ್ಧಿ, ಐಶ್ವರ್ಯ, ಸಂತೋಷದ ಅಂಶಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಇವನ್ನು ಉತ್ತಮ ರೀತಿಯಲ್ಲಿಟ್ಟುಕೊಳ್ಳುವುದು ಮುಖ್ಯ. 

3. ಕೊಳಕು ಬಟ್ಟೆಗಳನ್ನು ಧರಿಸಬೇಡಿ
ಅನೇಕ ಬಾರಿ ಜನರು ಕೆಲವು ದಿನಗಳವರೆಗೆ ನಿರಂತರವಾಗಿ ಧರಿಸಿದ ಬಟ್ಟೆಗಳನ್ನೇ ಧರಿಸುತ್ತಾರೆ, ಇದು ವಾಸ್ತು ಪ್ರಕಾರ ಸರಿಯಲ್ಲ. ಏಕೆಂದರೆ ಕೊಳಕು ಬಟ್ಟೆಗಳನ್ನು(Dirty cloths) ಧರಿಸುವುದು ನಿಮ್ಮ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಕೊಳಕು ಬಟ್ಟೆಗಳನ್ನು ತೊಳೆಯದೆ ಅದನ್ನೇ ಧರಿಸಿ ಪೂಜೆ ಮಾಡುವುದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದಲೂ ಸರಿಯಲ್ಲ. ಹೀಗಾಗಿ, ಪ್ರತಿ ಬಾರಿ ಬಟ್ಟೆ ಧರಿಸಿದಾಗಲೂ ಅದನ್ನು ಸ್ವಚ್ಛಗೊಳಿಸಬೇಕು. ಇದಲ್ಲದೆ ಹರಿದ ಬಟ್ಟೆಗಳನ್ನು ಕೂಡಾ ಧರಿಸಬೇಡಿ. ಬೇಕಿದ್ದರೆ ಅದನ್ನು ಹೊಲಿಗೆ ಹಾಕಿಸಿ ಇಲ್ಲವೇ ಅದರಲ್ಲಿ ಬೇರೆ ಕರಕುಶಲ ಕಲೆ ಮಾಡಿ ಉಪಯೋಗಿಸಿ. ಆದರೆ, ಹರಿದಂತೆಯೇ ಬಟ್ಟೆ ಧರಿಸಬೇಡಿ. 

Zodiac Sign: ಈ ರಾಶಿಗಳ ಜನ ಸಂಗಾತಿಯನ್ನ ಕೊಂಕಿಲ್ಲದೆ ಪ್ರೀತಿಸ್ತಾರೆ

4. ಪರದೆ, ಬೆಡ್‌ಶೀಟ್‌ಗಳು
ಮನೆಯಲ್ಲಿನ ಕಿಟಕಿ ಬಾಗಿಲುಗಳ ಪರದೆಗಳು, ಬೆಡ್‌ಶೀಟ್‌ಗಳು, ಚಾದರ ಹೊದಿಕೆಗಳನ್ನು ಪ್ರತಿ 15-20 ದಿನಕ್ಕೊಮ್ಮೆ ತೊಳೆಯಿರಿ. ಗಲೀಜಾದ ಈ ಬಟ್ಟೆಗಳು ಮನೆಗೆ ನಕಾರಾತ್ಮಕತೆ ತರುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!